ಕುಮಟಾ: ಭಾರತೀಯ ಜನಸಂಘದ ಸಂಸ್ಥಾಪಕರಾದ ದಿ.ಪಂಡಿತ ದೀನದಯಾಳ ಉಪಾಧ್ಯಾಯ ರ ಸಂಸ್ಮರಣೆಯ ಅಂಗವಾಗಿ ಮೂರೂರು ಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಇಂದು ಸಮರ್ಪಣಾದಿವಸ ಕಾರ್ಯಕ್ರಮ ಜರುಗಿತು.ವಕ್ತಾರರಾಗಿ ಆಗಮಿಸಿದ ಚಿದಾನಂದ ಭಂಡಾರಿ ಯವರು ಮಾತನಾಡಿ ಪಂಡಿತ ದೀನದಯಾಳರ ಜೀವನದ ಪ್ರಮುಖ ಘಟನೆಗಳನ್ನು ಸ್ಮರಿಸಿದರು.ಕಳೆದ ಕೆಲವು ವರ್ಷಗಳಲ್ಲಿ ದೇಶದ ಗಡಿಪ್ರದೇಶಗಳಲ್ಲಿ ಹೊರತು ಪಡಿಸಿ ಎಲ್ಲಿಯೂ ಭಯೋತ್ಪಾದನಾ ಚಟುವಟಿಕೆಗಳು ನೆಡೆಯಲ್ಲಿಲ್ಲ.ದೇಶ ಸುಭದ್ರವಾಗಿದೆ ಉಪಾಧ್ಯಾಯರು ಅಂದು ಕಂಡ ಕನಸುಗಳು ಇಂದು ಸಾಕಾರಗೊಳ್ಳುತ್ತಿದೆ ಎಂದರು.
ಭಾಜಪಾ ಯುವಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಪ್ರಶಾಂತ ನಾಯ್ಕ ಮಾತನಾಡಿ ಮುಂದಿನ ಕಾರ್ಯ ಯೋಜನೆಗಳನ್ನು ವಿವರಿಸಿದರು.ವೇದಿಕೆಯಲ್ಲಿ ಶ್ರೀ ದತ್ತಾತ್ರಯ ಭಟ್ಟ ,ಶ್ರೀ ಕೆ, ವಿ ಹೆಗಡೆ ಉಪಸ್ಥಿತರಿದ್ದರು.ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉದ್ಯಮಿ ಶ್ರೀ ರಾಜಾರಾಮ್ ಭಟ್ಟ ಅವರು ಮಾತಾಡಿ ಮೋದಿಯವರ ಕಾರ್ಯವೈಖರಿ ಅತ್ಯದ್ಭುತವಾದ್ದು .ಅವರನ್ನು ಖುದ್ದಾಗಿ ಭೇಟಿ ಮಾಡುವ ಅವಕಾಶ ತನಗೆ ದೊರೆತಿದ್ದು .ಅದರ ಪರಿಣಾಮ ನಮ್ಮೂರಿಗೆ ಅಮೂಲ್ಯ ಕೊಡುಗೆಯೊಂದು ಬರುವ ದಿನಗಳಲ್ಲಿ ದೊರೆಯಲಿದೆ ಇದು ನಮ್ಮ ಸೌಭಾಗ್ಯ .ಮೋದಿ ಗೆಲುವಿಗೆ ಮಾನವ ಶ್ರಮದ ಜೊತೆ ದೈವಿಕ ಅನುಗ್ರಹಕ್ಕಾಗಿ ಮಹಾಯಾಗ ಮಾಡಿಸುವ ಸಂಕಲ್ಪ ನಮ್ಮದಾಗಿದ್ದು ಇದನ್ನು ನಾವೆಲ್ಲಸೇರಿ ಸಾಕಾರಗೊಳಿಸೋಣ ಎಂದರು.
ಈ ಸಂದರ್ಭದಲ್ಲಿ ಮಂಡಳ ಉಪಾಧ್ಯಕ್ಷ ಜಿ ಆಯ್ ಹೆಗಡೆ ತಾಲೂಕ ಯುವಮೋರ್ಚಾ ಅಧ್ಯಕ್ಷ ವಿಶ್ವನಾಥ ನಾಯ್ಕ, ಯುವಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಮುಕ್ರಿ ಉಪಸ್ಥಿತರಿದ್ದರು.