ಕುಮಟಾ: ಜನತೆಗೆ ಅತ್ಯುತ್ತಮ ಸೇವೆ ಹಾಗೂ ಅತ್ಯುತ್ತಮ ಬೇಕರಿ ಸಾಮಾನುಗಳನ್ನು ,ತಿಂಡಿ ತಿನಿಸುಗಳನ್ನು ಮತ್ತು ಸ್ವೀಟ್ಸ್ ಗಳನ್ನು ನೀಡುವ ಉದ್ದೇಶದಿಂದ ಎಸ್.ವಿ ಅಯ್ಯಂಗಾರ್ ಬೇಕರಿ & ಸ್ವೀಟ್ಸ್ ಮಳಿಗೆ ಶುಭಾರಂಭಗೊಂಡಿದೆ. ನೆಲ್ಲಿಕೇರಿಯ ದಿ. ಮೋಹನ್ ಕೆ ಶೆಟ್ಟಿ ಅವರ ಮನೆಯ ಎದುರಿನಲ್ಲಿರುವ ಈ ಮಳಿಗೆಯಲ್ಲಿ ಗ್ರಾಹಕರಿಗಾಗಿ ವೈವಿಧ್ಯಮಯ ಬೇಕರಿ ತಿಂಡಿ ತಿನಿಸುಗಳು ಹಾಗೂ ಸಿಹಿ ಪದಾರ್ಥಗಳು ಲಭ್ಯವಿದೆ.
ಅತ್ಯಂತ ಶುದ್ಧ ಹಾಗೂ ಸ್ವಾದಿಷ್ಟ ರುಚಿಕರ ತಿಂಡಿ ತಿನಿಸುಗಳು ವೈವಿಧ್ಯಮಯ ಬರ್ತ್ ಡೇ ಕೇಕ್ ಗಳು ಇಲ್ಲಿ ಲಭ್ಯವಿದೆ .ಅದಲ್ಲದೇ ಗ್ರಾಹಕರು ಬಯಸಿದಲ್ಲಿ ಮೊದಲೇ ಆರ್ಡರ್ ನೀಡಿದರೆ ಎಲ್ಲ ಮಾದರಿಯ ಕೇಕ್ ತಯಾರಿಸಿ ಕೊಡಲಾಗುವುದೆಂದು ಮಾಲಿಕರಾದ ಅನಿಲ ನಾಯ್ಕ ತಿಳಿಸಿದ್ದಾರೆ. ಅದಷ್ಟೇ ಅಲ್ಲದೇ ಎಲ್ಲ ವಿಧದ ಬೇಕರಿ ಐಟಂಗಳು, ತಿಂಡಿ ತಿನಿಸುಗಳು, ಐಸ್ ಕ್ರೀಮ್ ಗಳು ಹಾಗೂ ಸ್ವೀಟ್ ಗಳು ಈ ಮಳಿಗೆಯಲ್ಲಿ ಲಭ್ಯವಿದೆ .
ಶುಚಿ ಹಾಗೂ ರುಚಿಯನ್ನೇ ಪ್ರಧಾನ ಧ್ಯೇಯವಾಗಿಸಿಕೊಂಡು ಸ್ಥಾಪಿತವಾದ ಈ ಮಳಿಗೆಯ ಸೌಲಭ್ಯವನ್ನು ಜನತೆ ಪಡೆಯಬೇಕಿದೆ. ಅದಲ್ಲದೆ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ತಿಂಡಿ ತಿನಿಸುಗಳನ್ನು ಇಲ್ಲಿ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ .