ಶಿರಸಿ : ದಿನಾಂಕ 04/02/2019,ಸೋಮವಾರದಂದು ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡದ 69ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಶಿರಸಿ ತಾಲೂಕಿನ ವಾನಳ್ಳಿ ಸಮೀಪದ ಮುಂಡಿಗೆಜಡ್ಡಿ ಊರಿನ ಶ್ರೀಮತಿ ದಿವ್ಯಾ ಹೆಗಡೆ ಇವರಿಗೆ ರಸಾಯನಶಾಸ್ತ್ರ ವಿಷಯದಲ್ಲಿ ಡಾ. ಕೆ ಬಿ ಗುಡಸಿರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಸಿಂಥೆಸಿಸ್ ಆಫ್ ಟ್ರಾನ್ಸಿಷನ್ ಮೆಟಲ್ ಕಾಂಪ್ಲೆಕ್ಸಸ್ ಆಫ್ ಪೈರುವಿಕ್ ಆ್ಯಸಿಡ್ ಹೈಡ್ರಾಜಿನ್ಸ್ ಆ್ಯಸ್ ಪಾಸಿಬಲ್ ಆ್ಯಂಟಿಕ್ಯಾನ್ಸರ್ ಏಜೆಂಟ್ಸ್” ಮಹಾಪ್ರಬಂಧಕ್ಕೆ ಡಾಕ್ಟರ್ ಆಫ್ ಫಿಲಾಸಪಿ (ಪಿಎಚ್‍ಡಿ) ಪದವಿಯನ್ನು ನೀಡಲಾಯಿತು.
ಇವರ ಸಾಧನೆಗೆ ಇವರ ಕುಟುಂಬದವರು ಹಾಗೂ ಬಂಧು ಮಿತ್ರರು ಹಾಗೂ ಮಾರ್ಗದರ್ಶನ ನೀಡಿದವರು ಶುಭ ಹಾರೈಸಿದ್ದಾರೆ.