ಶಿರಸಿ:-  ಕಾಡಿನಿಂದ ನಾಡಿಗೆ ಬಂದ ಚಿರತೆ ಬಾವಿಗೆ ಬಿದ್ದ ಘಟನೆ ತಾಲೂಕಿನ ಹಿತ್ಲತೋಟ ಗ್ರಾಮದಿಂದ ವರದಿಯಾಗಿದೆ. ಗ್ರಾಮದ ವೆಂಕಟರಮಣ ಹೆಗಡೆ ಎನ್ನವವರ ಮನೆಯ ಬಾವಿಗೆ ಚಿರತೆ ಬಿದ್ದಿದ್ದು ನಿನ್ನೆ ರಾತ್ರಿ ವೇಳೆ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿತ್ತು ಎನ್ನಲಾಗಿದೆ .

RELATED ARTICLES  ದಾಂಡೇಲಿ- ಹೊನ್ನಾವರ ಬಸ್ ಅಪಘಾತ: ಹಲವರಿಗೆ ಗಾಯ

    ಚಿರತೆ ಆಹಾರ ಹುಡುಕುತ್ತ ಅಲ್ಲಿ ಕಂಡ ನಾಯಿಗಳನ್ನು ಬೇಟೆಯಾಡುವ ಅವಸರದಲ್ಲಿ ಬಾವಿಗೆ ಬಿದ್ದಿದ್ದು ಬಾವಿಗೆ ಬಿದ್ದ ಶಬ್ದ ಕೇಳಿದ ಮನೆಯವರು ನೋಡಿದಾಗ ಚಿರತೆ ಬಿದ್ದಿರುವ ದೃಶ್ಯ ಮನೆಯವರಿಗೆ ಕಂಡು ಬಂದಿದೆಯಂತೆ. ನಂತರ ಈ ಕುರಿತು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದೆ.

RELATED ARTICLES  ಇಂದಿನ ನಿಮ್ಮ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟ ಸಂಖ್ಯೆ ಯಾವುದೆಂದು ತಿಳಿಯಿರಿ.


ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ರೋಪ್ ಮೂಲಕ  ಚಿರತೆಯನ್ನು ಮೇಲಕ್ಕೆ ಎತ್ತಿದ್ದಾರೆ.ಮೇಲೆ‌ ಬಂದ ತಕ್ಷಣ ‌ಚಿರತೆ ಅರಣ್ಯದ ಕಡೆ ಓಡಿ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ಚಿರತೆಯನ್ನು ನೋಡಿದ ಜನ ಕ್ಷಣ ಕಾಲ ಬೆಚ್ಚಿದ್ದರು ಎನ್ನಲಾಗಿದೆ.