ಕುಮಟಾ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಮಟಾ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಕುಮಟಾ ಹಾಗೂ ಸಿಂಡ್‍ಆರ್‍ಸೆಟಿ ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಸಂಸ್ಥೆ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಇಲ್ಲಿನ ನಾಮಧಾರಿ ಸಭಾಭವನದಲ್ಲಿ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಬೃಹತ್ ಸ್ವ ಉದ್ಯೋಗ ಮೇಳ 2019 ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಉದ್ದೆಮೇದಾರ ಹಾಗೂ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಉತ್ಪಾದಕ ಸ್ವಸಹಾಯ ಸಂಘಗಳು ಬೆಳೆದಂತೆ ಅಭಿವೃದ್ಧಿಯ ಶಕೆ ಹೆಚ್ಚಾಗುತ್ತದೆ. ಪಕ್ಕದ ಜಿಲ್ಲೆ ರಾಜ್ಯಗಳನ್ನು ಗಮನಿಸಿದರೆ ಅಭಿವೃದ್ಧ್ದಿಯಲ್ಲಿ ನಾವು ಹಿಂದಿದ್ದೇವೆ. ಚಿಕ್ಕ ಉದ್ದಿಮೆಗಳು, ಸ್ವಸಹಾಯ ಸಂಘಗಳು, ಸ್ವಉದ್ಯೋಗದ ಮೂಲಕ ಸಿದ್ಧ ಪಡಿಸಿದ ವಸ್ತುಗಳಿಗೆ ಇಂದು ಮಾರುಕಟ್ಟೆಯ ಸವಾಲು ಎದುರಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ ಸದಸ್ಯ ಗಜಾನನ ಪೈ ಮಾತನಾಡಿ ಸ್ವಸಹಾಯ ಸಂಘಗಳ ಮೂಲಕ ಸಮಾಜದಲ್ಲಿ ಅಭಿವೃದ್ದಿಯ ಬೆಳಕು ಹರಿದಿದೆ ಎಂದು ಅಭಿಪ್ರಾಯ ಪಟ್ಟರು.
ಸ್ವಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಡಾ. ಜಿ ಜಿ ಹೆಗಡೆ, ದುಡಿಮೆ, ಉದ್ಯೋಗಕ್ಕೆ ಶೈಕ್ಷಣಿಕ ಅರ್ಹತೆ ಮಾತ್ರ ಮಾನದಂಡವಲ್ಲ. ಸಾಧನೆಗಳಿಗೆ ತಕ್ಕ ಪ್ರತಿಫಲ ಲಭಿಸಿದರೂ ನಮ್ಮಲ್ಲಿ ಸಂತ್ರಪ್ತಿ ಇಲ್ಲ. ನೆಮ್ಮದಿಯ ಬದುಕಿಗೆ ಸೋಮಾರಿತನ ಅಡ್ಡಿ ಬರಬಾರದು ಎಂದರು.
ಅಧ್ಯಕ್ಷತೆಯನ್ನು ವಿಮಾ ನೌಕರರ ಸಂಘದ ಅಧ್ಯಕ್ಷ ಸಿ ಆರ್ ನಾಯ್ಕ ವಹಿಸಿದ್ದರು. ಸಂಘದ ಯೋಜನಾಧಿಕಾರಿ ನಾಗರಾಜ ನಾಯ್ಕ ಸ್ವಾಗತಿಸಿದರು. ಯೊಗೇಶ ಕೊಡ್ಕಣಿ ನಿರೂಪಿಸಿದರು. ಉದ್ಯಮಿ ಪ್ರವೀಣ ಶೇಟ್, ಸಿಂಡ್ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆಯ ನಿರ್ದೇಶಕ ನವೀನಕುಮಾರ, ಎಚ್ ಆರ್ ನಾಯ್ಕ, ಪುರಸಭೆ ಸದಸ್ಯರಾದ ಪಲ್ಲವಿ ಮಡಿವಾಳ, ಶೈಲಾ ಗೌಡ, ಮೋಹಿನಿ ಗೌಡ, ಗೀತಾ ಮುಕ್ರಿ, ಲಕ್ಮ್ಷೀ ಗೊಂಡ ಮೊದಲಾದವರು ವೇದಿಕೆಯಲ್ಲಿ ಉಪಸ್ಥತಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ 12 ಜನ ಸಾಧಕ ಸದಸ್ಯರನ್ನು ಸನ್ಮಾನಿಸಲಾಯಿತು. ವ್ಯಾಪಾರಿ ಮಳಿಗೆಗಳು ಗಮನ ಸೆಳೆದವು.