ಮೇಷ: ವಾರದ ಆರಂಭದ ದಿನದಲ್ಲಿ ಯೋಚಿಸಿದ್ದ ಪ್ರವಾಸವನ್ನು ಇಂದು ನಿರಾತಂಕವಾಗಿ ಮಾಡಬಹುದು. ವಾರಾಂತ್ಯದ ರಜಾ ದಿನಗಳಲ್ಲಿ ನಿಮ್ಮ ಮನಸ್ಸಿಗೆ ಒಪ್ಪುವ ಕ್ಷೇತ್ರಗಳಿಗೆ ಭೇಟಿ ನೀಡಲು ಮುಂದಾಗುವಿರಿ. ಇದರಿಂದ ಮನಸ್ಸು ಪ್ರಫುಲ್ಲವಾಗುವುದು. 

ವೃಷಭ: ‘ಅಂಜಿಕಿನ್ಯಾತಕಯ್ಯಾ, ಹನುಮನ ನೆನೆದರೆ ಹಾರಿ ಹೋಗುವುದು ಪಾಪ’ ಎಂದು ದಾಸರು ಹಾಡಿದ್ದಾರೆ. ಅಂತೆಯೇ ಮಾರುತಿಯ ದರ್ಶನ, ಆತನ ಸ್ತೋತ್ರ ಪಠಿಸಿ, ಮನಸ್ಸಿನ ತುಮುಲಗಳನ್ನು ದೂರ ಮಾಡಿ. 

ಮಿಥುನ: ಬೆಳಕು ಮುಗಿದು ಸಂಜೆ ಆವರಿಸುವಷ್ಟರಲ್ಲಿ ಬದಲಾವಣೆ ಆಗದು. ಆದಾಗ್ಯೂ ಬೆಳಗ್ಗೆ ಇದ್ದ ಭಯ ಸಂಜೆಯ ವೇಳೆಯಲ್ಲಿ ಇರಲಾರದು. ನವಗ್ರಹ ದೇವತೆಗಳನ್ನು ಆರಾಧನೆ ಮಾಡಿ. ಆಶ್ವತ್ಥ ಮರ ಪ್ರದಕ್ಷಿಣೆ ಹಾಕಿ. 

ಕಟಕ: ವಿವೇಕಿಗಳಾದ ಮಕ್ಕಳಿಗೆ ಯಶಸ್ಸು ದೊರೆಯಲಿದೆ. ಉಪಯುಕ್ತವಾದ ಸಲಹೆ ಸಹಕಾರಗಳು ಮಕ್ಕಳಿಗೆ ದೊರೆಯುವುದರಿಂದ ಅವರು ಕೂಡಾ ಆನಂದಭರಿತ ದಿನವನ್ನು ಕಳೆಯುವರು. 

ಸಿಂಹ: ಮನಸ್ಸಿನ ದುಗುಡಗಳು ಗದ್ದಲದ ಸಂತೆಯಲ್ಲಿ ಇದ್ದದ್ದೆ. ಆದರೆ ಇಂದು ಅಂತಹುದೇ ರಗಳೆಯಿಂದ ಹೊರಬರುವಿರಿ. ಅತ್ಯಂತ ಆತ್ಮೀಯ ಸ್ನೇಹಿತರ ಸಹಕಾರ ದೊರೆಯುವುದು. ಇದರಿಂದ ಜೀವನದಲ್ಲಿ ಹೊಸ ಉತ್ಸಾಹ ಮೂಡುವುದು. 

RELATED ARTICLES  ಅಕ್ಟೋಬರ್ 24 ರಿಂದ 30ರವರೆಗೆ “ಕನ್ನಡಕ್ಕಾಗಿ ನಾವು" ಅಭಿಯಾನ

ಕನ್ಯಾ: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ ಎಂಬ ಮಾತಿನಂತೆ ನೀವು ದಿಢೀರನೆ ಶ್ರೀಮಂತರಾಗುವ ಎಲ್ಲಾ ಲಕ್ಷ ಣಗಳು ಕಂಡು ಬರುವವು. ಆದರೆ ನಿಮ್ಮ ವಿವೇಕವನ್ನು ಸರಿಯಾದ ದಿಕ್ಕಿನಲ್ಲಿ ಚಿಂತಿಸುವಂತೆ ಮಾಡಿ. ಒಳಿತಾಗುವುದು. 

