ಅಂಕೋಲಾ: ಜಿ.ಸಿ ಕಾಲೇಜಿನ ವಿಶ್ರಾಂತ ಸಂಸ್ಕøತ ಪ್ರಾಧ್ಯಾಪಕರಾದ ಡಾ.ಎಸ್.ಎನ್.ಭಟ್ ರವರ ಪತ್ನಿ ಲೇಖಕಿ ಶ್ರೀಮತಿ ಕಲಾ ಭಟ್  ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಓದು-ಬರವಣಿಗೆಯಲ್ಲಿ ತೊಡಗಿಸಿಕೊಂಡ ಕಲಾ ಭಟ್‍ರವರ ಹಲವು ಕವನ,ಪ್ರಬಂಧಗಳು,ಕರಾವಳಿ ಮುಂಜಾವು ಪತ್ರಿಕೆಯನ್ನು ಒಳಗೊಂಡಂತೆ ನಾಡಿನ ಹಲವು ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿವೆ. ಎರಡು ವರ್ಷದ ಹಿಂದೆ ‘ಪರಿಧಿಯಿರದ ದಾರಿ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಮೃತರು, ಮಗಳು ಡಾ.ರಶ್ಮಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

RELATED ARTICLES  ವಿಶ್ವಕರ್ಮ ಸಮಾಜದ ಬಡವರ ನೆರವಿಗೆ ನಿಂತ ರಾಜೇಶ ಆಚಾರ್ಯ

ಸಂತಾಪ : ಮೃತರ ವಾರ್ತೆ ತಿಳಿಯುತ್ತಿದ್ದಂತೆ ಹಲವು ಸಾಹಿತಿಗಳು, ಲೇಖಕರು,ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು.