ಕುಮಟಾ: ಜಿ.ಪಂ ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಸೇವಾದಳ ಕಾರವಾರ ಶೈಕ್ಷಣಿಕ ಸಮಿತಿ, ಭಾರತ ಸೇವಾದಳ ತಾಲೂಕಾ ಸಮಿತಿ ಕುಮಟಾ ಇವರ ಸಹಯೋಗದಲ್ಲಿ ಎರಡು ದಿನಗಳ ಕಾಲ ಇಲ್ಲಿನ ಮಣಕಿ ಮೈದಾನದಲ್ಲಿ ಹಮ್ಮಿಕೊಂಡ ಜಿಲ್ಲಾಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳಕ್ಕೆ ಇಂದು ವಿದ್ಯುಕ್ತ ಚಾಲನೆ ಸಿಕ್ಕಿದೆ.

ಇಂದು ಕುಮಟಾದ ಮಣಕಿ ಮೈದಾನದಲ್ಲಿ ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಭಾರತ ಸೇವಾದಳ ಒಂದು ಪಕ್ಷಾತೀತ ಸಂಘಟನೆಯಾಗಿದ್ದು, ಮಕ್ಕಳಲ್ಲಿ ಶಿಸ್ತು, ದೇಶಸೇವೆ ಹಾಗೂ ದೇಶಪ್ರೇಮ ಬೆಳೆಯಲು ಭಾರತ ಸೇವಾದಳದಂತಹ ಸಂಘಟನೆಗಳು ನಿರಂತರವಾಗಿರಬೇಕು ಎಂದು ಅಭಿಪ್ರಾಯಪಟ್ಟರು.

RELATED ARTICLES  ಅಪವಿತ್ರ ಮೈತ್ರಿಯ ಆಕಸ್ಮಿಕ ಸಾಂದರ್ಭಿಕ ಶಿಶುವಿನಿಂದ ಜಿಲ್ಲೆಗೆ ಸತತವಾಗಿ ಅನ್ಯಾಯವಾಗುತ್ತಿದೆ : ಪ್ರಮೋದ ಹೆಗಡೆ.

ಅಧಕ್ಷತೆಯನ್ನು ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ವಹಿಸಿದ್ದರೆ, ಮುಖ್ಯ ಅತಿಥಿಗಳಾಗಿ ಎಪಿಎಮ್‍ಸಿ ಅಧ್ಯಕ್ಷ ರಾಮನಾಥ ಶಾನಭಾಗ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ.ಟಿ ನಾಯ್ಕ, ಡಯೆಟ್‍ನ ಉಪನಿರ್ದೇಶಕ ಈಶ್ವರ ನಾಯ್ಕ, ಶಿಕ್ಷಣಾಧಿಕಾರಿ ಎ.ಜಿ ಮುಲ್ಲಾ, ವಿನಾಯಕ ಬಾಳೇರಿ, ಪುರಸಭಾ ಸದಸ್ಯ ಸಂತೋಷ ನಾಯ್ಕ, ಕುಮಟಾ ತಾಲೂಕಾಧ್ಯಕ್ಷ ಎಮ್.ಬಿ. ಪೈ, ಹೊನ್ನಾವರ ತಾಲೂಕಾಧ್ಯಕ್ಷ ವಾಮನ ನಾಯ್ಕ, ಅಂಕೋಲಾ ತಾಲೂಕಾಧ್ಯಕ್ಷ ಬಿ.ಜಿ ನಾಯ್ಕ, ರಾಮಚಂದ್ರ ಹೆಗಡೆ, ಎಚ್.ಆರ್ ನಾಯ್ಕ, ಎಸ್.ಜಿ. ನಾಯ್ಕ ಇದ್ದರು.

RELATED ARTICLES  ವಿಶ್ವವಿದ್ಯಾಪೀಠದ ಬಗ್ಗೆ ಅರಿವು ಮೂಡಿಸುವ ಕಾರ್ಯ : ಕುಮಟಾ ರೋಟರಿ ಕ್ಲಬ್ ಸಹಯೋಗದಲ್ಲಿ ಯಶಸ್ವಿಯಾದ ಸಂವಾದ

    ಈ ಸಂದರ್ಭದಲ್ಲಿ ವಿಕಲಚೇತನರಿಗೆ ನೀಡುವ ತ್ರಿಚಕ್ರ ಸೈಕಲನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ವಿದ್ಯಾಗಳಿಂದ ವೈವಿದ್ಯಮಯ ಕಾರ್ಯಕ್ರಮಗಳು ನಡೆದವು.