ಬೆಂಗಳೂರು :ಬೆಂಗಳೂರು ಏರ್ ಶೋ ತರಬೇತಿ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ವಿಮಾನಪತನಗೊಂಡಿದೆ . ಈ ಅಪಘಾತದಲ್ಲಿ ಒಬ್ಬ ಪೈಲಟ್ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಏರೋ ಇಂಡಿಯಾ 2019ಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಬೆಂಗಳೂರು ಏರ್ ಷೋ ವೇಳೆ ಅವಘಡವೊಂದು ಸಂಭವಿಸಿದ್ದು, ತಾಲಿಮೀನಲ್ಲಿ ನಿರತವಾಗಿದ್ದ ಎರಡು ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಪತನವಾಗಿವೆ.
ಇದರ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಡಿಜಿ ಆಫ್ ಪೊಲೀಸ್ ಮತ್ತು ಫೈರ್ ಎಮರ್ಜನ್ಸಿ ಸರ್ವಿಸ್ ಎಂ.ಎನ್. ರೆಡ್ಡಿ, ವಿಮಾನ ಅಪಘಾತದಲ್ಲಿ ಒಬ್ಬ ಐಎಎಫ್ ಪೈಲಟ್ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.