ಮೇಷ:- ಸದ್ಯದ ಪರಿಸ್ಥಿತಿ ತಣ್ಣೀರನ್ನು ಆರಿಸಿ ಕುಡಿಯುವ ಕಾಲವಾಗಿದೆ. ನೀವು ನಂಬಿದ ಜನರೇ ನಿಮ್ಮನ್ನು ತಿರಸ್ಕರಿಸುವುದರಿಂದ ನಿಮ್ಮ ಮನೋವೇಗದ ಕಾಮನೆಗಳು ಮಂದ ಪ್ರಗತಿಯಲ್ಲಿ ಸಾಗುವವು. ಗುರುವಿನ ಸ್ತೋತ್ರ ಪಠಿಸಿ. 

ವೃಷಭ:- ನಿಮ್ಮ ಆಲೋಚನಾ ಶಕ್ತಿ, ತರ್ಕಗಳು ಅದ್ಭುತ ಆದರೆ ಪ್ರತಿ ಕ್ಷ ಣಕ್ಕೊಮ್ಮೆ ಬದಲಾಗುವ ನಿಮ್ಮ ಮನಸ್ಥಿತಿ ಬಗ್ಗೆ ನಿಮ್ಮ ಸಂಗಾತಿಯೇ ಸರಿಯಾಗಿ ಅರ್ಥ ಮಾಡಿಕೊಳ್ಳಲಾರರು. ಆದಾಗ್ಯೂ ನಿಮ್ಮ ಯೋಜನೆಗಳು ಸ್ವೀಕಾರ್ಹವಾಗಿರುತ್ತದೆ. 

ಮಿಥುನ:- ಒಣ ವಾದ, ವಿವಾದದಿಂದ ಜನರನ್ನು ಗೆಲ್ಲಲು ಆಗುವುದಿಲ್ಲ. ನಿಮ್ಮ ಬುದ್ಧಿಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ವ್ಯಯಿಸಿದರೆ ನೀವೊಬ್ಬ ಅದ್ಭುತ ವ್ಯಕ್ತಿ ಎನಿಸಿಕೊಳ್ಳುವಿರಿ ಮತ್ತು ಸಮಾಜದಲ್ಲಿ ಹೆಚ್ಚಿನ ಗೌರವಾದರಗಳು ಕಂಡುಬರುವವು. 

ಕಟಕ:- ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು ಎಂಬಂತೆ ನಿಮ್ಮಲ್ಲಿರುವುದನ್ನು ಮತ್ತೊಬ್ಬರಿಗೆ ಹಂಚಿ ಸಂತಸ ಪಡುವಿರಿ. ಇದರಿಂದ ಸಾಮಾಜಿಕವಾಗಿ ಗೌರವಿಸಲ್ಪಡುವಿರಿ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವುದು. 

RELATED ARTICLES  ಜನವರಿ 1ರಿಂದ ಫಾಸ್ಟ್‌ಟ್ಯಾಗ್ ಕಡ್ಡಾಯ

ಸಿಂಹ:- ಅನನ್ಯ ಭಾವದಿಂದ ನಿಮ್ಮ ಕುಲದೇವರನ್ನು ಆರಾಧಿಸಿ. ನಿಮಗೆ ಎದುರಾಗಿರುವ ಅಪವಾದಗಳಿಂದ ದೂರ ಬರುವಿರಿ. ಸಂಕಲ್ಪಿತ ಕಾರ್ಯಗಳಿಂದ ಯಶಸ್ಸು ದೊರೆಯುವುದು. ಬಂಧುಬಾಂಧವರು ನಿಮ್ಮ ನಡೆ ನುಡಿಯನ್ನು ಕೊಂಡಾಡುವರು. 

ಕನ್ಯಾ:- ನಿಮ್ಮ ಪ್ರಗತಿಯನ್ನು ಸಹಿಸದ ಕೆಲವರು ನಿಮ್ಮ ವಿರುದ್ಧ ಪಿತೂರಿ ನಡೆಸುವ ಸಂದರ್ಭವಿದೆ. ಆದರೆ ಗುರುವಿನ ಬಲ ಇರುವುದರಿಂದ ನೀವು ಯಾವುದಕ್ಕೂ ಅಂಜುವ ಅಗತ್ಯವಿಲ್ಲ. ಜಯವಿರುವವರೆಗೂ ಭಯದ ಸುಳಿವಿಲ್ಲ. ನಿಶ್ಚಿಂತರಾಗಿರಿ. 

