ಕುಮಟಾ: ಉತ್ತರ ಕನ್ನಡ ಜಿಲ್ಲಾ ಸ್ಕೌಟ್‌ನ ಪಬ್ಲಿಕ್ ರಿಲೇಶನ್ ಆಫೀಸರ್ (ಪಿ.ಆರ್.ಒ) ಆಗಿ ಎಸ್.ಎಸ್.ಭಟ್ಟ ಲೋಕೇಶ್ವರ ಅವರು ನೇಮಕಗೊಂಡಿದ್ದಾರೆ.
ಹೊನ್ನಾವರದಲ್ಲಿ ನಡೆದ ಮಹಾಸಭೆಯಲ್ಲಿ ಈ ಹುದ್ದೆಯನ್ನು ನೀಡಲಾಗಿದ್ದು, ಸಭೆಯಲ್ಲಿ ಮಾಜಿ ರಾಜ್ಯ ಗೃಹ ಮಂತ್ರಿ ಹಾಗೂ ಭಾರತ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಜಿಲ್ಲಾ ಮುಖ್ಯ ಆಯುಕ್ತ ಡಾ.ಜಿ.ಜಿ.ಸಭಾಹಿತ, ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತ್ರೀ, ಸ್ಥಾನಿಕ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ, ಜಿಲ್ಲಾ ಉಪಾಧ್ಯಕ್ಷ “.”.ನಾಯ್ಕ, ಕಾರ್ಯದರ್ಶಿ ಬಿ.ಡಿ.ಫರ್ನಾಂಡೀಸ್, ಖಜಾಂಚಿ ರಾಜು ಹೆಬ್ಬಾರ, ಎ.ಎಸ್.ಒ.ಸಿ ಕರಿಸಿದ್ಧಪ್ಪ, ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.