ಇಂದು ಸಿಎಂ ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದ ಎರಡನೇ ಬಜೆಟ್ ಮಂಡನೆಯನ್ನು ಮಾಡಿದ್ಧಾರೆ. ಸತತ 3 ಗಂಟೆಗಳ ಕಾಲ ಸುದೀರ್ಘ ಬಜೆಟ್ ಪ್ರತಿಯನ್ನು ಓದಿದ್ಧಾರೆ.
2019-20ನೇ ಸಾಲಿನ ಸುಮಾರು ₹2 ಲಕ್ಷದ 36 ಸಾವಿರ ಕೋಟಿ ರೂಪಾಯಿಯ ಭಾರೀ ಪ್ರಮಾಣದ ಬಜೆಟ್ ಮಂಡನೆ ಮಾಡಿದರು. ವಿವಿಧ ಕ್ಷೇತ್ರಗಳ ಅಭಿವೃದ್ದಿ ಸೇರಿದಂತೆ, ರೈತರ ಪರವಾಗಿ ಒಂದಷ್ಟು ಯೋಜನೆಗಳನ್ನು ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಬಜೆಟ್ನ ಹೈಲೈಟ್ಸ್ ಇಲ್ಲಿವೆ.
- ಪ್ರತಿ ಲೀಟರ್ ಹಾಲಿಕೆ ನೀಡುತ್ತಿರುವ 5 ರೂ. ಪ್ರೋತ್ಸಾಹ ಧನ 6 ರೂಪಾಯಿಗೆ ಏರಿಕೆ.
- ಬಿಯರ್, ಡ್ರಾಟ್ ಬಿಯರ್, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಹಾಗೂ ಲೋ ಆಲ್ಕೊಹಾಲಿಕ್ ಬಿವೆರೇಜಸ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳ.
- ಮಲೆನಾಡು, ಕರಾವಳಿಯಲ್ಲಿ ಭತ್ತದ ಉತ್ಪಾದನೆ ಹೆಚ್ಚಿಸಲು ಕರಾವಳಿ ಪ್ಯಾಕೇಜ್ ಹೆಕ್ಟೇರ್ಗೆ 7 ಸಾವಿರ ಪ್ರೋತ್ಸಾಹ ಧನ, 5 ಕೋಟಿ ಅನುದಾನ
- ಸಿರಿಧಾನ್ಯ ಬೆಳೆಗಾರರಿಗೆ ರೈತ ಸಿರಿ ಎಂಬ ಹೊಸ ಯೋಜನೆ, 10 ಕೋಟಿ ಅನುದಾನ
- ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ಜನ್ಮಸ್ಥಳವಾದ ರಾಮನಗರದ ಬಾಣಂದೂರು ಗ್ರಾಮ ಅಭಿವೃದ್ಧಿಗೆ 25 ಕೋಟಿ.
- ಡಾ. ಶಿವಕುಮಾರ ಸ್ವಾಮೀಜಿ ಹುಟ್ಟೂರು ವೀರಾಪುರವನ್ನು ಮಾದರಿ ಗ್ರಾಮವಾಗಿ ಅಭಿವೃದ್ಧಿಪಡಿಸಲು 25 ಕೋಟಿ.
- ಮಾನಸ ಸರೋವರ ಯಾತ್ರಿಗಳ ಪ್ರೋತ್ಸಾಹ ಧನ ₹30 ಸಾವಿರಕ್ಕೆ ಏರಿಕೆ.
- ರಾಮನಗರದ ಹಾರೋಹಳ್ಳಿ, ಚಿಕ್ಕಬಳ್ಳಾಪುರದ ಚೇಳೂರು, ಬಾಗಲಕೋಟೆಯ ತೇರದಾಳ, ಚಿಕ್ಕಮಗಳೂರು ಜಿಲ್ಲೆಯ ಕಳಸ ಹೊಸ ತಾಲೂಕುಗಳಾಗಿ ಘೋಷಣೆ.
