ಮೇಷ:- ನಿಮ್ಮ ಒಳ್ಳೆ ತನದಿಂದ ಅನೇಕ ಜನರನ್ನು ನಿಮ್ಮತ್ತ ಸೆಳೆಯಲಿದ್ದೀರಿ. ಹೊಸ ಜವಾಬ್ದಾರಿಯೊಂದು ನಿಮ್ಮ ಹೆಗಲೇರಲಿದೆ. ಉನ್ನತ ವಿದ್ಯಾಭ್ಯಾಸದ ಮೂಲಕ ನೀವು ನಿಮ್ಮ ಹಿರಿಯರಿಗೆ ಸಂತಸ ನೀಡುವಿರಿ.
ವೃಷಭ:- ಹೊರಗೆ ಊಟ ಮಾಡುವ ಸಂದರ್ಭದಲ್ಲಿ ಆಹಾರದ ಮತ್ತು ನೀರಿನ ಸ್ವಚ್ಛತೆ ಬಗ್ಗೆ ಗಮನ ಹರಿಸಿ. ಇಲ್ಲವೆ ವಿಷಯುಕ್ತ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಏರು ಪೇರು ಆಗುವ ಸಂದರ್ಭ ಇದೆ. ಸೂಕ್ತ ಮನೆವೈದ್ಯರ ಸಲಹೆ ಪಡೆಯಿರಿ.
ಮಿಥುನ:- ಸ್ವಜನ ಪ್ರೇಮ ಸಿಗಲಿದೆ. ಬೆಲೆಬಾಳುವ ವಸ್ತು, ಒಡವೆಗಳ ಪ್ರಾಪ್ತಿ ಮತ್ತು ಅಧಿಕಾರ ಪ್ರಾಪ್ತಿ ಉಂಟಾಗುವುದು. ಬರಹಗಾರರಿಗೆ ಮತ್ತು ಉಪಾಧ್ಯಾಯ ವೃತ್ತಿಯವರಿಗೆ ಹೆಚ್ಚಿನ ಅನುಕೂಲ ಕಂಡು ಬರುವುದು ಮತ್ತು ಸಾಮಾಜಿಕ ಮನ್ನಣೆ ದೊರೆಯುವುದು.
ಕಟಕ:- ಮನೆಯಲ್ಲಿ ಸಂತಸದ ವಾತಾವರಣ ಮೂಡಲಿದೆ. ಮಕ್ಕಳಿಂದ ಹರ್ಷದಾಯಕ ವಾರ್ತೆ ಕೇಳುವಿರಿ. ಕೆಲವರಿಗೆ ನೌಕರಿ ಸೇರಿಕೊಳ್ಳಲು ಆದೇಶ ಪತ್ರ ಕೈ ಸೇರುವುದು. ಸುಗ್ರಾಸ ಭೋಜನ ಸವಿಯುವಿರಿ.
ಸಿಂಹ:- ಆತುರಗಾರನಿಗೆ ಬುದ್ಧಿಮಟ್ಟ ಎಂಬ ಗಾದೆ ಮಾತು ನಿಮಗೆ ಅರಿವಾಗುವುದು. ಆತುರದಿಂದ ಮಾಡಿದ ವಾದ ನಿಮಗೆ ಮುಖಭಂಗವನ್ನುಂಟು ಮಾಡುವುದು. ಹಾಗಾಗಿ ತಾಳ್ಮೆಯಿಂದ ಎದುರಾಳಿ ಮಾತನ್ನು ಆಲಿಸಿ ವಾದ ಮಾಡಿದಲ್ಲಿ ಜಯ ನಿಮ್ಮದಾಗುವುದು.
