ಕುಮಟಾ : ತಾಲೂಕಿನ ಗುಡ್ ಕಾಗಾಲದ ವೆಂಕಟರಮಣ ದೇವಸ್ಥಾನದ ಸಮೀಪ ಆರು ಅಡಿಗಳಷ್ಟು ಉದ್ದದ ನಾಗರಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಆತಂಕವನ್ನು ಸೃಷ್ಟಿಸಿತು.
ಗಣೇಶ ಜಯಂತಿಯ ಶುಭದಿನವಾದ ಶುಕ್ರವಾರ ಊರಿಗೆ ಆಗಮಿಸಿದ ನಾಗಪ್ಪನನ್ನು ಕಂಡು ನೆರದವರೆಲ್ಲ ಭಕ್ತಿಯಿಂದ ಕೈಮುಗಿದು ಕೃತಾರ್ಥರಾದರೆ. ಮತ್ತೆ ಕೆಲವರು ಈ ಭಾರೀ ಗಾತ್ರದಹಾವು ಮರಳಿ ಕಾಡಿನೆಡೆಗೆ ಹೋಗುತ್ತಿರುವುದನ್ನು ಖಚಿತಪಡಿಸಿಕೊಂಡು ನಿಟ್ಟುಸಿರು ಬಿಟ್ಟರು.
ಭಾರೀ ಗಾತ್ರದ ಹಾವನ್ನು ಕಂಡು ಕುತೂಹಲಕರ ರೀತಿಯಲ್ಲಿ ಜನರು ವೀಕ್ಷಿಸಿದರೆ , ಅದರ ಗಾತ್ರಕ್ಕೆ ಜನತೆ ಬೆಚ್ಚಿದ್ದೂ ಸುಳ್ಳಲ್ಲ. ಒಟ್ಟಿನಲ್ಲಿ ಧಾರ್ಮಿಕ ಹಾಗೂ ಭೌತಿಕ ಪರಿಕಲ್ಪನೆಗಳು ಒಟ್ಟಿಗೆ ಕಂಡಿದ್ದು ಸುಳ್ಳಲ್ಲ.