ಗೋಕರ್ಣ: ರಥಸಪ್ತಮಿ ದಿನವಾದ ಇಂದು ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದ ಮಹಾರಥದ ಬುಡವನ್ನು ರಥದ ಮನೆಯಿಂದ ಪೂಜೆಸಲ್ಲಿಸಿ ಹೊರತರಲಾಯಿತು. ವೇ. ನಾರಾಯಣ ಪಂಡಿತ ಇವರು ರಥದಲ್ಲಿರುವ ಗಣಪತಿಗೆ ಪೂಜೆ ನೆರವೇರಿಸಿದರು.ಉಪಾಧಿವಂತ ಮಂಡಳದ ಸದಸ್ಯರು, ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ, ರಥಕಟ್ಟುವ ಹಾಲಕ್ಕಿ ಸಮಾಜದವರು, ರಥ ಚಾಲನೆ ಮಾಡುವ ಖಾರ್ವಿ ,ಗಾಬಿತ ಸಮಾಜದವರು, ಆಚಾರಿಗಳು ಮತ್ತು ಊರ ನಾಗರೀಕರು ಉಪಸ್ಥಿತರಿದ್ದರು. 

RELATED ARTICLES  ಕುಮಟಾದಲ್ಲಿ "ಭೀಮಪಲಾಸ"- ಪಂಡಿತ್ ಭೀಮಸೇನ್ ಜೋಶಿ ಜನ್ಮ ಶತಮಾನೋತ್ಸವ; ವಿದುಷಿ ಮಂಜೂಷಾ ಕುಲಕರ್ಣಿ ಪಾಟೀಲ ಗಾಯನ


ವಿಲಂಬಿ ಸಂವತ್ಸರದ ಶಿವರಾತ್ರಿ ಮಹೋತ್ಸವವು ಮಾಘ ಕೃಷ್ಣ ನವಮಿಯಿಂದ ಫಾಲ್ಗುಣ ಶುಕ್ಲ ದ್ವಿತೀಯಾ (28-02-2019 ರಿಂದ 08-03-2019) ವರೆಗೆ ಪ.ಪೂ.ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರಮಠ ಇವರ ದಿವ್ಯ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಜರುಗಲಿದೆ. ದಿ.04-03-2019 ಸೋಮವಾರ ಶಿವಯೋಗ ಮತ್ತು ದಿ. 07-03-2019 ಗುರುವಾರ ಶ್ರೀಮನ್ಮಹಾರಥೋತ್ಸವ ಜರುಗಲಿದೆ. 

RELATED ARTICLES  ಸಂಗೀತ ಪರೀಕ್ಷೆಯಲ್ಲಿ ಕುಮಟಾ ಬಾಲಕಿಯರ ಸಾಧನೆ