ಅಂಕೋಲಾ : ನಿರ್ದೇಶಕ ವಿನಾಯಕ ಬ್ರಹ್ಮೂರು ಅವರ ಎಲ್ಲಾ ಚಿತ್ರಗಳನ್ನು ನಾನು ವೀಕ್ಷಿಸಿದ್ದು ಪ್ರೌಢಶಾಲೆ ಚಿತ್ರದ ಮೂಲಕ ಒಂದು ಹೆಜ್ಜೆ ಮುಂದಕ್ಕಿಟ್ಟಿದ್ದಾರೆ. ಚಿತ್ರದಲ್ಲಿ ಗೋಳಿ ಪಟಗಾರ ಅವರ ಆಯ್ಕೆಯ ಧೈರ್ಯ ಮೆಚ್ಚುವಂತದ್ದು ಎಂದು ಸಾಹಿತಿ ಪ್ರಿಯಾ ಭಟ್ಟ ಕಲ್ಲಬ್ಬೆ ಹೇಳಿದರು. ಅವರು ತಾಲೂಕಿನ ಗಡಿಭಾಗವಾದ ಬ್ರಹ್ಮೂರಿನಲ್ಲಿ ಜಾತ್ರೆಯ ಪ್ರಯುಕ್ತ ಆಯೋಜಿಸಲಾಗಿದ್ದ “ವಿನಾಯಕ ಬ್ರಹ್ಮೂರು ಚಿತ್ರೋತ್ಸವ”ದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಲವತ್ತೈದು ನಿಮಿಷಗಳ ಚಿತ್ರವನ್ನು ನಿರ್ಮಿಸುವುದೆಂದರೆ ಅದು ಸುಲಭವಲ್ಲ. ‘ಸಂಧಿಗ್ಧಂ2’ ಚಿತ್ರದಲ್ಲಿ ಮನುಷ್ಯನ ಯೋಚನೆಗಳು ಹೇಗೆ ಕ್ಷಣಕ್ಷಣಕ್ಕೂ ಬದಲಾಗುತ್ತವೆ ಎನ್ನುವುದನ್ನು ಹೇಳಿದ್ದ ನಿರ್ದೇಶಕರು ಯುವ ಪೀಳಿಗೆ ಎಡವುತ್ತಿರುವುದೇಗೆ ಹಾಗೂ ಮೊಬೈಲ್‍ಗಳಿಂದ ಸಂಬಂಧಗಳು ಹೇಗೆ ಹಾಳಾಗುತ್ತಿವೆ ಎನ್ನುವುದನ್ನ ಪ್ರೌಢಶಾಲೆ ಚಿತ್ರದಲ್ಲಿ ತೋರಿಸಿಕೊಟ್ಟಿದ್ದಾರೆ. ಯೌವ್ವನದಲ್ಲಿ ಎಡವಿ ಬೀಳುವ ಯುವ ಸಮೂಹಕ್ಕೆ ಇದೊಂದು ಪಾಠವಾಗಿದೆ ಎಂದರು. ರಂಗಭೂಮಿ ಜ್ಞಾನವಿಲ್ಲದ 80ರ ಹರೆಯದ ಗೋಳಿ ಪಟಗಾರ್ ಅವರನ್ನು ಸಿನಿಮಾದ ಮೂಲಕ ಮುಖ್ಯ ಭೂಮಿಕೆಗೆ ತಂದ ವಿನಾಯಕ ಬ್ರಹ್ಮೂರು ಅವರ ಕಾರ್ಯ ಶ್ಲಾಘನೀಯ ಹಾಗೂ ಅವರನ್ನು ಆಯ್ಕೆ ಮಾಡಿಕೊಂಡ ಧೈರ್ಯ ಮೆಚ್ಚತಕ್ಕದ್ದು ಎಂದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಚಿತ್ರದ ನಾಯಕ ಗೋಳಿ ಪಟಗಾರ ಅವರನ್ನು ಸನ್ಮಾನಿಸಲಾಯಿತು.
ನಂತರ ಮುಖ್ಯ ಅತಿಥಿಯಾಗಿ ಮಾತನಾಡಿದ ಊರಿನ ಪ್ರಮುಖ ಎಂ.ಜಿ. ಭಟ್ಟ ಉದ್ಯಮಿಗಳನ್ನು, ಸೆಲೆಬ್ರೆಟಿಗಳನ್ನು, ರಾಜಕಾರಣ ಗಳನ್ನು ಎಲ್ಲರೂ ಕರೆದು ಸನ್ಮಾನಿಸುತ್ತಾರೆ. ಆದರೆ ಏನೂ ಇಲ್ಲದ ವ್ಯಕ್ತಿಯ ಕಡೆ ಯಾರೂ ಕೂಡ ಬರುವುದಿಲ್ಲ. ಆದರೆ ಅಂಥವರನ್ನು ಗುರುತಿಸಿ ಇಡೀ ಜಿಲ್ಲೆಯೇ ನೋಡುವಂತೆ ಮಾಡಿ ಈಗ ಗೌರವಿಸಿರುವುದು ಸಂತಸದಾಯಕ ವಿಚಾರ ಎಂದು ಹೇಳಿದರು.
