ಕಾರವಾರ: ರಾಜ್ಯ ವಿಜ್ಞಾನ ಪರಿಷತ್ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಜನತೆಗಾಗಿ ವಿಜ್ಞಾನ, ವಿಜ್ಞಾನಕ್ಕಾಗಿ ಜನತೆ ಎಂಬ ಲೇಖನ ಸ್ಪರ್ಧೆ ಹಮ್ಮಿಕೊಂಡಿದೆ.


ನೋಬೆಲ್ ಪ್ರಶಸ್ತಿ ವಿಜೇತ ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ. ರಾಮನ್‍ರವರ ಪ್ರತಿಷ್ಠಿತ ಅನ್ವೇಷಣೆ `ರಾಮನ್ ಪರಿಣಾಮ`ವನ್ನು ಜಗತ್ತಿಗೆ ಘೋಷಿಸಿದ ದಿನವಾದ ಫೆ. 28 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಇದರ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವಿಜ್ಞಾನಾಸಕ್ತರಿಗೆ ಜನತೆಗಾಗಿ ವಿಜ್ಞಾನ, ವಿಜ್ಞಾನಕ್ಕಾಗಿ ಜನತೆ ಎಂಬ ವಿಷಯದ ಮೇಲೆ ಲೇಖನ ಸ್ಪರ್ಧೆ ಆಯೋಜಿಸಲಾಗಿದೆ.

RELATED ARTICLES  ಫೇಸ್ ಬುಕ್ ಬಳಕೆಯಿಂದ ಆಯುಷ್ಯ ಹೆಚ್ಚಳ: ಅಧ್ಯಯನ

ಸ್ಪರ್ಧೆಯಲ್ಲಿ ಭಾಗವಹಿಸುವವರು ಸಾವಿರ ಪದಗಳು ಮೀರದಂತೆ ಕನ್ನಡದಲ್ಲಿ ಲೇಖನ ಬರೆದು, ಲೇಖನದೊಂದಿಗೆ ತಮ್ಮ ಹೆಸರು, ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ವಿವರಗಳನ್ನು ನಮೂದಿಸಿ ಫೆ. 23ರ ಒಳಗಾಗಿ ಗೌರವ ಕಾರ್ಯದರ್ಶಿ, ಕರ್ನಾಟಕರಾಜ್ಯ ವಿಜ್ಞಾನ ಪರಿಷತ್ತ, ವಿಜ್ಞಾನ ಭವನ, ನಂ. 24/2, 21 ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು 560070 ಪೋಸ್ಟ ಮೂಲಕ ಅಥವಾ [email protected] ಇ-ಮೇಲ್‍ಗೆ ಕಳಹಿಸಬಹುದು. ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.

RELATED ARTICLES  ಉತ್ತಮ ಆರೋಗ್ಯಕ್ಕೆ  ಪುದೀನ