ತುಲಾ: ಗುರು ಹಿರಿಯರ ಆಶೀರ್ವಾದ ಪಡೆಯಿರಿ. 16ರ ವಯಸ್ಸು ಅದು ಹುಚ್ಚು ಕೋಡಿಯ ಮನಸ್ಸು ಎನ್ನುವಂತೆ ಯೌವ್ವನದ ಹುರುಪಿನಲ್ಲಿ ಹಲವು ತಪ್ಪ್ಪುಗಳು ನುಸುಳುವ ಸಾಧ್ಯತೆ ಇದೆ. ಹಿರಿಯರ ವಚನದಂತೆ ನಡೆದುಕೊಂಡಲ್ಲಿ ಸಮಾಜದ ಗೌರವಕ್ಕೆ ಪಾತ್ರರಾಗುವಿರಿ. 

ವೃಶ್ಚಿಕ:
 ಶನಿಕಾಟದ ತೀವ್ರತರವಾದ ಬಿರುಗಾಳಿ ಇದ್ದರೂ ಗುರುಬಲ ಇರುವುದರರಿಂದ ನಿಮ್ಮ ಕೆಲಸಗಳು ಸರಾಗವಾಗಿ ಆಗುವವು. ಈಶ್ವರ ದೇವಸ್ಥಾನ ಇಲ್ಲವೆ ಶನೇಶ್ಚರ ದೇವಾಲಯಕ್ಕೆ ಎಳ್ಳೆಣ್ಣೆ ದಾನ ಮಾಡಿ. 

ಧನುಸ್ಸು:
 ನೀವು ಮಾಡುವ ಕೆಲಸವನ್ನು ಪರರ ಕೆಲಸಕ್ಕೆ ಹೋಲಿಸಿಕೊಂಡು ಕೀಳರಿಮೆ ಬೆಳೆಸಿಕೊಳ್ಳುವುದು ಒಳ್ಳೆಯದಲ್ಲ. ಧೈರ್ಯಶಾಲಿಗೆ ಭಗವಂತ ಸಹಾಯ ಮಾಡುತ್ತಾನೆ. ಹಾಗಾಗಿ ನೀವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ. 

ಮಕರ: 
ವ್ಯಯಸ್ಥಾನದ ಶನಿ ಆರ್ಥಿಕ ಮುಗ್ಗಟ್ಟು ಮತ್ತು ಅನಾರೋಗ್ಯ ಬಾಧೆಯನ್ನು ನೀಡುವನು. ಆದಾಗ್ಯೂ ಗುರುವಿನ ಶುಭ ಸಂಚಾರದಿಂದಾಗಿ ಹತ್ತಿಯ ಬೆಟ್ಟಕ್ಕೆ ಬೆಂಕಿಯ ಕಿಡಿ ತಗುಲಿದಂತೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ. 

RELATED ARTICLES  ಇಂದಿನ‌ ನಿಮ್ಮ ದಿನ ಹೇಗಿದೆ ಗೊತ್ತಾ? ದಿನಾಂಕ 03/02/2019ರ ದಿನ‌ ಭವಿಷ್ಯ ಇಲ್ಲಿದೆ ನೋಡಿ.

ಕುಂಭ: ಬಹು ನಿರೀಕ್ಷೆ ಇಟ್ಟುಕೊಂಡಿರುವ ನಿಮಗೆ ಆಶಾದಾಯಕ ವಾರ್ತೆ ಕೇಳಿಬರುವುದು. ನಿಮ್ಮ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯುವುದು. ಗುರುವಿನ ಮಂತ್ರ, ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. 

ಮೀನ: ನಿಮ್ಮ ದೈನಂದಿನ ವ್ಯವಹಾರಗಳಲ್ಲಿ ಲೆಕ್ಕಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಇದೀಗ ಜನ ಸಾಮಾನ್ಯರೂ ವ್ಯವಹಾರಗಳಲ್ಲಿ ಪಾರದರ್ಶಕತೆ ಇಟ್ಟುಕೊಳ್ಳಬೇಕಾದ ಸಮಯ. ಇದರಿಂದ ಯಾವುದೇ ಅನಿಶ್ಚಿತತೆ ಇರುವುದಿಲ್ಲ.