ಮೇಷ:- ಆತ್ಮವಿಶ್ವಾಸವೇ ನಿಮಗೆ ಶ್ರೀರಕ್ಷೆ. ಅನ್ಯರ ಹಸ್ತಕ್ಷೇಪವನ್ನು ಉಪಾಯವಾಗಿ ನಿರಾಕರಿಸುವಿರಿ. ಗ್ರಹಬಲ ಇಲ್ಲದಿದ್ದರೂ ನೀವು ಈ ಹಿಂದೆ ಮಾಡಿದ ಪುಣ್ಯದ ಫಲ ನಿಮಗೆ ಸಹಾಯ ಮಾಡುವುದು.
ವೃಷಭ:- ವಿರೋಧಿಗಳು ನಿಮ್ಮ ಬಗ್ಗೆ ಚಾಡಿ ಮಾತುಗಳನ್ನು ಸೃಷ್ಟಿಸಿ ಗೊಂದಲ ತರುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರವಿರಲಿ. ಬಹಳ ಆತ್ಮೀಯ ವ್ಯಕ್ತಿ ಎಂದು ಎಲ್ಲವನ್ನು ಅವರ ಮುಂದೆ ಹೇಳದಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಮಿಥುನ:- ಹೊಯ್ದಾಟವನ್ನು ನಿಯಂತ್ರಿಸಿ ತರ್ಕಬದ್ಧವಾದ ವಿಚಾರಗಳಿಂದ ಜ್ಞಾನಿಗಳೊಡನೆ ಮಾತುಕತೆ ನಡೆಸಿ. ನಿಮ್ಮ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು. ಹಣಕಾಸಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುವುದು.
ಕಟಕ:- ಸಕಾರಾತ್ಮಕ ಚಿಂತನೆಗಳ ಜತೆಗೆ ಬಂಧುಗಳ ಬೆಂಬಲಗಳಿಂದ ಗೆಲುವು ಲಭಿಸುವುದು. ಹಿರಿಯರ ಆಶೀರ್ವಾದದಿಂದ ಹಣಕಾಸು ಬರುವುದು. ನಿಮ್ಮ ಮನೋಕಾಮನೆಗಳು ಈಡೇರುವವು.
ಸಿಂಹ:- ಕೆಲಸದ ಸ್ಥಳದಲ್ಲಿನ ಕಹಿ ಅನುಭವಗಳು ನಿಮ್ಮನ್ನು ಕಂಗೆಡೆಸುವವು. ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದಿರಿ. ನಿಷ್ಠುರವಾದಿ ಲೋಕಕ್ಕೆ ವಿರೋಧಿ ಎಂಬ ಮಾತಿದೆ. ಆದರೆ ಕೆಲವು ವಿಷಯಗಳಲ್ಲಿ ನಿಷ್ಠುರವಾಗಿಯೇ ವರ್ತಿಸಬೇಕಾಗುವುದು.
ಕನ್ಯಾ:- ನಿಮ್ಮಲ್ಲಿ ಜಾಣತನವಿದೆ. ಆದರೆ ಅವಸರ ಮಾಡದಿರಿ. ಸಾವಧಾನವೇ ನಿಮಗೆ ಶ್ರೀರಕ್ಷೆ. ಆದಷ್ಟು ತಾಳ್ಮೆಯಿಂದ ಇರಿ. ನಿಮ್ಮ ಕಾರ್ಯಗಳು ಸುಲಲಿತವಾಗಿ ನಡೆಯುವವು. ವಿವಿಧ ಮೂಲಗಳಿಂದ ಹಣಕಾಸಿನ ನೆರವು ದೊರೆಯುವುದು.
ತುಲಾ:- ಶಕ್ತಿ ಸಂವರ್ಧನೆ ಸಿದ್ಧಿಯ ಉದ್ದೇಶಗಳನ್ನು ಸಾಧಿಸಿಕೊಳ್ಳಲು ದೇವಿ ಸ್ತೋತ್ರವನ್ನು ಪಾರಾಯಣ ಮಾಡಿ ಮತ್ತು ಗುರು ರಾಘವೇಂದ್ರ ಸ್ವಾಮಿಯನ್ನು ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.
ವೃಶ್ಚಿಕ:- ಆರೋಗ್ಯದ ಬಗ್ಗೆ ಎಚ್ಚರವಿರಲಿ. ಪ್ರವಾಸದ ಸಂದರ್ಭದಲ್ಲಿ ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸಿ. ಮನೆಯಲ್ಲಿ ಆರೋಗ್ಯ ತೀವ್ರ ಹದಗೆಡುವ ಸಾಧ್ಯತೆ ಇದ್ದು ವೈದ್ಯರ ಸೂಕ್ತ ಸಲಹೆ ಪಡೆಯಿರಿ. ಕೆಲವು ಅಶುಭ ವಾರ್ತೆ ಕೇಳಬೇಕಾಗುವುದು.
ಧನುಸ್ಸು:- ಹಣಕಾಸಿನ ಬಗ್ಗೆ ಗಮನವಿರಲಿ. ಸುಖಾಸುಮ್ಮನೆ ಖರ್ಚಿನ ದಾರಿ ಬೆಳೆಯುತ್ತಾ ಹೋಗುತ್ತದೆ. ಜನ್ಮಸ್ಥ ಶನಿ ಅಸಿಡಿಟಿ, ವಾಯು ಪ್ರಕೋಪದಂತಹ ತೊಂದರೆಗಳನ್ನು ನೀಡುವ ಸಾಧ್ಯತೆ ಇದೆ. ಪ್ರಯಾಣದಲ್ಲಿ ಎಚ್ಚರವಿರಲಿ.
ಮಕರ:- ನಿಮ್ಮ ಯೋಚನೆ ಹಾಗೂ ಕಾರ‍್ಯ ತಂತ್ರಗಳನ್ನು ಹತ್ತಿರದವರೇ ಕೆಡಿಸುವ ಸಾಧ್ಯತೆ ಇದೆ. ಹಾಗಾಗಿ ನೀವು ಬಯಸಿದ ಕಾರ್ಯ ಪೂರ್ಣವಾಗುವವರೆಗೂ ಗೌಪ್ಯತೆಯನ್ನು ಕಾಯ್ದುಕೊಳ್ಳಿ. ಕೆಲವರಿಗೆ ಸ್ಥಳ ಬದಲಾವಣೆಯ ಸಾಧ್ಯತೆ ಇದೆ.
ಕುಂಭ:- ನಿಮಗೆ ದೈವ ಬಲ ಕಡಿಮೆ ಇದ್ದರೂ ನೀವು ಮಾಡುತ್ತಿರುವ ಪೂಣ್ಯ ಕಾರ್ಯಗಳಿಂದ ಭಗವಂತನು ನಿಮಗೆ ಒಳಿತನ್ನೇ ಮಾಡುವನು. ಹಣಕಾಸಿನ ಪರಿಸ್ಥಿತಿ ಸುಧಾರಣೆ ಕಷ್ಟವಿದೆ. ಆದರೆ ನಿತ್ಯ ಜೀವನಕ್ಕೆ ತೊಂದರೆ ಇರುವುದಿಲ್ಲ.
ಮೀನ:- ಮಕ್ಕಳಿಂದ ಕಿರಿಕಿರಿ ಅನುಭವಿಸುವಿರಿ. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಅಲ್ಪ ಹಿನ್ನಡೆ ಕಂಡುಬರುವುದು. ಮನೆಯ ಹಿರಿಯರಿಗೆ ಗೌರವ, ಸನ್ಮಾನಗಳು ಏರ್ಪಡುವವು.