ಕುಮಟಾ: ಫೆ. 16 ಮತ್ತು 17 ರಂದು ತಾಲೂಕಿನ ಕತಗಾಲದಲ್ಲಿ ನಡೆಯಲಿರುವ 7ನೇ ತಾಲೂಕಾ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಇಂದು ಕುಮಟಾದಲ್ಲಿ ಬಿಡುಗಡೆಗೊಳಿಸಲಾಯಿತು. ಲಾಂಛನವನ್ನು ಶಾಸಕರಾದ ದಿನಕರ ಶೆಟ್ಟಿ ಶನಿವಾರ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಕನ್ನಡ ಭಾಷೆ, ನೆಲ, ಜಲ ಉಳಿಸಿಕೊಂಡು ಹೋಗುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಅನನ್ಯವಾಗಿದೆ. ಈಗ ಕತಗಾಲಿನಲ್ಲಿ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಇದನ್ನು ಯಶಸ್ವಿಗೊಳಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ತಾಲೂಕಾ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಧರ ಗೌಡ ಮಾತನನಾಡಿ, ಸಮ್ಮೇಳನಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದ್ದು ನಿಮ್ಮಲೆಲ್ಲರಸಹಕಾರದಿಂದ ಕಾರ್ಯಕ್ರಮಯಶಸ್ವಿಯಾಗುವ ಭರವಸೆ ಇದೆ ಎಂದರು.
ಕತಗಾಲ ಅಕ್ಷರಕಲಾ ಯುವಕ ಸಂಘದ ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ಅಳಕೋಡ ಗ್ರಾ.ಪಂ ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ ಮಾತನಾಡಿ, ಎಲ್ಲಾ ಸಾಹಿತ್ಯಾಸಕ್ತರು ಕತಗಾಲಿಗೆ ಆಗಮಿಸಿ ಸಮ್ಮೇಳನವನ್ನು ಪ್ರೋತ್ಸಾಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಕ್ಷರಕಲಾ ಯುವಕ ಸಂಘದ ಅಧ್ಯಕ್ಷ ಕೃಷ್ಣಾನಂದ ಭಟ್, ಪ್ರಮುಖರಾದ ಎಸ್ ಎಂ ಭಟ್ಟ, ಶಿಕ್ಷಕ ಮಂಜುನಾಥ ನಾಯ್ಕ, ಚಂದ್ರಕಾಂತ ಮುಕ್ರಿ, ಈಶ್ವರ ಗಾಂವ್ಕರ್, ದತ್ತಾತ್ರಯ ಭಂಡಾರಿ, ಈಶ್ವರ ಗೌಡ, ಗುರುಪ್ರಸಾದ ಶೇಟ್, ಸಂತೋಷ ಶೇಟ್, ವಿನಾಯಕ ಶೇಟ್, ಮೈಕಲ್ ಫರ್ನಾಂಡಿಸ್, ಮುಂಜುನಾಥ ಮುಕ್ರಿ, ರವಿ ಮುಕ್ರಿ ಮತ್ತಿತರರು ಇದ್ದರು.
ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕತಗಾಲದ ಅಕ್ಷರಕಲಾ ಯುವಕ ಸಂಘದ ಸಂಯುಕ್ತಾಶ್ರದಲ್ಲಿ ಸಮ್ಮೇಳನ ಜರುಗಲಿದೆ.