ನಿರ್ದೇಶಕ ವಿನಾಯಕ ಬ್ರಹ್ಮೂರು ಪ್ರಾಸ್ತವಿಕವಾಗಿ ಮಾತನಾಡಿ ತಮ್ಮ ಚಿತ್ರತಂಡದ ಬಗ್ಗೆ ಹೇಳಿಕೊಂಡರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯ ಸಂದೇಶ ನಾಯ್ಕ, ಮಾಜಿ ಗ್ರಾ.ಪಂ. ಸದಸ್ಯ ಕುಮಾರ ಪಟಗಾರ, ಈಶ್ವರ ಹೆಬ್ಬಾರ, ಸೀತಾರಾಮ ಪುರಾಣ ಕ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಚಿತ್ರೋತ್ಸವದಲ್ಲಿ ಸಂಧಿಗ್ಧಂ2 ಹಾಗೂ ಪ್ರೌಢಶಾಲೆ ಚಿತ್ರಗಳು ಪ್ರದರ್ಶನಗೊಂಡು ನೋಡುಗರನ್ನು ಸೆಳೆದವು. ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಆಯೋಜಕರ ವಿರುದ್ಧ ವಿನಾಯಕ ಬ್ರಹ್ಮೂರು ಕಿಡಿ
ಬ್ರಹ್ಮೂರು ಜಾತ್ರೆಯ ವಿಶೇಷವಾಗಿ ರಾತ್ರಿ 8 ಗಂಟೆಯ ನಂತರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದೀನಬಂಧು ಸ್ವಪ್ರೇರಣಾ ಸಂಘದಿಂದ ಬಡವರಿಗೆ ಸಹಾಯ ಹಸ್ತ ಚಾಚುವ ವಿಶೇಷ ಕಾರ್ಯಕ್ರಮ, ಹಾಗೂ ತದನಂತರ ಚಿತ್ರೋತ್ಸವ ಹಾಗೂ ರಾತ್ರಿ 12ಕ್ಕೆ ಸಾಮಾಜಿಕ ನಾಟಕವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ವೇದಿಕೆ ಕಾರ್ಯಕ್ರಮಕ್ಕೆ ದೂರದ ಊರುಗಳಿಂದ ಬಂದ ಅತಿಥಿಗಳಿಗೆ ಕೂರಲಿಕ್ಕೂ ಕುರ್ಚಿ ವ್ಯವಸ್ಥೆ ಇರಲಿಲ್ಲ. ಅರ್ಧಗಂಟೆಗಳ ಕಾಲ ನಿಂತುಕೊಂಡೇ ವೇದಿಕೆ ಹತ್ತಬೇಕಾಗಿ ಬಂತು. ಈ ವಿಚಾರವಾಗಿ ಕೇಶವ ದೇವಸ್ಥಾನ ಸಮಿತಿಯ ವಿರುದ್ಧ ಹರಿಹಾಯ್ದಿರುವ ನಿರ್ದೇಶಕ ವಿನಾಯಕ ಬ್ರಹ್ಮೂರು “ಜಾತ್ರೋತ್ಸವದಂತಹ ಕಾರ್ಯಕ್ರಮವನ್ನು ಆಯೋಜಿಸುವ ಈ ದೇವಸ್ಥಾನದ ಸಮಿತಿ ಆತಿಥ್ಯ ವಹಿಸುವ ಅರ್ಹತೆ ಕಳೆದುಕೊಂಡಿದೆ. ಅತಿಥಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಬೇಕು ಎನ್ನುವ ಸಣ್ಣ ಕಾಮನ್‍ಸೆನ್ಸ್ ಕೂಡ ಇವರಿಗಿಲ್ಲವೇ? ದೇವಳಕ್ಕೆ ಜಾತ್ರೆಯ ಪ್ರಯುಕ್ತ ವಿಶೇಷ ದೇಣ ಗೆಗಳು ಬರುತ್ತವಾದರೂ ಇಂದಿಗೂ ಜನ ಮಣ ್ಣನ ರಾಶಿ ಮೇಲೆ ಕುಳಿತು ಕಾರ್ಯಕ್ರಮ ವೀಕ್ಷಿಸುವ ದೌರ್ಭಾಗ್ಯ ಸ್ಥಿತಿಯಿದೆ. ಬೇಣದಳ್ಳಿ, ನಾಗೂರು, ಮುಂತಾದ ಕುಗ್ರಾಮಗಳಲ್ಲಿಯೂ ಇಂದು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸುತ್ತಿರುವಾಗ ದಶಕಗಳ ಇತಿಹಾಸವಿರುವ ಬ್ರಹ್ಮೂರಿನ ಜಾತ್ರೆಯ ಕಾರ್ಯಕ್ರಮಗಳು ಇಷ್ಟರಮಟ್ಟಿಗೆ ಹೀನಾಯ ಸ್ಥಿತಿಗಿಳಿಯುತ್ತದೆ ಎಂದರೆ ಅರಗಿಸಿಕೊಳ್ಳುವುದು ಕಷ್ಟಕರ. ಇನ್ನು ಮುಂದಾದರೂ ಕನಿಷ್ಠ ಪ್ರಜ್ಞೆಯನ್ನು ಕೇಶವ ದೇವಸ್ಥಾನ ಸಮಿತಿ ಬೆಳೆಸಿಕೊಳ್ಳಲಿ ಎಂದರು.