ದೇಶದ ಅತ್ಯುತ್ಕೃಷ್ಟ ಸಂಸ್ಕೃತ ವಿಶ್ವವಿದ್ಯಾಲಯವಾದ ತಿರುಪತಿಯ ರಾಷ್ಟ್ರಿಯಸಂಸ್ಕೃತ ವಿದ್ಯಾಪೀಠದಲ್ಲಿ ಇತ್ತೀಚೆಗೆ ನಡೆದ 22 ನೇಘಟಿಕೋತ್ಸವದಲ್ಲಿ ರಾಘವೇಂದ್ರ ಭಟ್ಟ ಕ್ಯಾದಗಿ ಇವರಿಗೆ ಪಿಹೆಚ್.ಡಿ. ಪ್ರದಾನ ಮಾಡಲಾಯಿತು.
`ಮಾಧ್ಯಮಿಕಸ್ತರೇ ಸಂಸ್ಕೃತಾಧ್ಯಯನ ಸಮಸ್ಯಾನಾಂ ಪ್ರಯೋಗಾತ್ಮಕಮಧ್ಯಯನಂಪರಿಹಾರೋಪಾಯಾಶ್ಚ’ – `An Experimental Study of Problems of Learning Sanskrit at Secondary Level and Remedial Measures’ ಎಂಬವಿಷಯದಲ್ಲಿ ಪ್ರಯೋಗಾತ್ಮಕವಾದ ವೈಜ್ಞಾನಿಕಸಂಶೋಧನಾಧ್ಯಯನ ನಡೆಸಿ ಪ್ರಸ್ತುತಪಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ಪದವಿ ಲಭಿಸಿದ್ದು, ರಾಷ್ಟ್ರಿಯ ಸಂಸ್ಕೃತವಿದ್ಯಾಪೀಠದ ಕುಲಾಧಿಪತಿ, ಭಾರತದನಿವೃತ್ತ ಮುಖ್ಯ ಚುನಾವಣಾ ಆಯುಕ್ತಎನ್. ಗೋಪಾಲಸ್ವಾಮಿ, (ಐ.ಎ.ಎಸ್.)ಹಾಗೂ ಕುಲಪತಿ ಪ್ರೊ. ವಿ. ಮುರಳೀಧರಶರ್ಮಾ ಅವರು ಗಣ್ಯರ ಸಮ್ಮುಖದಲ್ಲಿಪದವಿ ಪ್ರದಾನ ಮಾಡಿದರು. ರಾಷ್ಟ್ರಿಯಸಂಸ್ಕೃತ ವಿದ್ಯಾಪೀಠ ಸಂಸ್ಕೃತ ಶಿಕ್ಷಾಶಾಸ್ತ್ರಸಂಕಾಯದ ಡೀನ್ ಪ್ರೊ. ಪ್ರಹ್ಲಾದ ಆರ್.ಜೋಶಿಯವರು ಈ ಸಂಶೋಧನಾಧ್ಯಯನದಮಾರ್ಗದರ್ಶಕರಾಗಿದ್ದರು.
ಬೆಂಗಳೂರಿನ ಸರ್ಕಾರಿ ಪದವಿ ಪೂರ್ವವಿದ್ಯಾಲಯದಲ್ಲಿ ಸಂಸ್ಕೃತಅಧ್ಯಾಪಕರಾಗಿರುವ ಡಾ. ರಾಘವೇಂದ್ರಭಟ್ಟರು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರತಾಲ್ಲೂಕಿನ ಕ್ಯಾದಗಿ ಗ್ರಾಮದ ಕಲ್ಲಾಳಕುಟುಂಬದ ಗಣಪತಿ ಭಟ್ಟ ಹಿರೇಕೈ ಹಾಗೂಸರ್ವೇಶ್ವರೀ ದಂಪತಿಗಳ ಪುತ್ರರು.
ಸಾಮಾಜಿಕವಾಗಿಯೂ ಸಕ್ರಿಯರಾದಶ್ರೀಯುತರು `ಶ್ರೀಮುಖ’ ಅಂತರ್ಜಾಲೀಯವಾರ್ತಾವಾಹಿನಿಯ ಸಂಸ್ಕೃತ ಆವೃತ್ತಿಯಸಂಪಾದಕ, `ಗೋವಾಣಿ’ ಸಾಪ್ತಾಹಿಕಅಂತರ್ಜಾಲ ಪತ್ರಿಕೆಯ ಸಹ ಸಂಪಾದಕ,ಶ್ರೀ ಅಖಿಲ ಹವ್ಯಕ ಮಹಾಸಭೆಯು ನಡೆಸಿದದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ`ವೇದರತ್ನ’ ಪುರಸ್ಕಾರದ ಸಂಚಾಲಕ,`ಸಿದ್ಧಾರೂಢ ಭಾರತೀ’ ಸಂಶೋಧನಾಪತ್ರಿಕೆಯ ಸಂಪಾದಕ, `ಉನ್ನತಿಗುರುಕುಲ’ ದ ದಿಗ್ದರ್ಶಕಮಂಡಲಿಯಸದಸ್ಯರೂ ಸಹ ಆಗಿದ್ದಾರೆ.
ಕರ್ನಾಟಕ ಸರ್ಕಾರದ ವತಿಯಿಂದರಚಿಸಲಾದ ಕರ್ನಾಟಕ ರಾಜ್ಯ ಪಠ್ಯಕ್ರಮದಸಂಸ್ಕೃತ ಪಾಠ್ಯಪುಸ್ತಕ ರಚನೆ ಹಾಗೂಪರಿಷ್ಕರಣ ಸಮಿತಿಗಳಲ್ಲಿ ಅಧ್ಯಕ್ಷ,ಪರಿಷ್ಕಾರಕ, ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ.
ಶ್ರೀಭಾರತೀ ಪ್ರಕಾಶನದಿಂದ ಪ್ರಕಟಿತವಾದಇವರ `ನಿಬಂಧಮಂದಾಕಿನೀ’ ಗ್ರಂಥಕ್ಕೆಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ‘ಸಂಸ್ಕೃತ ಗ್ರಂಥ ಪುರಸ್ಕಾರ ೨೦೧೫’ರಾಜ್ಯ ಪ್ರಶಸ್ತಿಯೂ ಲಭಿಸಿದೆ.