ತುಲಾ:- ಬೆಲೆಬಾಳುವ ವಸ್ತುಗಳನ್ನು ಕೊಳ್ಳುವ ಒತ್ತಡ ನಿಮ್ಮೆದುರಿಗೆ ಬರುವ ಸಾಧ್ಯತೆ ಇದೆ. ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಗಮನಿಸಿ ವ್ಯವಹಾರ ಮಾಡುವುದು ಒಳ್ಳೆಯದು. ಆಕಾಶಕ್ಕೆ ಏಣಿ ಹಾಕುವ ಸಾಹಸಕ್ಕೆ ಕೈಹಾಕದಿರಿ. 

ವೃಶ್ಚಿಕ:- ನಂಬಿಕೆಗೆ ದ್ರೋಹ ಎದುರಾಗುವ ಸಂದರ್ಭವಿದ್ದು ಆತ್ಮೀಯರೊಡನೆ ವ್ಯವಹಾರಲ್ಲಿ ಎಚ್ಚರದಿಂದ ಇರಿ. ಪ್ರಯಾಣ ಕಾಲದಲ್ಲಿ ಸಹ ಜಾಗ್ರತೆಯಿಂದ ಇರಬೇಕು. ಪ್ರಮುಖ ಹಣಕಾಸಿನ ವ್ಯವಹಾರವನ್ನು ಮುಂದೂಡುವುದು ಒಳಿತು. 

RELATED ARTICLES  ಸುರಿದ ಮಳೆಗೆ ಕುಸಿದ ಗೋಡೆ : ಜನ ಜೀವನ ಅಸ್ತವ್ಯಸ್ಥ

ಧನುಸ್ಸು:- ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವುದು ಶ್ರೇಯಸ್ಸಲ್ಲ. ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಒಂದಿರಲಿ ಎಂದು ದೃಢ ಮನಸ್ಸಿನಿಂದ ಕಾರ್ಯ ಪ್ರವೃತ್ತರಾಗಿ. ಎಲ್ಲವೂ ಒಳಿತಾಗುವುದು. 

ಮಕರ:- ಒಂದು ವಿಷಯದ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳದೆ ಕಾರ್ಯ ಪ್ರವೃತ್ತರಾದರೆ ಕೇವಲ ಗುಡ್ಡಕ್ಕೆ ಮಣ್ಣು ಹೊತ್ತಂತೆ ವ್ಯರ್ಥವಾಗುವುದು. ಹಾಗಾಗಿ ಒಂದು ಕೆಲಸದ ಪೂರ್ವಾಪರ ವಿಚಾರಗಳನ್ನು ತಿಳಿದು ಕಾರ್ಯಪ್ರವೃತ್ತರಾಗಿ. 

ಕುಂಭ:– ಮೇಲೆ ನಯಗಾರಿಕೆ ಒಳಗೆ ಹಾವಿನ ವಿಷದ ಜನ ಸಿಗುತ್ತಾರೆ. ಸಮಾಜದಲ್ಲಿ ಎರಡು ತರಹದ ಜನ ಇದ್ದೇ ಇರುತ್ತಾರೆ. ನಾವು ಅವರನ್ನು ಬದಲಿಸಲು ಸಾಧ್ಯವಿಲ್ಲ. ನಾವೇ ಬದಲಾಗಬೇಕು. ಹಾಗಾಗಿ ಈ ದಿಶೆಯಲ್ಲಿ ಚಿಂತಿಸಿ. 

ಮೀನ:- ಹಲ್ಲಿದ್ದಾಗ ಕಡಲೆಯಿಲ್ಲ. ಕಡಲೆ ಇದ್ದಾಗ ಹಲ್ಲು ಇಲ್ಲ ಎಂಬಂತೆ ಭಗವಂತ ಸಕಲ ಸವಲತ್ತನ್ನು ನೀಡಿದರೂ ಅನುಭವಿಸುವ ಯೋಗವಿಲ್ಲದಂತೆ ಆಗುವುದು. ಅದಕ್ಕಾಗಿ ಭಗವಂತನನ್ನೆ ಮೊರೆ ಹೋಗುವುದು ಒಳಿತು.