ಕುಮಟಾ: ಕಲಾಗಂಗೋತ್ರಿ ಸಂಸ್ಥಾಪಕ ದಿ. ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿಯನ್ನು ಯಕ್ಷಗಾನ ವಸ್ತ್ರಾಲಂಕಾರ ಕಲಾವಿದ ಮಾದೇವ ನಾಯ್ಕ ಬಗ್ಗೋಣ ಇವರಿಗೆ ಫೆ. 12 ರಂದು ಕುಮಟಾ ಜಾತ್ರೆಯ ದಿನದ ರಾತ್ರಿ ಮಣಕಿ ಮೈದಾನದಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನದ ವೇದಿಕೆಯಲ್ಲಿ ನೀಡಲಾಗುವುದು.
ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಕಲಾಗಂಗೋತ್ರಿ ಪ್ರಶಸ್ತಿಯನ್ನು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಎಂ.ಜಿ.ನಾಯ್ಕ ಸಿದ್ದಾಪುರ, ಯಕ್ಷಗಾನ ಕಲಾ ಪೋಷಕ ಬಾಬು ಆರ್. ಮಡಿವಾಳ, ಚಂಡೆ ವಾದಕ ರಾಮಚಂದ್ರ ಉಪ್ಪ ಪಟಗಾರ ಇವರಿಗೆ ನೀಡಲಾಗುವುದು.
ಯಕ್ಷಗಾನದ ಉಳಿವು ಹಾಗೂ ಬೆಳವಣಿಗೆಗಾಗಿ ಅಶಕ್ತ ಹಿರಿಯ ಕಲಾವಿದರಿಗೆ ಗೌರ ಹಾಗೂ ನೆರವು ನೀಡುವುದು, ತೆರೆಮರೆಯ ಹಿರಿಯ ಯಕ್ಷಗಾನ ಪ್ರತಿಭೆಗಳಿಗೆ, ಪೋಷಕರಿಗೆ ಗೌರವಿಸುವ ಕಾರ್ಯವನ್ನು ಕಲಾಗಂಗೋತ್ರಿ ಆರಂಭವಾದ 2001 ರಿಂದ ನಡೆಸಿಕೊಂಡು ಬಂದಿದೆ.ಕಲಾಗಂಗೋತ್ರಿಯ ಅಧ್ಯಕ್ಷರಾಗಿ ಶ್ರೀಧರ ನಾಯ್ಕ ವಕ್ಕನಳ್ಳಿ , ಉಪಾಧ್ಯಕ್ಷರಾಗಿ ಗಣೆಶ ಭಟ್ಟ ಬಗ್ಗೋಣ, ಕಲಾಗಂಗೋತ್ರಿಯ ಕಾರ್ಯದರ್ಶಿಯಾಗಿ ಆರ್.ಡಿ. ಪೈ,ಸದಸ್ಯರಾಗಿ ಜಿ.ಎಸ್.ಭಟ್ಟ, ಎಂ.ಆರ್.ನಾಯಕ ಎಂ.ಟಿ.ನಾಯ್ಕ, ಶ್ರೀಧರ ಶಾಸ್ತ್ರಿ, ವೆಂಕಟೇಶ ಹೆಗಡೆ ಸೇವೆ ಸಲ್ಲಿಸುತ್ತಿದ್ದಾರೆ.