ಕಾರವಾರ: ಮಾತೃದೇವೋ ಅಂತಾರೆ..ತಾಯಿ ಹಾಗೂ ಮಕ್ಕಳ ಬಾಂಧವ್ಯ ಯಾವಾಗಲೂ ಅವಿನಾಭಾವ. ಈ ಘಟನೆಕೂಡಾ ಅದಕ್ಕೆ ಸಾಕ್ಷಿಯಾಗಿದೆ.

   ಮೃತಪಟ್ಟ ತಾಯಿಯ ಚಿತೆಗೆ ಬೆಂಕಿ ಇಟ್ಟು, ಮಗನೂ ಪ್ರಾಣಬಿಟ್ಟ ಮನ ಕಲಕುವ ಘಟನೆ ಕಾರವಾರದ ಸಿದ್ಧರದಲ್ಲಿ ನಡೆದಿದೆ.

    ಮಂಜುನಾಥ ಆತ್ಮಾರಾಮ ಕೊಳಂಬಕರ್ ಅವರ ತಾಯಿ ತಾಯಿ ಸಾವಿತ್ರಿ ಕೊಳಂಬಕರ್ ಅನಾರೋಗ್ಯದಿಂದ ಬಳಲುತ್ತಿದ್ದರು.ವಿಧಿಯಾಟ ನಿನ್ನೆ ಕಾಲವಾದರು.  ಅವರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆಂದು ಸ್ಮಶಾನಕ್ಕೆ ಕೊಂಡೊಯ್ಯಲಾಗಿತ್ತು. ತಾಯಿಯ ಏಕೈಕ ಮಗನಾಗಿದ್ದ ಮಂಜುನಾಥ್ ಎಲ್ಲ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ ಚಿತೆಗೆ ಬೆಂಕಿ ಇಡುತ್ತಿದ್ದಂತೆ ಎದೆನೋವು ಅವರಿಗೆ ಕಾಣಿಸಿಕೊಂಡಿತ್ತು.

RELATED ARTICLES  ರೈತರ ಸಹಾಯಕ್ಕಾಗಿ ನಮ್ಮ ಬಿಜೆಪಿ ಸರ್ಕಾರ ಹಲವಾರು ಯೋಜನೆ ತಂದಿದೆ : ದಿನಕರ ಶೆಟ್ಟಿ.

   ಕೂಡಲೆ ಸಿದ್ಧರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಜಿಲ್ಲಾಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

RELATED ARTICLES  ಬ್ಲಾಕ್ ಕಾಂಗ್ರೆಸ್ ಕುಮಟಾದ ಕಛೇರಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನಾಚರಣೆ ಆಚರಣೆ.

    ತಾಯಿಯ ಸಾವು ಮಗನನ್ನೂ ಕರೆಸಿಕೊಂಡಿದ್ದು ಇಡೀ ಕುಟುಂಬ ತಾಯಿ ಮಗನ ಸಾವಿಗೆ ಕಂಬನಿ ಮಿಡಿದಿದೆ. ನೋಡುವ ಸಮಾಜಕ್ಕೆ ತಾಯಿ ಮಗನ ಪ್ರೀತಿಯ ಅನಾವರಣವೇ ಎಂಬಂತಾಗಿತ್ತೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.