- ಸಿಲ್ಕ್ ಬೋರ್ಡ್ನಿಂದ ಕೆ.ಆರ್ ಪುರಂಗೆ ಹೊರ ವರ್ತುಲ ರಸ್ತೆ 16579 ಕೋಟಿ ಮೀಸಲು
- ಯಶವಂತರಪುರ ರೈಲ್ವೆ- ಮೆಟ್ರೋ ನಿಲ್ದಾಣಗಳ ನಡುವೆ ಪಾದಚಾರಿ ಸೇತುವೆ
- ಮೆಟ್ರೋ ಹಾಗೂ ಬಸ್ಗಳಲ್ಲಿ ಬಳಸಬಹುದಾದ ಕಾರ್ಡ್ಗಳ ಆರಂಭ. 10 ಮೆಟ್ರೋ ನಿಲ್ದಾಣಗಳಲ್ಲಿ ದ್ವಿಚಕ್ರವಾಹನಗಳಿಗೆ ಚಾರ್ಜಿಂಗ್ ಮಾಡುವ ವ್ಯವಸ್ಥೆ.
- ಗೊರಗುಂಟೆಪಾಳ್ಯದಲ್ಲಿ ಅಂಡರ್ಪಾಸ್ ನಿರ್ಮಾಣ.
- ಪೆಟ್ರೋಲ್ ಆಟೋಗಳನ್ನು ಎಲೆಕ್ಟ್ರಿಕ್ ಆಟೋಗಳಾಗಿ ಪರಿವರ್ತಿಸಲು ಸಹಾಯಧನ.
- ಮೇಲುಕೋಟೆ ಅಭಿವೃದ್ಧಿಗೆ 5 ಕೋಟಿ ಮೀಸಲು
- ಬೆಂಗಳೂರು ಆಟೋ ಟ್ಯಾಕ್ಸಿ ಚಾಲಕರಿಗೆ ಬಾಡಿಗೆ ಆಧಾರದ ಮೇಲೆ ವಸತಿ ಕಲ್ಪಿಸಲು ಸಾರಥಿ ಸೂರು ಯೋಜನೆ, 50 ಕೋಟಿ ಮೀಸಲು.
- ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ 5 ಮೊರಾರ್ಜಿ ದೇಸಾಯಿ ಮುಸ್ಲಿಂ ಹೆಣ್ಣುಮಕ್ಕಳ ವಸತಿ ಶಾಲೆ.
- ಮಾತೃಶ್ರೀ ಯೋಜನೆಯಡಿ ಸಹಾಯಧನ 2 ಸಾವಿರಕ್ಕೆ ಹೆಚ್ಚಳ.
- ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 500ಕ್ಕೆ ಹೆಚ್ಚಳ, ಸಹಾಯಕಿಯರ ಗೌರವಧನ 250ಕ್ಕೆ ಹೆಚ್ಚಳ. 2019ರ ನವೆಂಬರ್ 1ರಿಂದ ಜಾರಿಗೆ.
- 60 ಕೋಟಿ ವೆಚ್ಚದಲ್ಲಿ ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ.
- ಬೆಂಗಳೂರಿನಲ್ಲಿ ಸಂವಿಧಾನ ಮ್ಯೂಸಿಯಂ ಸ್ಥಾಪನೆ 20 ಕೋಟಿ ಮೀಸಲು.
- ಅಗ್ನಿಶಾಮಕ ಇಲಾಖೆಯಿಂದ ಗಗನಚುಂಬಿ ಕಟ್ಟಡಗಳ ಬೆಂಕಿ ಅವಘಡ ತಡೆಯಲು 90 ಮೀಟರ್ ಎತ್ತರ ತಲುಪಬಲ್ಲ ಏರಿಯಲ್ ಲ್ಯಾಡರ್ ಪ್ಲಾಟ್‍ಫಾರ್ಮ್ ವಾಹನ ಖರೀದಿ.
- ಬೀದರ್ ಮತ್ತು ವಿಜಯಪುರಗಳಲ್ಲಿ ತಲಾ 1000 ಬಂಧಿಗಳ ಸಾಮರ್ಥ್ಯವುಳ್ಳ ಪ್ರತ್ಯೇಕ ವಿಶಿಷ್ಟ ಕೇಂದ್ರ ಕಾರಾಗೃಹ ಹಾಗೂ ಅರಸೀಕೆರೆಯಲ್ಲಿ 200 ಬಂಧಿ ಸಾಮರ್ಥ್ಯವುಳ್ಳ ಉಪಕಾರಾಗೃಹ ನಿರ್ಮಾಣ. ಈ ಆಯವ್ಯಯದಲ್ಲಿ 30 ಕೋಟಿ ರೂ. ಅನುದಾನ.
