ಹೊನ್ನಾವರ: ಕಾಶ್ಮೀರದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಹುತಾತ್ಮರಾದ ವೀರ ಯೋಧರಿಗೆ ತಾಲೂಕಿನ ಮೂಡ್ಕಣಿಯಲ್ಲಿ ಶಂಭುಲಿಂಗೇಶ್ವರ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ ಮತ್ತು ಸಾರ್ವಜನಿಕರು ರವಿವಾರ ನುಡಿನಮನ ಸಲ್ಲಿಸಿದರು.
ಗ್ರಾ.ಪಂ ಸದಸ್ಯ ಗಜಾನನ ಹೆಗಡೆ ಮಾತನಾಡಿ, ದೇಶದ ಜನರ, ಸೈನಿಕರ ರಕ್ತ ಹೀರಿದಲ್ಲಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಧೂಳಿಪಟ ಮಾಡುತ್ತೇವೆ. ಭಾರತಕ್ಕೆ ಪ್ರಬಲವಾದ ಶಕ್ತಿ ಇದೆ ಎಂದರು.
ಭಾರತವು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ. ನಮ್ಮ ಸೈನಿಕರು ಹುತಾತ್ಮರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ನಾಯ್ಕ, ಜಗದೀಶ್ ನಾಯ್ಕ, ರಮೇಶ್ ನಾಯ್ಕ, ಸುಬ್ರಾಯ ಹೆಗಡೆ, ಎಂ.ಟಿ.ಹೆಗಡೆ, ಸತೀಶ್ ನಾಯ್ಕ, ಎಂ ಎಸ್ ಶೋಭಿತ್, ರಾಜು ಹಳ್ಳೇರ್, ರತ್ನಾ ನಾಯ್ಕ, ಮಹಾಲಕ್ಷ್ಮಿ ಹಳ್ಳೇರ್, ಸುಶೀಲಾ ಹಳ್ಳೇರ್ ಸೇರಿದಂತೆ ನೂರಾರು ಸಾರ್ವಜನಿಕರು ಪಾಲ್ಗೊಂಡಿದ್ದರು.