ಮೇಷ:- ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಆಗುವುದು. ಕೆಲವರಿಗೆ ತಮ್ಮ ಕಚೇರಿಯಲ್ಲಿನ ಉಸಿರುಗಟ್ಟುವ ವಾತಾವರಣದಿಂದ ಕೆಲಸಕ್ಕೆ ರಾಜೀನಾಮೆ ನೀಡುವಂತಹ ಸಂದರ್ಭ ಬರುವುದು. ಯಾವುದಕ್ಕೂ ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ.
ವೃಷಭ:- ನಿಮ್ಮ ಯೋಜನೆಗಳು ಯಾವಾಗಲೂ ವಿಶೇಷತೆಯಿಂದಲೇ ಕೂಡಿರುತ್ತವೆ. ಹಾಗಾಗಿ ನೀವು ಬೇರೆಯವರಿಗಿಂತ ಬೇಗನೆ ಜಯಶಾಲಿಗಳಾಗುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಮಿಥುನ:- ಗೊತ್ತಿದ್ದು ಗೊತ್ತಿದ್ದೂ ಅಯೋಗ್ಯರ ಸಂಗಡ ನಿಮ್ಮ ಮುಂದಿನ ಕಾರ್ಯ ರೂಪರೇಷೆಗಳ ವಿಚಾರವನ್ನು ಪ್ರಸ್ತಾಪಿಸದಿರಿ. ಇದರಿಂದ ನಿಮಗೆ ಮುಂದೊಂದು ದಿನ ತೊಂದರೆಯಾಗುವುದು. ಕೆಲಕಾಲ ನಿಮ್ಮ ಮನಸ್ಸಿನ ಆಲೋಚನೆಗಳನ್ನು ಹೊರಗೆಡಹದಿರಿ.
ಕಟಕ:- ದೂರದ ಸಂಬಂಧಿಗಳು ಅಥವಾ ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅವರಿಗೆ ಅಗತ್ಯವಾದ ಸಲಹೆ ಸಹಕಾರ ನೀಡಿ ಸಂತೋಷ ಪಡಿಸುವಿರಿ.
ಸಿಂಹ:- ಯಾರನ್ನೂ ದಿಢೀರನೆ ನಂಬಬೇಡಿ. ಅಂತೆಯೇ ನಿಮ್ಮ ಕಾರ್ಯ ಯೋಜನೆಗೆ ಸಹಾಯವಾಗುವ ವಿಷಯವನ್ನು ಖಂಡಿತವಾಗಿ ಪರಿಶೀಲಿಸಿ. ಮನೆ ಸದಸ್ಯರೊಡನೆ ಮತ್ತು ನೆರೆಹೊರೆ ಜನರೊಂದಿಗೆ ಉತ್ತಮ ಬಾಂಧವ್ಯಇರಿಸಿಕೊಳ್ಳುವುದು ಕ್ಷೇಮ.
ಕನ್ಯಾ:- ಕಾರ್ಯಾರಂಭ ಮುನ್ನವೇ ನಾನು ಸೋಲಬಹುದು ಎಂಬ ಭಯವನ್ನು ನೀವು ಬಿಡುವುದು ಒಳ್ಳೆಯದು. ಭಗವಂತನ ನಾಮಸ್ಮರಣೆಯೊಂದಿಗೆ ಕಾರ್ಯ ಆರಂಭಿಸಿ. ನಿಮ್ಮ ಸದೀಚ್ಛೆಯಂತೆ ಭಗವಂತ ಕರುಣೆ ತೋರುವನು.
ತುಲಾ:- ಎಲ್ಲಾ ಕಾರ್ಯ, ಕಲಾಪಗಳಲ್ಲಿ ಸೋಲು ಕಾಣುತ್ತಿರುವ ಈ ಸಂದರ್ಭದಲ್ಲಿ ಸಕಲ ನಿರ್ವಿಘ್ನದಾಯಕನಾದ ಚೇತೋಹಾರಿ ಮಹಾಗಣಪನನ್ನು ಆರಾಧಿಸಿ. ಆತನ ಕೃಪೆಯಿಂದ ನಿಮ್ಮ ಎಲ್ಲಾ ಕಾರ್ಯಗಳು ಕೈಗೂಡುವವು.
