ಭದ್ರಕಾಳಿ ಪದವಿ ಪೂರ್ವ ಕಾಲೇಜು ಗೋಕರ್ಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ mind and memory ಮತ್ತು ಪರೀಕ್ಷೆ  ತಯಾರಿ ಕುರಿತಾದ  ಕಾರ್ಯಕ್ರಮ  ದಿನಾಂಕ ಫೆಬ್ರವರಿ  16 ಶನಿವಾರ ಬೆಳಿಗ್ಗೆ ನಡೆಯಿತು.

ಕುಮಟಾದ mind and  memory  ಟ್ರೈನರ್  ಮಾರುತಿ ಅಂಬಿಗ ವಿಶೇಷ ಆಹ್ವಾನಿತ ರಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಪ್ರಾಚಾರ್ಯರಾದ  ಎಸ್. ಜಿ. ನಾಯ್ಕ  ಪರಿಚಯಿಸಿ ಸ್ವಾಗತಿಸಿದರು.
Mind and memory  ಕಾರ್ಯಕ್ರಮ ನಡೆಸಿಕೊಟ್ಟ ಮಾರುತಿ ಅಂಬಿಗ ಪ್ರತಿಭಾವಂತರು  ಅಭಿನಂದನೆಗೆ ಅರ್ಹರು ಅವರ ಉಪನ್ಯಾಸಗಳು ಭವಿಷ್ಯದಲ್ಲಿ   ನಾಡಿನ  ತುಂಬಾ ಪಸರಿಸಲಿ ಎಂದು ಹೇಳಿದರು . ಹಿರಿಯ ಉಪನ್ಯಾಸಕರಾದ ಎನ್.ಎಸ್. ಲಮಾಣಿ, ರಾಜಶೇಖರ್ ಕಾರ್ಯಕ್ರಮದಲ್ಲಿದ್ದು  ಶುಭ ಹಾರೈಸಿದರು.

RELATED ARTICLES  ಪ್ರವಾಹ ಸಂತ್ರಸ್ತರಿಗೆ ನೆರವಾದ ಕುಮಟಾ ಪುರಸಭೆ: ದಿನದ ವೇತನ ನೀಡಿ ಮಾನವೀಯತೆ ಮೆರೆದ ನೌಕರರು.

ಕಾರ್ಯಕ್ರಮದಲ್ಲಿ  100ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು  ಭಾಗವಹಿಸಿದ್ದರು.ವಿದ್ಯಾರ್ಥಿಗಳು  ಕಾರ್ಯಕ್ರಮದ ಕುರಿತು ಮಾತನಾಡಿ ” ಕಾರ್ಯಕ್ರಮ ದಿಂದ ನಾವು  ಅತ್ಯಮೂಲ್ಯ  ತಂತ್ರಗಾರಿಕೆ ಗಳನ್ನು ಕಲಿತಿದ್ದೇವೆ ಇದರಿಂದ ನಮಗೆ ಸಂತೋಷ್ ಆಗಿದೆ ನಮ್ಮ  ಪರೀಕ್ಷೆಗೆ  ತುಂಬಾ ಸಹಕಾರ ಆಗಲಿದೆ” ಎಂದು  ತಮ್ಮ ಅನಿಸಿಕೆ  ಹಂಚಿಕೊಂಡರು.

ವಿದ್ಯಾರ್ಥಿನಿಯಾದ ಯಾದವಿ ಗೌಡ ಸ್ವಾಗತ ಗೀತೆ ಹಾಡಿದರು,ಉಪನ್ಯಾಸಕರಾ ಸಾವಿತ್ರಿ ಗೌಡ  ವಂದಿಸಿದರು,ಗಾಯಿತ್ರಿ ಅಭಿನಂದಿಸಿದರು ಪಲ್ಲವಿ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.

RELATED ARTICLES  ಗೋಕರ್ಣ ಪೊಲೀಸ್ ಕಾರ್ಯಾಚರಣೆ : 1 ಕೆ.ಜಿ ಗಾಂಜಾ ವಶ : ಆರೋಪಿ ಪೊಲೀಸ್ ಬಲೆಗೆ

ಉತ್ತರ ಕನ್ನಡ ಜಿಲ್ಲೆಯ  ಕುಮಟಾ ದ ಮಿರ್ಜಾನಿನ ಯುವಕ ತನ್ನ  ಅದ್ಭುತ  ಸ್ಮರಣಶಕ್ತಿ  ,ವೇಗದ ಓದು ಮತ್ತು  ಪ್ರೇರಣಾತ್ಮಕ ಕಾರ್ಯಗಾರದ  ಮೂಲಕ  ಗಮನ ಸೆಳೆಯುತ್ತಿರುವುದು  ಹೆಮ್ಮೆಯ ಸಂಗತಿ.

ಮಾರುತಿ ಅಂಬಿಗ ದಿನವೊಂದರಲ್ಲಿ   500ಪುಟದ  ಪುಸ್ತಕ ಓದಿ  ನೆನಪಿಡಬಲ್ಲರು. ಯಾವ ಪುಟದಲ್ಲಿ  ಯಾವ  ಮಾಹಿತಿ  ಇದೇ  ಎಂದು  ಕರಾರುವಕ್ಕಾಗಿ  ಹೇಳಬಲ್ಲರು . ಮಾರುತಿ  ಅಂಬಿಗ ಡಾ. ಎ. ವಿ.ಬಾಳಿಗ . ವಾಣಿಜ್ಯ ಮಹಾವಿದ್ಯಾಲಯದಲ್ಲಿ  ಎಮ್.ಕಾಂ.ಪದವಿ ಪಡೆದಿದ್ದಾರೆ.
ಮುಂದಿನ  ದಿನಗಳಲ್ಲಿಯೂ  ಇನ್ನೂ ಅಧಿಕ  ಕಾರ್ಯಗಾರದ ಮೂಲಕ  ಇನ್ನೂ  ಹೆಚ್ಚಿನ   ಸಾಧನೆ   ತೋರಲೆಂದು   ಮಾರುತಿ  ಅಂಬಿಗರನ್ನು  ಅಭಿನಂದಿಸೋಣ .