ಅಂಕೋಲಾ : ಕವಿತಾ ವಿಷ್ಣು ನಾಯ್ಕ ನಮ್ಮ ಕುಟುಂಬದ ಬಂಧುವಂತೆ ಇದ್ದವಳು ಅವಳಿಲ್ಲ ಎಂಬ ಸುದ್ದಿ ಕೇಳಿದ್ದೆ ನಾನು ತುಂಬಾ ದುಃಖಿತನಾದೆ. ವಿಷ್ಣು ನಾಯ್ಕರ ಸಾಂಸ್ಕøತಿಕ ಮತ್ತು ಸಾಹಿತ್ಯಿಕ ಪರಿಚಾರಿಕೆಯಲ್ಲಿ ವಿಷ್ಣು ನಾಯ್ಕರ ಪತ್ನಿ ಕವಿತಾ ತನ್ಮಯಳಾವಾಗಿ ದುಡಿದವಳು. ಮೈಸೂರಿನಲ್ಲಿ ಇರುವ ನನ್ನನ್ನು ಈ ಜಿಲ್ಲೆಗೆ ಪರಿಚಯಿಸಿದವರೆ ವಿಷ್ಣು ನಾಯ್ಕರು. ನನ್ನ ಐದು ಕೃತಿಗಳನ್ನು ಪ್ರಕಟಿಸಿದ ಹೆಮ್ಮೆ ‘ರಾಘವೆಂದ್ರ ಪ್ರಕಾಶನದ್ದು. ಈ ರೀತಿಯ ಸಾಂಸ್ಕøತಿಕ ಚಟುವಟಿಕೆಯಿಂದಲೇ ವಿಷ್ಣು ನಾಯ್ಕರ ಮತ್ತು ನಮ್ಮ ಕುಟುಂಬ ಹತ್ತಿರವಾದದ್ದು. ಕಳೆದ ಕೆಲವು ವರ್ಷಗಳ ಹಿಂದೆ ಆಕಸ್ಮಿಕವಾಗಿ ಕವಿತಾ ನಮ್ಮನ್ನು ಅಗಲಿದಾಗ ಅವಳ ನೆನಪಿಗಾಗಿ ನೀಡುವ ಜನಪರ, ಪ್ರಗತಿಪರ ದೋರಣೆಯ ಮಹಿಳೆಗೆ ನೀಡುವ “ಸಕಾಲಿಕ ಸಾಹಿತ್ಯ ಪ್ರಶಸ್ತಿ” ಅರ್ಥಪೂರ್ಣವಾದದ್ದು. ಈ ಮೂಲಕ ಕವಿತಾರನ್ನು ನೆನೆಯುತ್ತಿರಬಹುದು ಎಂದು ಪಂಪ ಪ್ರಶಸ್ತಿ ಪುರಸ್ಕøತ ನಾಡಿನ ನಾಮಾಂಕಿತ ಸಾಹಿತಿ ಪ್ರೋ|| ಡಾ. ಜಿ.ಎಚ್ ನಾಯಕ ತಮ್ಮ ಮನದಾಳದ ಅನಿಸಿಕೆಯನ್ನು ವ್ಯಕ್ತಪಡಿಸಿದರು.

RELATED ARTICLES  ಕುಮಟಾದಲ್ಲಿ ಇಂದು 22 ಮಂದಿಗೆ ಕೊರೋನಾ ಪಾಸಿಟೀವ್ : ಹೊನ್ನಾವರದಲ್ಲಿ ಹಬ್ಬಿದ ಕೊರೋನಾ ನಂಜು…!


ಹಿರಿಯ ಸಾಹಿತಿ ವಿಷ್ಣು ನಾಯ್ಕರ ಮನೆಯ ಪರಿಮಳದ ಅಂಗಳದ ಸದಾನಂದ ವೇದಿಕೆಯಲ್ಲಿ ನಡೆದ ಸಕಾಲಿಕ ಸಾಹಿತ್ಯ ಪ್ರಶಸ್ತಿ ಎರಡನೇ ಆವೃತಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಹಾಗೂ ಅಂಕೋಲೆ ಮತ್ತು ಮೈಸೂರಿನ ಕೌಟುಂಬಿಕ ಜೀವನವನ್ನು ಮೆಲಕು ಹಾಕಿದರು. ಸಕಾಲಿಕ ಸಾಹಿತ್ಯ ಪ್ರಶಸ್ತಿ ಪುಸ್ಕøತ ಸಾಹಿತಿ ಡಾ|| ಮಾಧವಿ ಭಂಡಾರಿ ಮಾತನಾಡುತ್ತಾ ಕವಿತಾ ಮತ್ತು ತಮ್ಮ ಬಡನಾಟವನ್ನು ಸ್ಮರಿಸಿಕೊಳ್ಳುತ್ತಾ ಕವಿತಾಳ ನೆನಪಿನ ಈ ಗೌರವವನ್ನು ವಿನೀತಳಾಗಿ ಸ್ವೀಕರಿಸಿದ್ದೇನೆ ಎಂದರು.


ಸಾಹಿತಿ ಹಾಗೂ ಕವಿತಾರ ಪತಿ ವಿಷ್ಣು ನಾಯ್ಕರು ಪ್ರಾಸ್ತಾವಿಕವಾಗಿ ಮಾತನಾಡಿ ಜಿ.ಎಚ್.ನಾಯಕರನ್ನು ಪರಿಚಯಿಸಿದರು. ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ವಿಶ್ರಾಂತ ಪ್ರಾಚಾರ್ಯ ಡಾ. ರಾಮಕೃಷ್ಣ ಗುಂದಿಯವರು ಸರ್ವರನ್ನು ಸ್ವಾಗತಿಸಿದರು. ಲೇಖಕರಾದ ಮಾಹಾಂತೇಶ ರೇವಡಿ, ಮಾದವಿ ಭಂಡಾರಿಯನ್ನು ಪರಿಚಯಿಸಿದರು. ಬರಹಗಾರ ಜೆ. ಪ್ರೆಮಾನಂದ ಸಂದೇಶವನ್ನು ವಾಚಿಸಿದರು. ಕವಿತಾ ವಿಷ್ಣು ನಾಯ್ಕರ ಮೊಮ್ಮುಗ ಉದಯೋನ್ಮೂಖ ಗಾಯಕ ಪ್ರಥಮ ಉಮೇಶ ನಾಯ್ಕ ‘ನನ್ನೋಳಗಿನ ಕವಿತಾ’ ಎಂಬ ಕವನ ಸಂಕಲನದ ಗೀತೆಯನ್ನು ಹಾಡುವ ಮೂಲಕ ಸಭೆಯ ಗಮನವನ್ನು ಸೆಳೆದರು.

RELATED ARTICLES  ಗೋಡೌನ್ ನಲ್ಲಿ 102 ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಪಡಿತರ ಅಕ್ಕಿ ಪೊಲೀಸ್ ವಶಕ್ಕೆ

ಕಾರವಾರದ ಹಿರಿಯ ಮುದ್ರಕರು ಹಾಗೂ ಬರಹಗಾರರಾದ ರಾಮ ನಾಯ್ಕ ಕೊನೆಯಲ್ಲಿ ಸರ್ವರ ಉಪಕಾರ ಸ್ಮರಿಸಿದರು. ಉಪನ್ಯಾಸಕ ಉಲ್ಲಾಸ ಹುದ್ದಾರ ಕಾರ್ಯಕ್ರಮವನ್ನು ನಿರೂಪಿಸಿದರು.ಹಲವಾರು ಜನ ಸಾಹಿತ್ಯಾಸಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.