ಯಲ್ಲಾಪುರ; ವಿಶ್ವ ಹಿಂದೂ ಪರಿಷತ್, ವಿಶ್ವ ಹಿಂದೂ ಪರಿಷತ್ ಮಾತ್ರ ಮಂಡಳಿ ವತಿಯಿಂದ 12ನೇ ವರ್ಷದ ಅರಿಶಿನ ಕುಂಕುಮ ಕಾರ್ಯಕ್ರಮ ಸೋಮವಾರ ಸಂಜೆ ಗ್ರಾಮದೇವಿ ದೇವಸ್ಥಾನದಲ್ಲಿ ನಡೆಯಿತು.

ಮುಖ್ಯ ವಕ್ತಾರರಾಗಿ ಆಗಮಿಸಿದ ಧರ್ಮ ಜಾಗರಣ ಸಹ ಪ್ರಾಂತ ಸಂಯೋಜಕ ಗದಗನ ಹನುಮಂತ ಮಳಲಿ, ಭಾರತವು ಬ್ರಹ್ಮಾಂಡಕ್ಕೆ ದೇವರ ಜಗುಲಿಯಾಗಿದೆ. ಭಗವದ್ಗೀತೆ ಹಾಗೂ ವಚನಗಳು ಎಂದಿಗೂ ಸರ್ವಕಾಲಿಕವಾಗಿದ್ಫು ಅವು ಇಂದಿಗೂ ಬದಲಾಗುವುದಿಲ್ಲ. ಸಾಂಸ್ಕ್ರತಿಕ ಹಾಗೂ ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ನಮ್ಮ ದೇಶ ಪರೋಕ್ಷವಾಗಿ ಪಾಶ್ಚಿಮಾತ್ಯ ಸಂಸ್ಕ್ರತಿಯ ಕಡೆಗೆ ವಾಲುತ್ತಿರುವುದು ವಿಷಾದನೀಯ ಎಂದರು.
ಗುರು ಕುಲ ಶಿಕ್ಷಣ ಹೋಗಿ ಬದುಕಿಗಾಗಿ ಶಿಕ್ಷಣ ಬಂದಿದೆ. ತಾಯಿ ಮನೆಯ ಮೊದಲ ಗುರುವಾಗಿದ್ದು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಾಗ ಸಮಾಜಕ್ಕೆ ಒಳ್ಳೆಯ ನಾಗರಿಕರು ಸಿಗುತ್ತಾರೆ. ಉತ್ತಮ ನಾಗರಿಕರಿಂದ ದೇಶದ ಭವಿಷ್ಯವು ಉಜ್ವಲವಾಗಲಿದೆ ಎಂದು ಹೇಳಿದರು.

RELATED ARTICLES  ಬಡವರನ್ನು ಸೇರಬೇಕಿದ್ದ ಅಕ್ಕಿ ಅಕ್ರಮ ಸಾಗಾಟ ಪತ್ತೆಹಚ್ಚಿದ ಪೊಲೀಸರು.

ಇದೇ ಸಂದರ್ಭದಲ್ಲಿ ಪಟ್ಟಣದ ಮಹಿಳಾ ಆಟೋ ಚಾಲಕಿ ಅನ್ನಪೂರ್ಣ ಭಟ್ ಇವರನ್ನು ಸನ್ಮಾನಿಸಲಾಯಿತು. ಮಾತೆಯರು ಒಬ್ಬರಿಗೊಬ್ಬರು ಅರಿಶಿನ ಕುಂಕುಮ ಹಂಚಿಕೊಂಡರು.

RELATED ARTICLES  ಸಮುದ್ರಪಾಲಾಗುತ್ತಿದ್ದ ಪ್ರವಾಸಿಗನ ರಕ್ಷಣೆ

ಕಾರ್ಯಕ್ರಮ ಕಾರ್ಯಕಾರಿ ಸಮಿತಿ ಸಂಘಟಕ ರಾಮು ನಾಯ್ಕ, ಅಧ್ಯಕ್ಷೆ ಸುನೀತಾ ವೆರ್ಣೇಕರ, ವಿ.ಎಚ್.ಪಿ ಜಿಲ್ಲಾ ಅಧ್ಯಕ್ಷ ಎಸ್.ಎನ್.ಭಟ್ ಏಕಾನ್, ತಾಲೂಕ ಅಧ್ಯಕ್ಷ ನಾರಾಯಣ ನಾಯಕ . ಮಹಿಳಾ ಪ್ರಮುಖೆ ಗಿರಿಜಾ ಮಾವಳ್ಳಿ, ವೇದಿಕೆಯಲ್ಲಿದ್ದರು.
ವೀಣಾ ಯಲ್ಲಾಪುರಕರ ಸ್ವಾಗತಿಸಿದರು, ಶಾಮಲಿ ಪಾಠಣಕರ ನಿರೂಪಿಸಿದರು, ಕೊನೆಯಲ್ಲಿ ರಾಧಾ ಗುಡಿಗಾರ ವಂದಿಸಿದರು.
ಅರಿಶಿನ ಕುಂಕುಮ ಕಾರ್ಯಕ್ರಮದಲ್ಲಿ 600 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.