ಶಿರಸಿ:- ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆಗೆ ಇಂದು ಮುಂಜಾನೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಮನೆಯ ಲ್ಯಾಂಡ್ಲೈನ್ಗೆ ರವಿವಾರ ತಡರಾತ್ರಿ ಸುಮಾರು 1.45ರ ಸುಮಾರಿಗೆ ದೂರವಾಣಿ ಕರೆ ಬಂದಿದ್ದು, ಅವಾಚ್ಯ ಶಬ್ದಗಳಿಂದ ಅವರಿಗೆ ಬಯ್ಯಲು ಆರಂಭಿಸಿ, ಜೀವ ಬೆದರಿಕೆಯನ್ನು ಒಡ್ಡಿದ ಘಟನೆ ನಡೆದಿದೆ. ಇದರಿಂದಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಈ ವೇಳೆ ಮನೆಯಲ್ಲಿದ್ದ ಅನಂತಕುಮಾರ್ ಹೆಗಡೆ ಪತ್ನಿ ರೂಪ ಹೆಗಡೆ ಕರೆ ಸ್ವೀಕರಿಸಿದ್ದು ಮುಸಲ್ಮಾನರ ಬಗ್ಗೆ ಮಾತನಾಡಿದ್ರೆ ಚೆನ್ನಾಗಿರುವುದಿಲ್ಲ ,ಅವರನ್ನು ಇಡೀ ಕುಟುಂಬವನ್ನು ನೋಡಿಕೊಳ್ಳುತ್ತೇವೆ,ಅನಂತಕುಮಾರ್ ಹಾಗೂ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ, ನಮಗೆ ಏನು ಮಾಡಬೇಕು ಎಂದು ಗೊತ್ತಿದೆ. ಅಯೋದ್ಯೆ ಸಮೇತ ಎಲ್ಲದೂ ನಿಮಗೆ ಬೇಕಾ?ಅಯೋಧ್ಯೆಯನ್ನು ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ.
ಕರೆ ಮಾಡಿದವರು ಅವಾಚ್ಯ ಶಬ್ದಗಳಿಂದ ಬಯ್ಯಲು ಆರಂಭಿಸಿದಾಗ ರೂಪಾ ಅವರು ಕಾಲ್‍ಕಟ್ ಮಾಡಿದ್ದಾರೆ. ಆದಾಗ್ಯೂ, ಪದೇ ಪದೆ ಕರೆಗಳು ಬರುತ್ತಿದ್ದವು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರ ಆಪ್ತ ಸಹಾಯಕ ಸುರೇಶ್ ಶೆಟ್ಟಿ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಸಂಬಂಧ ಹೆಗಡೆಯವರ ಆಪ್ತ ಕಾರ್ಯದರ್ಶಿ ಸುರೇಶ್ ಶಟ್ಟಿ ಇಂದು ಶಿರಸಿಯ ಹೊಸಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.