- ಅಪರಾಧ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಆಡಿ Drone Surveillance System ಜಾರಿ
- ಪೊಲೀಸ್ ಕಾಲೋನಿಗಳಲ್ಲಿ ಮೂಲಸೌಲಭ್ಯ ಒದಗಿಸಲು 20 ಕೋಟಿ ರೂ. ಅನುದಾನ
- ಬೆಂಗಳೂರು ನಗರದಲ್ಲಿ 8 ಹೊಸ ಸೈಬರ್ ಎಕಾನಾಮಿಕ್ ನಾರ್ಕೋಟಿಕ್ ವಿಂಗ್ ಪ್ರಾರಂಭಿಸಲು 4 ಕೋಟಿ ರೂ. ಅನುದಾನ.
- ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ದತ್ತಿ ಹಾಗೂ ಹಿರಿಯ ಪತ್ರಕರ್ತರ ಕ್ಷೇಮನಿಧಿ ದತ್ತಿಗಳಿಗೆ ತಲಾ 2 ಕೋಟಿ ರೂ. ಹೆಚ್ಚುವರಿ ಅನುದಾನ.
- ತುಳು, ಕೊಡವ ಮತ್ತು ಕೊಂಕಣಿ ಭಾಷಾ ಚಲನಚಿತ್ರಗಳನ್ನ ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮ; 1 ಕೋಟಿ ರೂ. ಅನುದಾನ.
- ಗಾಂಧೀಜಿ 150ನೇ ಜನ್ಮದಿನ ಆಚರಣೆಗೆ 5 ಕೋಟಿ ರೂ. ವಿಶೇಷ ಅನುದಾನ
- ಪಣಂಬೂರು ಮತ್ತು ಸಸಿಹಿತ್ಲುವಿನಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ 7 ಕೋಟಿ ರೂ. ಅನುದಾನ.
- ಹಂಪಿಯಲ್ಲಿ ‘ಹಂಪಿ ವ್ಯಾಖ್ಯಾನ ಕೇಂದ್ರ’ ಹಾಗೂ ವಿಜಯಪುರದಲ್ಲಿ ‘ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರ’ವನ್ನು ಸ್ಥಾಪಿಸಲು ತಲಾ 1 ಕೋಟಿ ರೂ. ಅನುದಾನ
- ಪ್ರವಾಸಿಗರನ್ನು ಆಕರ್ಷಿಸಲು ‘ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ’ ಆಯೋಜನೆಗೆ ₹2 ಕೋಟಿ ಅನುದಾನ.
- ವಿಶ್ವ ವಿಖ್ಯಾತ ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಕೆಎಸ್‍ಟಿಡಿಸಿ ವತಿಯಿಂದ ಲಂಡನ್ ಬಿಗ್ ಬಸ್ ಮಾದರಿಯ 06 ಡಬಲ್ ಡೆಕ್ಕರ್ ತೆರೆದ ಬಸ್ ಸೇವೆ ಪ್ರಾರಂಭ; 5 ಕೋಟಿ ರೂ. ಅನುದಾನ.
- ಬಾದಾಮಿಯನ್ನು ವಿಶ್ವವಿಖ್ಯಾತ ಪ್ರವಾಸಿ ತಾಣವನ್ನಾಗಿ ಮತ್ತು ಕರಕುಶಲ ಮಾರುಕಟ್ಟೆಯನ್ನಾಗಿ ಅಭಿವೃದ್ಧಿ ಪಡಿಸಲು 25 ಕೋಟಿ ರೂ. ಅನುದಾನ.
- ಸರ್ಕಾರದ ಯೋಜನೆಗಳ ಪ್ರಚಾರ ಕಾರ್ಯಗಳನ್ನು ಸಮರ್ಥವಾಗಿ ಕೈಗೊಳ್ಳಲು ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣ ಘಟಕವನ್ನು ಪಾರಂಭಿಸಲು ಕ್ರಮ,
- ಒಳಾಡಳಿತ ಇಲಾಖೆಯ ಪೊಲೀಸ್ ಪೇದೆಗಳಿಗೆ ನೀಡಲಾಗುವ ಕಷ್ಟ ಪರಿಹಾರ ಭತ್ಯೆ 2,000 ರೂ.ಗಳಿಗೆ ಹೆಚ್ಚಳ; 103 ಕೋಟಿ ರೂ. ಅನುದಾನ.
- ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ ದಾವಣಗೆರೆ, ಹೊಸಕೋಟೆ ಮತ್ತು ಮದ್ದೂರಿನಲ್ಲಿ ಸ್ವಯಂಚಾಲಿತ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರಗಳ ಸ್ಥಾಪನೆ
- ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ 6,500 ಕೋಟಿ ರೂ. ಅನುದಾನ ವಾಣಿಜ್ಯ ಬ್ಯಾಂಕುಗಳಿಗೆ ಹಾಗೂ 6,150 ಕೋಟಿ ರೂ. ಸಹಕಾರಿ ಕ್ಷೇತ್ರಕ್ಕೆ ನಿಗದಿ. ಸಹಕಾರ ಬ್ಯಾಂಕ್‍ಗಳ ಸಾಲ ಮನ್ನಾ ಪ್ರಕ್ರಿಯೆ ಜೂನ್-2019 ರೊಳಗೆ ಪೂರ್ಣ; ವಾಣಿಜ್ಯ ಬ್ಯಾಂಕುಗಳ ಸಾಲ ಯೋಜನೆಯೂ 2019-20 ರಲ್ಲಿ ಪೂರ್ಣ
- ಕಾಂಪೀಟ್ ವಿತ್ ಚೈನಾ ಯೋಜನೆಗೆ 100 ಕೋಟಿ.
- 2019-20ರಲ್ಲಿ ಬೀದರ್ ನಾಗರಿಕ ವಿಮಾನ ನಿಲ್ದಾಣ ಕಾರ್ಯಾಚರಣೆ ಪ್ರಾರಂಭಿಸಲು ಕ್ರಮ.
- ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ “ಶಾಲಾ ಸಂಪರ್ಕ ಸೇತು” ಯೋಜನೆಯಡಿ 1,317 ಕಿರು ಸೇತುವೆಗಳನ್ನು ಪೂರ್ಣಗೊಳಿಸಲು ಕ್ರಮ.
- ರೈತರಿಗೆ ಗುಣಮಟ್ಟದ ವಿದ್ಯುಚ್ಛಕ್ತಿ ಒದಗಿಸಲು 40,000 ಹೊಸ ಟ್ರಾನ್ಸ್ಫಾರ್ಮರ್ ಅಳವಡಿಕೆ.
- ರೈತರಿಗೆ ಉಚಿತವಾಗಿ ನೀಡಲಾಗುತ್ತಿದ್ದ ನೀರಾವರಿ ಪಂಪ್‍ಸೆಟ್, ಭಾಗ್ಯ ಜ್ಯೋತಿ, ಕುಟೀರಜ್ಯೋತಿ, ಗ್ರಾಹಕರ ಸಹಾಯಧನ 11,250 ಕೋಟಿ ರೂ.ಗಳಿಗೆ ಹೆಚ್ಚಳ
- ಮುಜರಾಯಿ ಇಲಾಖೆ ಜಮೀನು ಒತ್ತುವರಿ ತೆರವಿಗೆ ಸರ್ವೆ ಕಾರ್ಯ.
- ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ.
- ಕಲಬುರಗಿ, ವಿಜಯಪುರ, ದಕ್ಷಿಣ ಕನ್ನಡ, ಮೈಸೂರು, ಗದಗ, ದಾವಣಗೆರೆ, ಧಾರವಾಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಡ್ರೋನ್‍ಗಳ ಮೂಲಕ ರೀ-ಸರ್ವೆ ಕಾರ್ಯ
- ಅರ್ಕಾವತಿ ದಕ್ಷಿಣ ಪಿನಾಕಿನಿ ನದಿಗಳಲ್ಲಿ ಮತ್ತೆ ನೀರು ಹರಿಸುವ ಯೋಜನೆ. ನೀರು ಕೊಯ್ಲು ಮಾಡುವ ಕಾರ್ಯಕ್ರಮ.
- ಬೆಂಗಳೂರಿನಲ್ಲಿ 5 ಲಕ್ಷ ಬೀದಿದೀಪಗಳಲ್ಲಿ ಎಲ್ಇಡಿ ಬೀದಿದೀಪಗಳಾಗಿ ಪರಿವರ್ತನೆ. ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆಯನ್ನ ಪಾದಚಾರಿ ರಸ್ತೆಯನ್ನಾಗಿ ಬದಲಾಯಿಸುವ ಉದ್ದೇಶ.
