ಹೊನ್ನಾವರ: ಮಡಿವಾಳ ಸಮುದಾಯ ಸಣ್ಣ ಸಮುದಾಯವಾದರೂ ಕಳೆದ 19 ವರ್ಷದಿಂದ ಅದ್ದೂರಿ ವಾರ್ಷಿಕೊತ್ಸವ ಆಚರಿಸುತ್ತಾ ಬಂದಿರುವುದು ನಿಜಕ್ಕೂ ಪ್ರಶಂಶನಾರ್ಹ ಎಂದು ಕುಮುಟಾ ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಅಬೇಂಡ್ಕರ ಸಭಾಭವನದಲ್ಲಿ ಹೊನ್ನಾವರ ತಾಲೂಕ ಮಡಿವಾಳ ಸಂಘ ಆಯೋಜಿಸಿದ 19ನೇ ವಾರ್ಷಿಕ ಸಮ್ಮೆಳನ ಉದ್ಘಾಟಿಸಿ ಮಾತನಾಡಿದರು. ಸಮಾಜ ಸಂಘಟಿತರಾದಲ್ಲಿ ಮಾತ್ರ ಅಭಿವೃದ್ದಿ ಸಾಧ್ಯ. ಸಂಘಟನೆ ಬಲಪಡಿಸಿಕೊಂಡು ಸಮಾಜದಲ್ಲಿರುವ ಸಮಸ್ಯೆ ಹಾಗೂ ಸಮಾಜಕ್ಕೆ ದೊರೆಯಬೇಕಾದ ಸೌಲಭ್ಯವನ್ನು ಪಡೆಯಲು ತಾಲೂಕ ಮಟ್ಟದ ಸಂಘಟನೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಬಗ್ಗೆ ಹೆಚ್ಚಿನ ಒತ್ತು ನೀಡಿ ಸಮಾಜದ ಸಾಧಕರನ್ನು ಪ್ರತಿಭಾವಂತರನ್ನು ಗುರುತಿಸಿ ಪೋತ್ಸಾಹ ನೀಡಿ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಭಾವನ ವಾಹಿನಿಯ ಸಂಪಾದಕ ಭವಾನಿಶಂಕರ ಮಾತನಾಡಿ, ಸಮಾಜದಿಂದ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಪ್ರತಿಭಾವಂತರು ಮುಂದಿನ ದಿನದಲ್ಲಿ ಸಮಾಜದೊಂದಿಗೆ ಸದಾ ಕಾಲ ಇದ್ದು ಪೋತ್ಸಾಹಿಸಬೇಕು. ಸಂಘಟನೆಯು ರಾಜಕೀಯ ರಹಿತವಾಗಿರಲಿ; ಆಗ ಸಂಘಟನೆ ಇನ್ನಷ್ಟು ಬಲಿಷ್ಠವಾಗುತ್ತದೆ. ಕಳೆದ 19 ವರ್ಷದಿಂದ ಸಂಘದ ವಾರ್ಷಿಕೊತ್ಸವ ನಡೆಸುದಲ್ಲದೇ ಪ್ರತಿವರ್ಷವು ಮಾಧ್ಯಮದವರಿಗೆ ಸ್ಥಾನವನ್ನು ಕಲ್ಪಿಸುತ್ತಿರುವುದು ಅಭಿನಂದನಾರ್ಹವಾಗಿದೆ ಎಂದರು.
ಸಮಾಜದ ನೌಕಾದಳದ ನಿವೃತ್ತ ಅಧಿಕಾರಿ ಶ್ರೀಧರ ಮಡಿವಾಳ, ವೈದ್ಯಕೀಯ ಕ್ಷೇತ್ರದ ರಕ್ಷೀತ ಪ್ರತಿಭಾವಂತರ ವಿದ್ಯಾರ್ಥಿಯರನ್ನು ಪುರಸ್ಕರಿಸಲಾಯಿತು. ಕೃಷಿ ಇಲಾಖೆಯ ಡೆಪ್ಯೂಟಿ ಡೈರಕ್ಟರ್ ಡಾ. ರಾಮಚಂದ್ರ ಕೆ. ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಣಾಡಿದರು.
ವೇದಿಕೆಯಲ್ಲಿ ಕುಮುಟಾ ಪುರಸಭಾ ಸದಸ್ಯೆ ಪಲ್ಲವಿ ಮಡಿವಾಳ, ಸಂಘದ ಅಧ್ಯಕ್ಷ ನಾಗೇಶ ಮಡಿವಾಳ, ಉಪಾಧ್ಯಕ್ಷ ಅನಿಲ ಮಡಿವಾಳ ಉಪಸ್ಥಿತರಿದ್ದರು. ಕುಮಾರಿ ಸುಷ್ಮಾ ಸ್ವಾಗತಿಸಿ, ಪ್ರಶಾಂತ ಮಡಿವಾಳ ವಂದಿಸಿದರು. ಉಮೇಶ ಮಡಿವಾಳ ನಿರ್ವಹಿಸಿದರು. ಶ್ರೀ ಸತ್ಯನಾರಾಯಣ ಪೂಜೆಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.