ಶಿರಸಿ:ಬೆಂಗಳೂರಿನಿಂದ ಶಿರಸಿಗೆ ಆಗಮಿಸುತ್ತಿದ್ದ ಹಾಗೂ ಅಂಕೋಲಾದಿಂದ ಹಾನಗಲ್ಗೆ ತೆರಳುತ್ತಿದ್ದ ಎರಡು ಕಾರ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಾಗಿ ಓರ್ವ ಮೃತಪಟ್ಟಿದ್ದು ಐದಕ್ಕೂ ಅಧಿಕ ಮಂದಿಗೆ ಗಂಭೀರ ಪ್ರಮಾಣದ ಗಾಯಗಳಾಗಿರುವ ಘಟನೆ ವರದಿಯಾಗಿದೆ.
ಹಾನಗಲ್ ತಾಲೂಕಿನ ಸಮ್ಮಸ್ಕಿ ಬಳಿಯಲ್ಲಿ ನಡೆದ ಅಪಘಾತದಲ್ಲಿ ಶಿರಸಿ ತಾಲೂಕಿನ ಕಡಬಾಳದ ಶಿವಾನಂದ ಹೆಗಡೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಮೃತ ಶಿವಾನಂದ ಹೆಗಡೆ ಬೆಂಗಳೂರಿನಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಸ್ವಂತ ಕಚೇರಿ ನಡೆಸುತ್ತಿದ್ದರು. ಮೃತರು ಇಬ್ಬರು ಮಕ್ಕಳು, ಪತ್ನಿ, ಕುಟುಂಬವದವರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಅಪಘಾತದಲ್ಲಿ ಗಾಯಗೊಂಡವರನ್ನು ದಾಖಲಿಸಲಾಗಿದೆ. ಓರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.