ಅಂಕೋಲಾ : ಬ್ಯಾಂಕ್ ಖಾತೆಯಲ್ಲಿ ರೂ. 2000ಗಿಂತ ಕಡಿಮೆಯಿದ್ದರೆ ಪ್ರತಿ ತಿಂಗಳು 200 ರೂಪಾಯಿ ಕಡಿತಗೊಳಿಸುತ್ತಿರುವ ಸ್ಟೇಟ್ ಬ್ಯಾಂಕ್‍ನ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಅಂಕೋಲಾ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಿ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿ, ಸರಕಾರ ದಿನಕ್ಕೊಂದು ನಿಯಮಾವಳಿಗಳನ್ನು ಹೊರಡಿಸುತ್ತಿದ್ದು, ಕೇಳುತ್ತಿರುವ ದಾಖಲೆ ಪತ್ರಗಳನ್ನು ನೀಡಲು ಅಂಗನವಾಡಿ ಕಾರ್ಯಕರ್ತೆತಯರು, ಕೂಲಿಕಾರರು, ರೈತರು ಹೈರಾಣಾಗಿದ್ದಾರೆ. ಕನಿಷ್ಠ ಠೇವಣಿಯಲ್ಲಿ 200 ಕಡಿತ ಮಾಡುತ್ತಿರುವುದು ಸಂಕಷ್ಟ ತಂದೊಡ್ಡಿದೆ. ಕೂಡಲೇ ಹೊಸ ನೀತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಶಾಖಾ ವ್ಯವಸ್ಥಾಪಕ ಎಮ್.ವಿ. ರಮೇಶ ಮಾತನಾಡಿ, ಸರಕಾರದ ಆದೇಶವನ್ನು ನಾವು ಪಾಲಿಸಬೇಕಾಗುತ್ತದೆ. ಆದರೆ ನಮ್ಮ ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಿ.ಐ.ಟಿ.ಯು. ತಾಲೂಕು ಸಮಿತಿ ಅಧ್ಯಕ್ಷ ಎಚ್.ಬಿ. ನಾಯಕ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಸಮಿತಿ ಅಧ್ಯಕ್ಷೆ ಮೀನಾಕ್ಷಿ ನಾಯಕ, ಕಾರ್ಯದರ್ಶಿ ಲೀಲಾ ನಾಯ್ಕ, ರಮಾ ನಾಯಕ, ಮಂಕಾಳಿ ಗೌಡ, ಪವಿತ್ರಾ ಆಗೇರ ಸೇರಿದಂತೆ ಅಂಗನವಾಡಿಯ ನೂರಾರು ನೌಕರರ ಪಾಲ್ಗೊಂಡಿದ್ದರು.

RELATED ARTICLES  ಕುಮಟಾದಲ್ಲಿ ನೂತನವಾಗಿ ಪ್ರಾರಂಭವಾಗಿದೆ ಎಸ್. ವಿ ಅಯ್ಯಂಗಾರ್ ಬೇಕರಿ & ಸ್ವೀಟ್ಸ್