ಹೊನ್ನಾವರ: ತಾಲೂಕಿನ ಚಂದಾವರದ ಶ್ರೀ ಹನುಮಂತ ದೇವಾಯ ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಿದ್ದು ಪವಿತ್ರ ಯಾತ್ರಾಸ್ಥಳವಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ಹನುಮಂತ ದೇವರ ದರುಶನ ಪಡೆಯುತ್ತಿದ್ದಾರೆ. ಒಂದಲ್ಲ ಒಂದು ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬರುತ್ತಿದೆ. 2019 ಫೆಬ್ರವರಿ 25 ಸೋಮವಾರ ಮತ್ತು ಫೆಬ್ರವರಿ 26 ಮಂಗಳವಾರದಂದು ಶ್ರೀ ಹನುಮಂತ ದೇವರ ಕಲಾಭಿವೃದ್ದಿ.ಗೋಪುರ ಕಲಶಾರೋಹಣ.ಶತರುದ್ರ ಹವನ. ಸಾಮೂಹಿಕ ಶನಿಕಥೆ. ಪವಮಾನ ಕಲಶಾಭಿಶೇಕ.ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭಕ್ತಾದಿಗಳೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು ಮನ ಧನಗಳಿಂದ ಸಹಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕಲಾವೃದ್ದಿ ಸಮಿತಿ ಮತ್ತು ಆಡಳಿತ ಸಮಿತಿ ಯ ಆಧ್ಯಕ್ಷರು ಮತ್ತು ಪದಾದಿಕಾರಿಗಳು ಭಕ್ತಾದಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.