ಕುಮಟಾ- ಕುಮಟಾ ಜಾತ್ರೆಯ ಪ್ರಯುಕ್ತ ಮಣಕಿ ಮೈದಾನದಲ್ಲಿ ಏರ್ಪಡಿಸಲಾದ ಪೆರ್ಡೂರು ಮೇಳದ ಯಕ್ಷಗಾನ ವೇದಿಕೆಯಲ್ಲಿ ಪ್ರತಿ ವರ್ಷದಂತೆ ಕಲಾಗಂಗೋತ್ರಿ – ಕುಮಟಾ ಇವರಿಂದ ಅಶಕ್ತ ಕಲಾವಿದರಿಗೆ     ದಿ|| ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ಹಾಗೂ ಸಾಧಕರಿಗೆ ಕಲಾಗಂಗೋತ್ರಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.

    ಕಲಾಗಂಗೋತ್ರಿ ಸಂಸ್ಥೆಯ ಸ್ಥಾಪಕರಾದ ಸಾಮಾಜಿಕ ಕಾರ್ಯಕರ್ತ ದಿ|| ದುರ್ಗಾದಾಸ ಗಂಗೊಳ್ಳಿಯವರ ಸ್ಮರಣಾರ್ಥ ಸ್ಥಾಪಿಸಲಾದ ಅಶಕ್ತರಿಗಾಗಿ ನೀಡುತ್ತಿರುವ ದಿ|| ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿಯನ್ನು ಈ ಬಾರಿ ಯಕ್ಷಗಾನ ಹಿರಿಯ ವಸ್ತ್ರಾಲಂಕಾರ ಕಲಾವಿದರಾದ ಶ್ರೀ ಮಾದೇವ ಜಟ್ಟಪ್ಪ ನಾಯ್ಕ, ಬಗ್ಗೋಣ ಇವರಿಗೆ  ರೂಪಾಯಿ ಹದಿನೈದು ಸಾವಿರ ನಗದು ಸಹಿತ ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಸಾಧಕರಿಗಾಗಿ ನೀಡಲಾಗುತ್ತಿರುವ ಕಲಾಗಂಗೋತ್ರಿ ಪ್ರಶಸ್ತಿಯನ್ನು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕøತರಾದ ಶ್ರೀ ಎಂ.ಬಿ. ನಾಯ್ಕ, ಕಡಕೇರಿ ಸಿದ್ಧಾಪುರ ಇವರಿಗೆ, ಹಿರಿಯ ಯಕ್ಷಗಾನ ಚಂಡೆವಾದಕರಾದ ಶ್ರೀ ರಾಮಚಂದ್ರ ಉಪ್ಪ ಪಟಗಾರ, ಮಾಸೂರು ಹಾಗೂ ಕಲಾಪೋಷಕರಾದ ಬಾಬು ರಾಮ ಮಡಿವಾಳ ಹೊನ್ನಾವರ ಇವರಿಗೆ ಪ್ರದಾನ ಮಾಡಲಾಯಿತು.