ಕನ್ಯಾ:- ಇದ್ದಕ್ಕಿದ್ದಂತೆ ಆಪ್ತ ವಲಯವೇ ನಿಮ್ಮ ವಿರುದ್ಧ ತಿರುಗಿ ಬೀಳವ ಸಾಧ್ಯತೆ ಇದೆ. ಆದರೆ ಅವರನ್ನು ಎದುರಿಸುವ ಕಲೆಗಾರಿಕೆ ನಿಮ್ಮಲ್ಲಿರುವುದರಿಂದ ಹೆದರುವ ಅವಶ್ಯಕತೆ ಇಲ್ಲ. ಈ ಬಗ್ಗೆ ಹಿರಿಯರೊಬ್ಬರ ಸಲಹೆ ನಿಮಗೆ ಸಹಕಾರಿಯಾಗುವುದು.
ತುಲಾ:- ನಿಮ್ಮದಲ್ಲದ ಕೆಲಸವನ್ನು ಅನವಶ್ಯಕವಾಗಿ ಮಾಡಲು ಮುಂದಾಗದಿರಿ. ಇದರಿಂದ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಬಂಧು ಬಾಂಧವರಿಗೆ ಸಹಾಯಹಸ್ತ ನೀಡುವ ವಿಚಾರದಲ್ಲಿ ಎರಡು ಬಾರಿ ಚಿಂತಿಸಿ ಮುಂದುವರೆಯಿರಿ.
ವೃಶ್ಚಿಕ:- ಹಿರಿಯರಿಂದ ತೀರಾ ಅವಶ್ಯಕವಾದ ಹಲವು ಮಾರ್ಗದರ್ಶನಗಳನ್ನು ಸ್ವೀಕರಿಸಿ. ಈ ದಿನ ಬಹು ಆಪ್ಯಾಯಮಾನವಾಗಿದ್ದು ಮನಸ್ಸಿಗೆ ಮುದ ನೀಡುವ ಕೆಲವು ಘಟನೆಗಳು ಜರುಗುವುದು. ಹಣಕಾಸಿನ ಸಮಸ್ಯೆ ಬಗೆಹರಿಯುವುದು.
ಧನುಸ್ಸು:- ಕಾರಣವಿಲ್ಲದೆ ಜನರು ನಿಮ್ಮ ಮೇಲೆ ಆರೋಪ ಮಾಡುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಮನೋಬಲವೇ ಕುಗ್ಗಿದಂತೆ ಆಗುವುದು. ತಪ್ಪದೆ ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ಹಿತೈಷಿಗಳ ಹಿತವಚನ ಪಾಲಿಸಿ.
ಮಕರ:- ಕೌಟುಂಬಿಕ ವಲಯದಲ್ಲಿ ಕೊಂಚ ವಿರೋಧಾಭಾಸಗಳು ಉಂಟಾಗುವ ಸಾಧ್ಯತೆ ಇದೆ. ಶಿವ ಪಾರ್ವತಿಯರನ್ನು ನೆನೆದು ಕಾರ್ಯ ಪ್ರವೃತ್ತರಾಗಿ. ಸಿನಿಮಾ ರಂಗದಲ್ಲಿರುವವರಿಗೆ ಹೆಚ್ಚಿನ ಅನುಕೂಲ ಕಂಡು ಬರುವುದು.
ಕುಂಭ:- ದೂರದ ಊರೊಂದಕ್ಕೆ ಪ್ರವಾಸ ಮಾಡುವ ಸಂದರ್ಭ ದಿಢೀರನೆ ಬರುವುದು. ಅದನ್ನು ಮನಸಾ ಸ್ವೀಕರಿಸಿ ಪ್ರಯಾಣ ಬೆಳೆಸಿ. ಇದರಿಂದ ಒಳಿತಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಮೀನ:- ಕೃಷಿಕರಿಗೆ ಉತ್ತಮವಾದ ಕಾರ್ಯ ಯೋಜನೆ ರೂಪಿಸಿಕೊಳ್ಳಲು ಅನುವು ಉಂಟಾಗುತ್ತದೆ. ಕುಲದೇವತಾ ಕೃಪೆಯನ್ನು ಹೊಂದುವುದು ಅವಶ್ಯಕ. ಬಡವರಿಗೆ ಆಹಾರ ನೀಡಿ. ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿಬನ್ನಿ.