ವೃಶ್ಚಿಕ:- ಭಗವಂತನ ಆಟ ಬಲ್ಲವರಾರು. ಒಮ್ಮೆ ಸುಖ ಕೊಡುವನು ಮತ್ತೊಮ್ಮೆ ದುಃಖವನ್ನುಂಟು ಮಾಡುವನು. ಅಂತೆಯೇ ನಿಮ್ಮನ್ನು ಗೌರವಿಸುವ ಅಭಿಮಾನಿಗಳ ಪ್ರಶಂಸೆ ನಿಮ್ಮನ್ನು ಹುರಿದುಂಬಿಸುವುದು. ಮುಂದಿನ ಕಾರ್ಯಗಳಿಗೆ ನಾಂದಿ ಆಗುವುದು.
ಧನಸ್ಸು:- ನಿಮ್ಮನ್ನು ಎದುರಿಗೆ ಹಾಡಿ ಹೊಗಳುವವರೇ ನಿಮ್ಮನ್ನು ಮಟ್ಟಹಾಕಲು ಒಳಸಂಚು ರೂಪಿಸುವರು. ದುಷ್ಮನ್ ಕಹಾ ಹೇ ಅಂತ ನೋಡಿದರೆ ಬಗಲ್‌ಮೇ ಹೇ ಎನ್ನುವಂತಹ ಸ್ಥಿತಿ ನಿರ್ಮಾಣವಾಗುವುದು. ಯಾವುದಕ್ಕೂ ಸನ್ನದ್ಧರಾಗಿರಿ.
ಮಕರ:- ಬಹುದಿನಗಳ ಕನಸು ಭಾವನಾತ್ಮಕ ಸಂಬಂಧದಿಂದ ನನಸಾಗುವುದು. ಅನಿರೀಕ್ಷಿತವಾಗಿ ಹೊಸದಾದ ಆಲೋಚನೆ ನಿಮ್ಮನ್ನು ಹೊಸ ಕಾರ್ಯಕ್ಕೆ ಪ್ರೇರೇಪಿಸುವುದು. ಹಣಕಾಸು ಕೂಡಾ ಸೂಕ್ತ ಸಮಯದಲ್ಲಿ ದೊರೆಯುವುದು.
ಕುಂಭ:- ಗಾಳಿಗೆ ಗುದ್ದಿ ಮೈ ನೋಯಿಸಿಕೊಂಡ ಹಾಗೆ ಇಂದಿನ ಪರಿಸ್ಥಿತಿ. ನಿಮ್ಮ ಅನುಭವದ ಹಿನ್ನೆಲೆಯಲ್ಲಿ ನೀವು ಪರರಿಗೆ ಉಪಕಾರ ಆಗಲಿ ಎಂದು ಬುದ್ಧಿಮಾತು ಹೇಳಿದರೆ ಅದು ವ್ಯರ್ಥವಾಗುವುದು. ವ್ಯರ್ಥವಾಗುವ ಇಂತಹ ಕಾರ್ಯಗಳಿಗೆ ಕೈ ಹಾಕಬೇಡಿ.
ಮೀನ:- ಅನಿರೀಕ್ಷಿತ ಬೆಳವಣಿಗೆಯೊಂದು ನಿಮ್ಮ ದಿನದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಸಾಧ್ಯವಾದರೆ ವಿಷ್ಣುವಿನ ಸ್ತೋತ್ರ ಪಠಿಸಿ. ತಾಳ್ಮೆಯಿಂದ ಪರಿಸ್ಥಿತಿ ಎದುರಿಸಿ.