RELATED ARTICLES  ಅತಿಕ್ರಮಿತ ಸ್ಮಶಾನ ತೆರವುಗೊಳಿಸಲು ಎ.ಸಿ ಸೂಚನೆ

    ಸಮಾರಂಭವನ್ನು ಉದ್ಘಾಟಿಸಿದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಶ್ರೀ ಅರವಿಂದ ಕರ್ಕಿಕೋಡಿ ಇವರು ಮಾತನಾಡಿ ಕನ್ನಡ ಮಣ ್ಣನ ಹೆಮ್ಮೆಯ ಯಕ್ಷಗಾನ ಕಲೆಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಲಾಗಂಗೋತ್ರಿಯ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ ಪ್ರೇಕ್ಷಕರು ಯಕ್ಷಗಾನ ಕಲೆಯಿಂದ ದೂರವಾಗದೇ ಯಕ್ಷಗಾನ ಕಲೆಯನ್ನು ಉಳಿಸಿ-ಬೆಳೆಸಲು ಸದಾ ಪ್ರೋತ್ಸಾಹಿಸಬೇಕು, ತಮ್ಮೆಲ್ಲರ ಸಹಕಾರದಿಂದಲೇ ನಮ್ಮ ಸಂಸ್ಥೆಯು ಯಕ್ಷಕಲಾ ಸೇವೆಯನ್ನು ನಡೆಸುತ್ತಾ ಬಂದಿದೆ, ಮುಂದೆಯೂ ತಮ್ಮೆಲ್ಲರ ಸಹಾಯ-ಸಹಕಾರ ಅವಶ್ಯವಿದೆ ಎಂದರು. ಮುಖ್ಯ ಅತಿಥಿಗಳಾಗಿ ಕುಮಟಾ ಎ.ಪಿ.ಎಂ.ಸಿ. ಹಾಗೂ ಅರ್ಬನ್ ಬ್ಯಾಂಕ ಅಧ್ಯಕ್ಷರಾದ ರಾಮನಾಥ ಶ್ರೀಧರ ಶಾನಭಾಗ (ಧೀರೂ) ಇವರು ಮಾತನಾಡಿ ಕಲಾಗಂಗೋತ್ರಿ ಬಳಗದವರು ಹಲವಾರು ವರ್ಷಗಳಿಂದ ಯಕ್ಷಕಲಾ ಕಲಾಸೇವೆಯನ್ನು ಮಾಡುತ್ತಾ ಬಂದಿದ್ದು, ಇವರ ಕಾರ್ಯ ಚಟುವಟಿಕೆಗಳನ್ನು ಕಲಾಭಿಮಾನಿಗಳಾದ ತಾವೆಲ್ಲರೂ ಬೆಂಬಲಿಸಬೇಕು ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ನಿವೃತ್ತ ಸಹಾಯಕ ಕೃಷಿ ನಿರ್ದೇಶಕರಾದ ಎಸ್.ವಿ. ಹೆಗಡೆ, ಲೆಕ್ಕಪರಿಶೋಧಕರಾದ ಶ್ರೀ ವಿನಾಯಕ ಹೆಗಡೆ, ಪಿ.ಎಲ್.ಡಿ. ಬ್ಯಾಂಕ ಅಧ್ಯಕ್ಷರಾದ ಭುವನ ಭಾಗ್ವತ, ಎಡನ್ ಹೋಂಸ್ಟೇ ಬರಗದ್ದೆಯ ಮಾಲಿಕರಾದ ಎನ್.ಎಸ್. ಹೆಗಡೆ, ಉದ್ದಿಮೆದಾರರಾದ ಜಗದೀಶ ಭಟ್ಟ, ನಿತಿನ ನಾಯಕ ಹಾಗೂ ಪ್ರಶಸ್ತಿ ಪುರಸ್ಕøತರ ಪರವಾಗಿ ಎಂ.ಬಿ. ನಾಯ್ಕ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕಲಾಗಂಗೋತ್ರಿಯ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

RELATED ARTICLES  ಚಿತ್ರಾಪುರದಲ್ಲಿ ಅ.7 ಕ್ಕೆ ನಿನಾದ ದಸರಾ ಕಾವ್ಯೋತ್ಸವ

    ಕಲಾಗಂಗೋತ್ರಿಯ ಕಾರ್ಯದರ್ಶಿ ಆರ್.ಡಿ. ಪೈ ಸ್ವಾಗತಿಸಿದರು. ಉಪಾಧ್ಯಕ್ಷ ಗಣೇಶ ಭಟ್ಟ ವಂದನಾರ್ಪಣೆ ಮಾಡಿದರು. ಎಸ್.ಟಿ. ಭಟ್ಟ ನಿರೂಪಿಸಿದರು. ಕಲಾಗಂಗೋತ್ರಿಯ ಸದಸ್ಯರಾದ ಎಂ.ಟಿ. ನಾಯ್ಕ, ಶ್ರೀಪತಿ ನಾವುಡ, ಡಾ|| ಎಂ.ಆರ್. ನಾಯಕ, ವಸಂತ ಪಂಡಿತ ಸನ್ಮಾನ ಪತ್ರ ವಾಚಿಸಿದರು. ಡಾ|| ಜಿ.ಎಸ್.ಭಟ್ಟ, ರವಿ ನಾಯ್ಕ, ವೆಂಕಟೇಶ ಹೆಗಡೆ, ಶ್ರೀಧರ ಶಾಸ್ತ್ರಿ, ಗಣಪತಿ ಹೆಗಡೆ, ಅಶೋಕ ಗೌಡ, ಅಶೋಕ ಭಟ್ಟ, ನಾಗರಾಜ ಆಚಾರ್ಯ ಇನ್ನಿತರರು ಸಹಕರಿಸಿದರು. ಸಭಾಕಾರ್ಯಕ್ರಮದ ನಂತರ ಪೆರ್ಡೂರು ಮೇಳದಿಂದ “ಪೂರ್ವಿ ಕಲ್ಯಾಣ ” ಯಕ್ಷಗಾನ ಪ್ರದರ್ಶನಗೊಂಡಿತು.