ಮೇಷ:- ಎಲ್ಲ ಸಮಯ ಒಂದೇ ತೆರನಾಗಿರುವುದಿಲ್ಲ ಎನ್ನುವುದಕ್ಕೆ ಇಂದಿನ ಘಟನೆಗಳೇ ಸಾಕ್ಷಿಯಾಗಿ ನಿಲ್ಲುವವು. ಕೆಲವರು ನಿಮ್ಮ ಮೇಲೆ ದುಷ್ಟ ಶಕ್ತಿಯ ಪ್ರಯೋಗ ಮಾಡುವ ಹವಣಿಕೆಯಲ್ಲಿದ್ದಾರೆ. ಆದಷ್ಟು ಹೊರಗಡೆ ಆಹಾರ ಸೇವಿಸಬೇಡಿ.
ವೃಷಭ:- ನೀವು ಬಹಳ ಭಾವುಕ ಸ್ವಭಾವದವರು. ನಿಮ್ಮನ್ನು ಯಾರಾದರೂ ಹೊಗಳಿದರೆ ನಿಮ್ಮ ಅಂತರಂಗವನ್ನೆಲ್ಲಾ ಅವರ ಮುಂದೆ ತೋಡಿಕೊಳ್ಳುವಿರಿ. ಇದರಿಂದ ನೀವು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಹೊರಗಿನ ಜನರೊಂದಿಗೆ ಮಾತನಾಡುವಾಗ ಎಚ್ಚರದಿಂದಿರಿ.
ಮಿಥುನ:- ಆತ್ಮಸ್ಥೈರ್ಯವೇ ನಿಮ್ಮ ದಿವ್ಯಮಂತ್ರವಾಗಿರಲಿ. ಇನ್ನಷ್ಟು ಆತ್ಮಶಕ್ತಿ ವೃದ್ಧಿಸಿಕೊಂಡು ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ಕುಟುಂಬದವರ ಅಸಹಕಾರ ಕಡಿಮೆ ಮಾಡಿಕೊಳ್ಳಲು ಶಿವ ಪಂಚಾಕ್ಷ ರಿ ಮಂತ್ರ ಪಠಿಸಿ.
ಕಟಕ:- ಗುರುವಿನ ಕೃಪೆಯಿಂದ ಹಮ್ಮಿಕೊಂಡ ಕಾರ್ಯಗಳೆಲ್ಲವೂ ಯಶಸ್ಸಿನತ್ತ ಸಾಗುವವು. ಕೆಲಸದ ಒತ್ತಡದಲ್ಲಿ ಕೆಲವೊಮ್ಮೆ ಶಿರೋವೇದನೆ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಆ ಸಂದರ್ಭದಲ್ಲಿ ಒಂದೆಡೆ ಕುಳಿತು ದೀರ್ಘ ಉಸಿರಾಡಿ. ಒಳಿತಾಗುವುದು.
ಸಿಂಹ:- ನಿಮ್ಮ ಯಶಸ್ಸನ್ನು ಕಂಡ ನಿಮ್ಮ ವಿರೋಧಿಗಳು ನಿಮ್ಮ ಬಳಿ ಅನ್ಯೋನ್ಯತೆಯನ್ನು ಪ್ರದರ್ಶಿಸುತ್ತಲೆ ನಿಮ್ಮ ವಿರುದ್ಧ ಕೆಲಸ ಮಾಡುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ಇರಿ. ಗುರು ರಾಘವೇಂದ್ರ ಸ್ವಾಮಿಯನ್ನು ಮನಸಾ ಭಜಿಸಿ ಒಳಿತಾಗುವುದು.
ಕನ್ಯಾ:- ನೀವು ನಿರೀಕ್ಷಿಸಿದ ವರ್ತಮಾನ ನಿಮಗೆ ಬರುವುದು. ಬಹುದಿನದಿಂದ ತಾಕಲಾಟಕ್ಕೆ ಬಿದ್ದ ಮನಸ್ಸಿಗೆ ಕೊಂಚ ನೆಮ್ಮದಿ ದೊರೆಯುವುದು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವುದು.
