ಭಟ್ಕಳ: ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯಾನುಗ್ರಹದೊಂದಿಗೆ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ (ರಿ.) ಗೋಳಿಕುಂಬ್ರಿ, ಉತ್ತರಕೊಪ್ಪ ಇವರ ಸಂಯೋಜನೆಯಲ್ಲಿ ಯಕ್ಷಕಲಾಭಿಮಾನಿಗಳ ಸಹಕಾರದೊಂದಿಗೆ ಪೂರ್ಣಚಂದ್ರ ಯಕ್ಷಕಲಾ ಮಂಡಳಿ (ರಿ.) ಕೊಂಡದಕುಳಿ, ಕುಂಭಾಶಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ 5ನೇ ವರ್ಷದ ಪೌರಣ ಕ ಯಕ್ಷೋತ್ಸವ – “ಯಕ್ಷಗಾನ ಸಪ್ತಾಹ” ಕಾರ್ಯಕ್ರಮ ಶ್ರೀ ರಾಘವೇಶ್ವರ ಸಭಾಭವನ, ಬಸ್ತಿಮಕ್ಕಿ, ಬೈಲೂರು ಗ್ರಾಮ, ಮುರುಡೇಶ್ವರದಲ್ಲಿ ದಿನಾಂಕ : 10-02.2019 ರವಿವಾರದಿಂದ ಶುರುವಾಗಿ 16-02-2019 ಶನಿವಾರ ಸಂಪನ್ನಗೊಂಡಿದೆ.
16.02.2019 ಶನಿವಾರ ಸಪ್ತಾಹದ ಮುಕ್ತಾಯ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಯಕ್ಷಸಪ್ತಾಹ ಗೌರವಾಧ್ಯಕ್ಷರು ಹಾಗೂ ಲಯನ್ಸ್ ಕ್ಲಬ್ ಮುರ್ಡೇಶ್ವರದ ಅಧ್ಯಕ್ಷರಾದ ಶ್ರೀ ನಾಗರಾಜ ಎಂ ಭಟ್ ವಹಿಸಿ ಹೀಗೆ ಈ ಯಕ್ಷಗಾನ ಸಪ್ತಾಹವನ್ನು ಇನ್ನೂ ಮುಂದೆಯೂ ಸಹಾ ವಿಶೇಷವಾಗಿ ನಡೆಸಿಕೊಂಡು ಹೋಗುತ್ತೇವೆ, ಯಕ್ಷಗಾನ ಕಲೆ ಉಳಿಸಿಬೆಳೆಸುವಲ್ಲಿ ನಾವು ಶ್ರಮ ಪಡುತ್ತೇವೆ, ಇದಕ್ಕೆಲ್ಲಾ ಕಲಾಭಿಮಾನಿಗಳ ಪ್ರೋತ್ಸಾಹ ಸಹಕಾರ ಎಂದೆಂದು ಬೇಕು ಮತ್ತು ಲಯನ್ಸ್ ಕ್ಲಬ್ ಸಹಾ ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಸಹಕರಿಸುತ್ತದೆ ಎಂದರು. ಈ ಸಭೆಗೆ ಅತಿಥಿಗಳಾಗಿ ಖ್ಯಾತ ವೈದ್ಯರು ಹಾಗೂ ಯಕ್ಷರಕ್ಷೆ ಮುರ್ಡೇಶ್ವರ ಇದರ ರುವಾರಿಗಳಾದ ಡಾ. ಐ.ಆರ್. ಭಟ್, ಡಾ. ವಾದಿರಾಜ ಭಟ್, ಪುರುಹಿತರಾದ ಶ್ರೀ ವಿ.ಕೆ. ಶ್ರೀಪಾದ ಭಟ್ ಮಲ್ಲಕ್ಕಿ, ಆರ್.ಎನ್.ಎಸ್. ಪಾಲಿಟೆಕ್ನಿಕ್ ಪ್ರಿನ್ಸಿಪಲ್ ಆದ ಶ್ರೀ ಎಂ.ವಿ. ಹೆಗಡೆ, ಶ್ರೀ ರಾಜು ಎಂ ನಾಯ್ಕ ಕಾಟಿಕಲ್ ಉಪಸ್ಥಿತರಿದ್ದರು. ಪ್ರತಿವರ್ಷವೂ ಸಪ್ತಹಾದಲ್ಲಿ ಸಮ್ಮಾನಿಸುವಂತೆ ಈ ವರ್ಷ ಯಕ್ಷಗಾನ ವೇಷಭೂಷಣ ತಯಾರಕರು ಆದ ಶ್ರೀ ಲಕ್ಷ್ಮಣ್ ನಾಯ್ಕ, ಮಂಕಿ ಇವರಿಗೆ ಸಮ್ಮಾನ ನೀಡಿ ಗೌರವಿಸಲಾಯಿತು ಹಾಗೂ ಆಗಮಿಸಿದ ಎಲ್ಲಾ ಕಲಾವಿದರಿಗೂ ಗೌರವ ಕಾಣ ಕೆ ನೀಡಲಾಯಿತು. ಈ ಸಭೆಯ ಸ್ವಾಗತವನ್ನು ಪ್ರತಿಷ್ಠಾನದ ಕಾರ್ಯದರ್ಶಿಯಾದ ಶ್ರೀ ಶ್ರೀಕಾಂತ ಹೆಗಡೆ, ಕಾಟಿಕಲ್ ಇವರು ಮಾಡಿದರು, ವಂದನೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ನಾಗರಾಜ ಕೆ ಮಧ್ಯಸ್ಥ ಇವರು ಮಾಡಿದರು, ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಐ.ವಿ. ಹೆಗಡೆ ಇವರು ನಡೆಸಿ ಸಭೆಯನ್ನು ಚಂದಗಾಣ ಸಿಕೊಟ್ಟರು. ನಂತರ ಧಕ್ಷಯಜ್ಞ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶಿಸಲಾಯಿತು. ಈ ಕಾಯಕ್ರಮಕ್ಕೆ ವಿವಿಧ ಗಣ್ಯರು ಉಪಸ್ಥಿತರಿದ್ದರು ಹಾಗೂ ಸಾವಿರಾರು ಜನ ಸಾಕ್ಷಿಯಾದರು.