ಕುಮಟಾ: ಕುಲೀನ ಮನೆತನದ ಒಬ್ಬನೇ ಒಬ್ಬ ಮಗು ಸಾಕು ಇಡೀ ಶಾಲೆಯ ಪರಿಸರವನ್ನೇ ಸುಸಂಸ್ಕøತಮಯವನ್ನಾಗಿಸಲು ಎಂದು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪಾಲಕರ ಸಭೆಯಲ್ಲಿ ಮುಖ್ಯಾಧ್ಯಾಪಕ ಎನ್.ಆರ್.ಗಜು ಅಭಿಪ್ರಾಯಪಟ್ಟರು. ಅಂತೆಯೇ ಒಬ್ಬ ಅಸಭ್ಯ ಅನಾಗರಿಕತೆಯ ವರ್ತನೆಯ ಮಗುವನ್ನು ಛೇಡಿಸದೇ, ತಿದ್ದದೇ ಬೆಳೆಯಲು ಬಿಡುವುದು ಅಲ್ಲಿನ ಶಿಕ್ಷಕವರ್ಗದ ಅಸಂಸ್ಕøತತೆಯನ್ನು ಎತ್ತಿತೋರಿಸಬಲ್ಲದೆಂದು ಅವರು ತಿಳಿಸಿದರು. ಅವರು ಮುಂದುವರಿದು ಮಾತನಾಡುತ್ತಾ ಪಾಲಕ-ಪೋಷಕರ ಸಂಪೂರ್ಣ ಸಹಭಾಗಿತ್ವ ಸಹಕಾರವಿದ್ದಾಗ ಮಾತ್ರ ತಾವು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲು ಸಾಧ್ಯವೆಂದೂ, ತಮ್ಮ ತಂಡದ ಸಹಶಿಕ್ಷಕರ ಆದರ್ಶತ್ವ, ಪರಿಶ್ರಮ ಇಲ್ಲಿ ಕಲಿಯುವ ಮಕ್ಕಳಿಗೆ ಸರ್ವತೋಮುಖ ಶಿಕ್ಷಣಕ್ಕೆ ಪೂರಕವಾಗಿದೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಪಣತೊಟ್ಟಿರುವ ತಂಡದ ಸದಸ್ಯರನ್ನು ಪೋಷಕರ ಸಮ್ಮುಖದಲ್ಲಿ ಶ್ಲಾಘಿಸಿದರು.

RELATED ARTICLES  ಭಟ್ಕಳ ಕೂಲಿ ಕಾರ್ಮಿಕರ ಸಂಘದ ಮನವಿಗೆ ಸ್ಪಂದಿಸಿದ ಶಾಸಕ ಸುನೀಲ್ ನಾಯ್ಕ.


ಸೌಂದರ್ಯಾ ನಾಯ್ಕ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಅನಿಲ್ ರೊಡ್ರಗೀಸ್ ಫಲಿತಾಂಶ ವಿಶ್ಲೇಷಿಸಿದರು. ಇನ್ನೂ ಹೆಚ್ಚಿನ ಕಲಿಕಾ ಸಾಮಥ್ರ್ಯಗಳಿಸಬೇಕಾದ ಅಗತ್ಯತೆಯನ್ನು ಪ್ರಸ್ತಾಪಿಸಿ ಪೋಷಕವರ್ಗಕ್ಕೆ ಉಪಯುಕ್ತ ಟಿಪ್ಸ್ ಗಳನ್ನು ನೀಡುತ್ತಾ ವಿಷಯ ಶಿಕ್ಷಕರೆಲ್ಲರೂ ತಮ್ಮ ತಮ್ಮ ಕಲಿಕಾ ವಿಷಯಗಳನ್ನು ಅಭ್ಯಸಿಸುವ ಕ್ರಮಗಳನ್ನು ಪ್ರಗತಿ ಪುಸ್ತಕ ನೀಡುತ್ತಾ ತಿಳಿಸಿದರು. ಶಿಕ್ಷಕ ಸುರೇಶ ಪೈ ನಿರೂಪಸಿದರು. ಶಿಕ್ಷಕ ವಿಷ್ಣು ಭಟ್ಟ ಸ್ವಾಗತಿಸಿದರೆ, ಶಿಕ್ಷಕ ಕಿರಣ ಪ್ರಭು ವಂದಿಸಿದರು.

RELATED ARTICLES  ಸಿ.ಎಂ ಸ್ವಾಗತಕ್ಕೆ ಸಜ್ಜುಗೊಂಡಿದೆ ಉತ್ತರಕನ್ನಡ.

ಇದೇ ಸಂದರ್ಭದಲ್ಲಿ ತಂದೆ-ತಾಯಿಗಳನ್ನು ಗೌರವಿಸುವ ಗುಣವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪರಸ್ಪರ ಕೌಟುಂಬಿಕ ವಾತಾವರಣ ಸೃಷ್ಠಿಸುವ ಸಂಕೇತದಂತೆ ತಂದೆ-ತಾಯಿ ಪೂಜನೀಯ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ತಂದೆತಾಯಂದಿರ ಪಾದಪೂಜೆಗೈದು ಶುಭಾಶೀರ್ವಾದ ಪಡೆದರು. ಮೊದಲ ಪೂರ್ವ ತಯಾರಿ ವಾರ್ಷಿಕ ಪರೀಕ್ಷೆಯಲ್ಲಿ ಮೊದಲ ಹತ್ತು ಶ್ರೇಯಾಂಕಿತರನ್ನು ವಿಶೇಷವಾಗಿ ಗೌರವಿಸಿ ಪ್ರೋತ್ಸಾಹಿಸಿದರು.