ತುಲಾ:- ಸುಳಿಯ ವಿರುದ್ಧ ಈಜಾಟ ನಡೆಸಿ ಸುಸ್ತಾಗದಿರಿ. ಕುಲದೇವರನ್ನು ಮನಸಾ ಸ್ಮರಿಸಿ. ಮನೆಯ ಸದಸ್ಯರ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಶಮನಗೊಳಿಸಿಕೊಂಡಲ್ಲಿ ಅನುಕೂಲವಾಗುವುದು. ಖರ್ಚು ಕಡಿಮೆ ಮಾಡಿಕೊಳ್ಳಿ.
ವೃಶ್ಚಿಕ:- ಆಕರ್ಷಣೆಯ ಸೆಳೆತಕ್ಕೆ ಸಿಕ್ಕಿ ಬೀಳದಿರಿ. ದಾರಿ ತಪ್ಪಿಸುವ ಮಾಯೆ ನಿಮ್ಮನ್ನು ಬಹುವಾಗಿ ಕಾಡಲಿದೆ. ಆಂಜನೇಯ ದೇವರಲ್ಲಿ ಪ್ರಾರ್ಥನೆ ಮಾಡಿ ಮತ್ತು ಮನೆಯ ಸಮೀಪವಿರುವ ದುರ್ಗಾ ದೇವಿ ಮಂದಿರಕ್ಕೆ ಭೇಟಿ ನೀಡಿ.
ಧನುಸ್ಸು:- ಭಾರಿ ನಿರೀಕ್ಷೆಯ ಯೋಜನೆಯನ್ನು ಅತುರದ ನಿರ್ಧಾರದಿಂದ ಆರಂಭಿಸದಿರಿ. ಸಾಡೇಸಾತ್ ಶನಿಯ ಪ್ರಭಾವವಿದ್ದು ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ. ನಿಮ್ಮ ಪ್ರಾಮಾಣಿಕತೆಯೇ ನಿಮಗೆ ದಾರಿದೀಪವಾಗುವುದು.
ಮಕರ:- ಗುರುವಿನ ಬಲವಿದೆ ಎಂದು ವರ್ಚಸ್ಸಿಗೆ ಧಕ್ಕೆ ತಂದುಕೊಳ್ಳುವ ಕೆಲಸ ಮಾಡದಿರಿ. ಹಣ ಇದ್ದಾಗ ಎಲ್ಲರೂ ನೆಂಟರು ಹಾಗಾಗಿ ನಿಮ್ಮಲ್ಲಿರುವ ಹಣ ಕೆಲವರಿಗೆ ಅಸೂಯೆಯನ್ನುಂಟು ಮಾಡಿದೆ. ಅದನ್ನು ಹೇಗಾದರೂ ಪಡೆಯಲು ನಿಮ್ಮನ್ನು ವಿವಿಧ ರೀತಿಯಲ್ಲಿ ಹೊಗಳುವರು. ಎಚ್ಚರದಿಂದ ಇರಿ.
ಕುಂಭ:- ವಿರೋಧಿಯೊಬ್ಬರ ಕುತಂತ್ರ ಬಯಲಿಗೆ ಬರುವುದು. ಇದರಿಂದ ನಿಮ್ಮ ಒಳ್ಳೆಯತನಕ್ಕೆ ಹೆಚ್ಚು ಬೆಂಬಲ ಸಿಗುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ಸರಾಗವಾಗಿ ನಡೆಯುವವು.
ಮೀನ:- ಅನವಶ್ಯಕ ಗೊಂದಲಗಳನ್ನು ಸೃಷ್ಟಿಸಿ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಯುವುದು. ಮಾತಾ ದುರ್ಗಾ ದೇವಿಯನ್ನು ಪ್ರಾರ್ಥಿಸಿ. ದೇವಿ ನಿಮಗೆ ಅಭಯ ಹಸ್ತ ನೀಡುವಳು. ಹಣಕಾಸು ಕೂಡಾ ಬರುವುದು.