ಕುಮಟಾ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಸಿಂಡ್ ಗ್ರಾಮೀಣ ಉದ್ಯೋಗ ತರಬೇತಿ ಸಂಸ್ಥೆ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಕುಮಟಾದ ನಾಮಧಾರಿ ಸಭಾಂಗಣದಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಬೃಹತ್ ಸ್ವ ಉದ್ಯೋಗ ಮೇಳ 2019 ಇತ್ತೀಚೆಗೆ ನಡೆಯಿತು..
ಕಾರ್ಯಕ್ರಮವನ್ನು ಉದ್ದಿಮೆದಾರ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಉದ್ಘಾಟಿಸಿದರು..
ಉದ್ಘಾಟಿಸಿ ಮಾತನಾಡಿದ ವಾಳ್ಕೆ
ಚಿಕ್ಕ ಉದ್ದಿಮೆಗಳು, ಸ್ವಸಹಾಯ ಸಂಘಗಳು ಸ್ವ ಉದ್ಯೋಗದ ಮೂಲಕ ಸಿದ್ಧಪಡಿಸಿರುವ ವಸ್ತುಗಳಿಗೆ ಇಂದು ಮಾರುಕಟ್ಟೆಯ ಸವಾಲು ಎದುರಾಗಿದೆ ಎಂದು ಉದ್ದಿಮೆದಾರ ಹಾಗೂ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಅಭಿಪ್ರಾಯ ವ್ಯಕ್ತಪಡಿಸಿದರು..
ಜೊತೆಗೆ ಉತ್ಪಾದಕ ಸ್ವಸಹಾಯ ಸಂಘಗಳು ಬೆಳೆದಂತೆ ಅಭಿವೃದ್ಧಿಯ ಶೆಕೆ ಹೆಚ್ಚಾಗುತ್ತದೆ. ಪಕ್ಕದ ರಾಜ್ಯಗಳನ್ನು ಗಮನಿಸಿದರೆ ಅಭಿವೃದ್ಧಿ ಯಲ್ಲಿ ನಾವು ಹಿಂದಿದ್ದೇವೆ. ಮಾರುಕಟ್ಟೆ ವಿಸ್ತರಣೆ ಆದರೆ ಉತ್ಪಾದನೆಗೆ ಬೇಡಿಕೆ ಬರುತ್ತದೆ. ಸ್ವ ಉದ್ಯೋಗಗಳಿಗೆ ಸರ್ಕಾರ ಪೂರಕ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ. ಬೇಡಿಕೆ ಇಲ್ಲದಿದ್ದರೆ ಉತ್ಪಾದನೆ ಬೆಲೆ ಇಲ್ಲ ಎಂದರು..
ಡಾ ಜಿ ಜಿ ಹೆಗಡೆ ಹಾಗೂ ಜಿ ಪಂ ಸದಸ್ಯ ಗಜಾನನ ಪೈ ಮಾತನಾಡಿದರು..ವಿಮಾ ನೌಕರರ ಸಂಘದ ಅಧ್ಯಕ್ಷ ಸಿ ಆರ್ ನಾಯ್ಕ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದರು..
ಉದ್ಯಮಿ ಪ್ರವೀಣ ಶೇಟ್, ಸಿಂಡ್ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆಯ ನವೀನಕುಮಾರ್, ಎಚ್ ಆರ್ ನಾಯ್ಕ, ಪುರಸಭಾ ಸದಸ್ಯ ಪಲ್ಲವಿ ಮಡಿವಾಳ, ಮೋಹಿನಿ ಗೌಡ, ಶೈಲಾ ಗೌಡ, ಗೀತಾ ಮುಕ್ರಿ, ಲಕ್ಷ್ಮಿ ಗೊಂಡ ಉಪಸ್ಥಿತರಿದ್ದರು, ಸ್ವಸಹಾಯ ಸಂಘಗಳ ಸಾಧಕರನ್ನು ಸನ್ಮಾನಿಸಲಾಯಿತು.. ಕಾರ್ಯಕ್ರಮದಲ್ಲಿ ವಿವಿಧ ತಿಂಡಿ ತಿನಿಸುಗಳು, ವಸ್ತು ಪರಿಕರಗಳ ಮಳಿಗೆಗಳನ್ನು ಖರೀದಿಗಾಗಿ ಹಾಕಲಾಗಿತ್ತು..