ಭಟ್ಕಳ- ರಥಸಪ್ತಮಿ ಪ್ರಯುಕ್ತ ಇಲ್ಲಿನ ಪ್ರಸಿದ್ಧ ದೇವಾಲಯ ಆಸರಕೇರಿ ತಿರುಮಲ ವೆಂಕಟರಮಣ ದೇವಾಲಯ ದಲ್ಲಿ ನಡೆದ ನಿನಾದ ಸಾಹಿತ್ಯ ಸಂಗೀತ ಸಂಚಯದ ಉಮೇಶ ಮುಂಡಳ್ಳಿ ತಂಡದವರು ನಡೆಸಿಕಪಟ್ಟ ಭಕ್ತಿ ಸಂಗೀತ ಕಾರ್ಯಕ್ರಮ ಭಕ್ತಿಯ ಸಂಚಲನವನ್ನು ಉಂಟುಮಾಡಿತು.


ರಥಸಪ್ತಮಿ ದಿನದಂದು ದೇವಾಲಯ ಪುನರ್ ಪ್ರತಿಷ್ಠೆ ವರ್ಧಂತಿ ಉತ್ಸವದ ನಿಮಿತ್ತ ಬೆಳಿಗ್ಗೆ ೬.೩೦ ರಿಂದ ೧೧.೩೦ ರವರೆಗೆ ಸತತ ಎರಡು ಗಂಟೆಯವರೆಗೆ ನಿನಾದದ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಹಾಗೂ ತಂಡದವರು ಭಕ್ತಿ ಸಂಗೀತ ನಡೆಸಿಕೊಟ್ಟರು. ಮುಂಡಳ್ಳಿ ಯವರ ಹಾಡಿದ ಪುರಂದರದಾಸರ, ವಿಜಯದಾಸರ ಹರಿಭಕ್ತಿಗೀತೆಗಳು ಎಲ್ಲರ ಮನದಲ್ಲಿ ಭಕ್ತಿ ರಸ ಹರಿಸಿದವು.

RELATED ARTICLES  ಗಜು ಪೈ ಅಭಿಮಾನಿಗಳ ಬಳಗದವರಿಂದ ಯಶಸ್ವಿಯಾಗಿ ಸಂಯೋಜನೆಗೊಂಡ ಪೈ ಬ್ರದರ್ಸ್ ಟ್ರೋಫಿ.


ಕೊನೆಯಲ್ಲಿ ಹಾಡಿದ ಯೋಗಿ ಮನೆಗೆ ಬಂದ ಹಾಡಿಗೆ ಧರ್ಮಸ್ಥಳ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳು ಮನದುಂಬಿ ಹರಸಿ ಗಾಯಕ ಉಮೇಶ ಮುಂಡಳ್ಳಿಯವರಿಗೆ ಸಾಲು ಹೊದಿಸಿ ಸನ್ಮಾನಿಸಿ ಆಶಿರ್ವದಿಸಿದರು. ಕೀಬೋರ್ಡ್ ನಲ್ಲಿ ನವೀನ ಶೇಟ್ ಹೊನ್ನಾವರ, ತಬಲದಲ್ಲಿ ಹರೀಶ್ ಶೇಟ್ ಧಾರೇಶ್ವರ ಅವರು ಮುಂಡಳ್ಳಿ ಯವರಿಗೆ ಸಾಥ್ ನೀಡಿದರು.

RELATED ARTICLES  ನಕಲಿ ಹಿಂದುತ್ವವಾದಿ ನಾನಲ್ಲ : ಶಾಸಕ ಸುನೀಲ್ ನಾಯ್ಕ.