- ಬಿಬಿಎಂಪಿ ಪ್ರದೇಶಗಳಲ್ಲಿ ನವ ಬೆಂಗಳೂರು ಕ್ರಿಯಾ ಯೋಜನೆ 2300 ಕೋಟಿ ಮೀಸಲು
- ಬಿಎಂಟಿಸಿ ಬಸ್ ಸಂಖ್ಯೆ ಹೆಚ್ಚಿಸಲು ಅನುದಾನ ಹೆಚ್ಚಳ. 50 ಕೋಟಿ ಅನುದಾನ
- ಹೈ-ಕ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ 1500 ಕೋಟಿ.
- ಅನ್ನಭಾಗ್ಯ ಯೋಜನೆಗೆ 3700 ಕೋಟಿ ಅನುದಾನ.
- 13 ರಿಂದ 15 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ಮಿನಿ ಒಲಂಪಿಕ್ 2019 ಆಯೋಜನೆ
- ಜಾನಪದ ಜಾತ್ರೆ ಕಾರ್ಯಕ್ರಮಕ್ಕೆ ಮರುಚಾಲನೆ
- ನಾಡಪ್ರಭು ಕೇಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ.
- ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಚಾಲಕರ ದಿನಾಚರಣೆ. ಪ್ರತಿ ವರ್ಷ 10 ಚಾಲಕರಿಗೆ 25 ಸಾವಿರ ಪುರಸ್ಕಾರ
- ಕ್ರೈಸ್ತ ಸಮುದಾಯ ಅಭಿವೃದ್ಧಗೆ 200 ಕೋಟಿ.
- 20 ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ 60ಕ್ಕೆ ಹೆಚ್ಚಳ.
- ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ.
- ಬೆಂಗಳೂರು ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ 300 ಕೋಟಿ.
- ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ಅನುದಾನ. ಕೋಲಾರದ ಮಾಲೂರಿನಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪ ಕೇಂದ್ರ ಸ್ಥಾಪನೆ.
- ಎಸ್ಸಿ ಎಸ್ಟಿ ಅಭಿವೃದ್ಧಿಗೆ 30,445 ಕೋಟಿ ಅನುದಾನ.
- ನಗರಪ್ರದೇಶಗಳಲ್ಲಿ 100 ಹೊಸ ಅಂಗನವಾಡಿ ಕೇಂದ್ರಗಳ ಸ್ಥಾಪನೆ. 100 ಅಂಗನವಾಡಿ ಕಟ್ಟಡಗಳ ದುರಸ್ಥಿ ಕಾಮಗಾರಿ.
- ಹಾಸನದಲ್ಲಿ ತಾಂತ್ರಿಕ ವಿವಿ ಸ್ಥಾಪನೆ.
- ಆಧಾರ್ ಆಧರಿತ ಡಿಜಿಟಲ್ ಅಂಕಪಟ್ಟಿ. ಆನ್ಲೈನ್ ಮೂಲಕ ಪದವಿ ಪ್ರಮಾಣಪತ್ರ.
- 4 ವರ್ಷಗಳಲ್ಲಿ ಹೋಬಳಿ ಮಟ್ಟದಲ್ಲಿ 1 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ.
- ಶಾಲೆಗಳ ಮೂಲಭೂತ ಸೌಕರ್ಯ ಆಧುನೀಕರಣ, 5 ಸಾವಿರ ಶಾಲಾ ಕೊಠಡಿಗಳ ಉನ್ನತೀಕರಣ, ಕಟ್ಟಡಗಳ ನಿರ್ವಹಣೆಗೆ ಎಸ್ಟೇಟ್ ಅಧಿಕಾರಿ ನೇಮಕ . ಗುರುಚೇತನಾ ಕಾರ್ಯಕ್ರಮದಡಿ ಶಿಕ್ಷಕರಿಗೆ ಸಾಮರ್ಥ್ಯ ವರ್ಧನೆಗೆ 10 ದಿನಗಳ ತರಬೇತಿ.
- ಲ್ಯಾಂಟೋನಾ, ಯುಪಟೋರಿಯಂ ಕಳೆ ತೆಗೆಯಲು 5 ಕೋಟಿ ಅನುದಾನ
- ಮಾನವ ಆನೆ ಸಂಘರ್ಷ ನಿಯಂತ್ರಣ ಎಂಬ ಹೊಸ ಯೋಜನೆ
- ಜಲಸಂಪನ್ಮೂಲ ಇಲಾಖೆಗೆ 17202 ಕೋಟಿ ಅನುದಾನ.
- ಕಾಲುವೆಗಳ ಆಧುನೀಕರಣಕ್ಕೆ ₹860 ಕೋಟಿ.
- ₹400 ಕೋಟಿ ವೆಚ್ಚದಲ್ಲಿ ಮಂಡ್ಯ ವಿಶ್ವೇಶ್ವರಯ್ಯ ನಾಲೆ ಅಭಿವೃದ್ಧಿ.
- ಕೆರೆ ತುಂಬಿಸೋ ಯೋಜನೆಗೆ ₹1600 ಕೋಟಿ.
- ಏತನೀರಾವರಿ ಯೋಜನೆ ₹1553 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ನಿರ್ಧಾರ
- ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಬೆಲೆ ಕುಸಿದಾಗ, 8 ತಿಂಗಳು ಉಚಿತ ಸಂಗ್ರಹ ಸೌಲಭ್ಯ.
- ಮೀನುಗಾರಿಗೆ ದೋಣಿಗಳಿಗೆ ಶೇ. 50 ರಷ್ಟು ಸಹಾಯಧನ.
- ಗದಗದಲ್ಲಿ ಹೆಸರುಬೆಳೆ ಸಂಸ್ಕರಣಾ ಘಟಕ
- ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸ್ವಯಂಚಾಲಿತ ಹಾಲು ಶೇಖರಣಾ ಘಟಕ.
- 6 ಪ್ರಮುಖ ಸಿರಿಧಾನ್ಯಗಳಿಗೆ ಬೆಂಬಲ ಬೆಲೆ. ಹಾಪ್ಕಾಮ್ಸ್ , ನಂದಿನಿ ಔಟ್ಲೆಟ್ನಲ್ಲಿ ಸಿರಿಧಾನ್ಯ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥ
- ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2500 ಕೋಟಿ
- ಮಂಗನಕಾಯಿಲೆ ಲಸಿಕೆ ತಯಾರಿಕೆಗೆ ಬೆಂಬಲ. 5 ಕೋಟಿ ಅನುದಾನ
- ರೋಗಗ್ರಸ್ಥ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಪಶುಚಿಕಿತ್ಸಾ ವಾಹನಗಳ ವ್ಯವಸ್ಥೆ.
- ಮಿಡಿಸೌತೆ ಬೆಳೆಗಾರರಿಗೆ 6 ಕೋಟಿ ಪ್ಯಾಕೇಜ್.
- ರಾಮನಗರ , ಧಾರವಾಡದಲ್ಲಿ ಮಾವು ಉತ್ಪನ್ನಗಳ ಸಂಸ್ಕರಣಾ ಘಟಕ, ಕೋಲಾರದಲ್ಲಿ ಟೊಮೇಟೋ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆ, 20 ಕೋಟಿ ಅನುದಾನ.
- ರಾಯಚೂರಿನ ಸಿಂಧನೂರಿನಲ್ಲಿ ಕೃಷಿ ಪ್ರಾತ್ಯಕ್ಷಿಕೆ ಕೇಂದ್ರ ಸ್ಥಾಪನೆ. 10 ಸಾವಿರ ಕೋಟಿ ಅನುದಾನ. ಮುಂದಿನ ದಿನಗಳಲ್ಲಿ ವಸತಿ, ಊಟದ ಸೌಕರ್ಯ
- ಮುಖ್ಯಮಂತ್ರಿ ಸೂಕ್ಷ್ಮ ನೀರಾವರಿ ಯೋಜನೆಗೆ 368 ಕೋಟಿ ರೂ. ಅನುದಾನ
- ನೀರಾವರಿ ಸೌಲಭ್ಯಕ್ಕೆ ₹1050 ಕೋಟಿ ಯೋಜನೆ.
- ಬಡವರ ಬಂಧು ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ, 7.5 ಕೋಟಿ ಅನುದಾನ.