ಭಾರತೀಯರ ವೀರ ಯೋಧರ ಹತ್ಯೆಯು ಹೇಯ ಕೃತ್ಯವಾಗಿದ್ದು.ಇದರಿಂದ ಭಾರತೀಯರ ಮನೋಬಲವನ್ನು ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಲವತ್ತು ಯೋಧರ ಹತ್ಯೆಮಾಡಿದವರು ತಿಳಿಯಬೇಕು ಇದರ ಪ್ರತೀಕಾರಕ್ಕಾಗಿ ಕೋಟಿ ಕೋಟಿ ಭಾರತೀಯರು ಕಾಯುತ್ತಿದ್ದಾರೆ.ಈ ಕೃತ್ಯವನ್ನು ನಾನು ತೀವ್ರವಾಗಿ
ಖಂಡಿಸುತ್ತೇನೆ.ಭಯೋತ್ಪಾದಕರಿಗೆ ಜಾತಿ ಇಲ್ಲ ಧರ್ಮ ಇಲ್ಲ ನಮ್ಮದೊಂದೇ ಧರ್ಮ ಅದು ಭಾರತೀಯ ಧರ್ಮ ಎಂದು ಸಾಹಿತಿಗಳು ಶಾಮಿಯಾನ ಕವಿಗಳೆಂದು ಹೆಸರಾದ ಶ್ರೀ ಜಮೀರುಲ್ಲಾ ಷರೀಪ ಅವರು ಗುಡುಗಿದರು.ಅವರ ಒಂದೊಂದು ಮಾತಿಗೂ ನೆರೆದವರು ಭಾರೀ ಕರತಾಡನ ಮಾಡಿ ಬೆಂಬಲ ವ್ಯಕ್ತಪಡಿಸಿದರು.
ಕತಗಾಲದಲ್ಲಿ ಜರುಗಿದ ಏಳನೆಯ ಕುಮಟಾ ತಾಲೂಕ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣಕಾರರಾಗಿ ಮಾತನಾಡುತ್ತ .ಡಾ ಶ್ರೀಧರ ಗೌಡ ಅವರು ತಾಲೂಕ ಸಮ್ಮೇಳನವನ್ನು ರಾಜ್ಯಮಟ್ಟದ ಸಮ್ಮೇಳನ ನೆನಪಿಸುವ ಹಾಗೆ ಸಂಘಟಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಅಧ್ಯಕ್ಷ ಅರವಿಂದರ ಕ್ರಿಯಾಶೀಲತೆಯನ್ನು ಕೊಂಡಾಡಿದ ಅವರು ಜನಪದ ಸಾಹಿತ್ಯದ ಸೊಗಡು ಬಹುಚೆನ್ನಾಗಿ ಮೂಡಿ ಬಂದಿದ್ದು .ಮುಖ್ಯವಾಗಿ ಹಾಲಕ್ಕಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕರೆನೀಡಿದರು.
ಅತಿಥಿಗಳಾದ ಸನದಿ ಅವರು ಬಸವಣ್ಣನ ವಚನದಂತೆ ಇವನಾರವ ಎಣಿಸದೆ ಇವ ನಮ್ಮವ ಎಂದೆಣಿಸಬೇಕೆಂದು ಹೇಳಿದರು.
ಕುಮಟಾದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿ ಎಸ್ ವಿ ಪಿಕಳೆ ಕನಸು ನನಸಾಗಿಸಬೇಕು ಹಾಗೂ ಕುಮಟಾದಲ್ಲಿ ಸುಸಜ್ಜಿತ ರಂಗಭವನ ನಿರ್ಮಾಣ ಮಾಡಬೇಕೆಂಬ ನಿರ್ಣಯ ಮಂಡನೆ ಮಾಡಲಾಯಿತು. ಒಟ್ಟಾರೆಯಾಗಿ ಕುಮಟಾ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿ ಸಂಪನ್ನಗೊಂಡಿತು.