ಧರ್ಮಸ್ಥಳ: ಬಾಹುಬಲಿ ಮಹಾಮಸ್ತಕಾಭಿಷೇಕದ ಪ್ರಯುಕ್ತ ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಪಂಚ ಮಹಾವೈಭವ ರೂಪಕದ ವೇದಿಕೆ ಬಳಿ ಚಪ್ಪರ ಗುರುವಾರ ಮಧ್ಯಾಹ್ನ ಕುಸಿದುಬಿದ್ದಿದ್ದು, ಐವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. 

ಮಧ್ಯಾಹ್ನ ಊಟದ ಸಮಯವಾಗಿದ್ದು, ಪಂಚ ಮಹಾವೈಭವ ರೂಪಕ ಪ್ರದರ್ಶಿಸಲು ಬೃಹತ್ ಚಪ್ಪರ ಹಾಕಲಾಗಿತ್ತು. ಚಪ್ಪರದ ಒಂದು ಬದಿ ತಾನಾಗೇ ಕುಸಿದು ಬಿದ್ದಿದ್ದು, ಸುಮಾರು 30 ಜನರು ಆ ಸಂದರ್ಭದಲ್ಲಿ ಒಳಗಿದ್ದರು ಎನ್ನಲಾಗಿದೆ. ಚಪ್ಪರದಡಿ ಸಿಲುಕಿದ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ತಕ್ಷಣ ಅವರನ್ನು ಉಜಿರೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

RELATED ARTICLES  ಮಹಿಳೆಯನ್ನು ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿದ್ದ ಪ್ರಕರಣದ ಆರೋಪಿ ಅರೆಸ್ಟ್

ಮಧ್ಯಾಹ್ನ ಊಟದ ವಿರಾಮಕ್ಕೂ ಮೊದಲು ಪಂಚ ಮಹಾ ವೈಭವ ಕಾರ್ಯಕ್ರಮ, ಪುಸ್ತಕ ಬಿಡುಗಡೆ ನಡೆದಿತ್ತು. ಹೀಗಾಗಿ ಅದು ಮುಗಿದ ಬಳಿಕ ಜನರು ತೆರಳಿದ್ದರು. ಅದರಿಂದಾಗಿ ದೊಡ್ಡ ಅವಘಡ ತಪ್ಪಿಹೋಗಿದೆ. ಚಪ್ಪರ ಕುಸಿದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. 

RELATED ARTICLES  ಮಂಡ್ಯದ ಜನತೆ ಪ್ರಜಾಪ್ರಭುತ್ವದ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ: ಸುಮಲತಾ

source:VK NEWS