ಭಟ್ಕಳ: ಮಾಜಿ ಶಾಸಕರಾದ ಮಂಕಾಳ ವೈದ್ಯರ ಕಾಲಾವಧಿಯಲ್ಲೆ ದಿನಾಂಕ 20/10/2015 ಮತ್ತು 24/05/2016 ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರೀಯ ಹೆದ್ದಾರಿಯು 30 ಮೀ. ಕಡಿಮೆ ಗೊಳಿಸಿ ಆದೇಶ ಹೊರಡಿಸಿದ್ದು ಆಗ ಇದೆ
ಮಂಕಾಳ ವೈದ್ಯ ಶಾಸಕರಾಗಿ ಮತ್ತು ಇದೆ ಉಸ್ತುವಾರಿ ಸಚಿವರಿದ್ದರು. ಅಂದು ೩೦ ಮೀ. ಬೇಕು ಎನ್ನುತಿರುವರಿಗೆ ಬೆಂಬಲನೀಡಿ ಇಂದು ವಿರೋಧ ವ್ಯಕ್ತಪಡಿಸುತ್ತಿರುವುದು ಅವರ ಸೋಲಿನ ಹತಾಸೆಯನ್ನು ತೋರಿಸುತ್ತಿದೆ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ರಾಜೇಶ ನಾಯ್ಕ ಪತ್ರಿಕಾಗೋಷ್ಠಿ ನಡೆಸಿ ಕಿಡಿಕಾರಿದ್ದಾರೆ.
ಶಿರಾಲಿಯ ಪಂಚಾಯತನ ನೇತೃತ್ವದಲ್ಲಿ ಪಕ್ಷಾತೀತ ನೆಲೆಯಲ್ಲಿ ಧರಣಿ ನಡೆಸುತ್ತಿರುವ ವೇದಿಕೆಯಲ್ಲಿ ಬೆಂಬಲ ಹತ್ತಿಕ್ಕುವ ಪ್ರಯತ್ನವಾಗಿದ್ದು ತಮ್ಮ ಅಧಿಕಾರವಧಿಯಲ್ಲೇ ಶಿರಾಲಿ ಗ್ರಾಮ ಪಂಚಾಯತನಿಂದ ಕಳೆದ ಎರಡು ವರ್ಷಗಳಿಂದ 30 ಮೀ. ರಸ್ತೆ ಅಗಲಿಕರಣ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದು ಆಗ ನೀವು 30ಮೀ ರಸ್ತೆ ನಿಗದಿಗೊಳಿಸುವರಿಗೆ ಬೆಂಬಲಿಸಿ 30ಮೀ ರಸ್ತೆ ನಿಗದಿ ಗೊಳಿಸುದಕ್ಕೆ ಸಹಕಾರಿಯಾಗಿದ್ದಿರಿ. ಆಗ ನೀವು ಏನನ್ನು ಮಾತನಾಡದೆ ಈಗಾ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು ಇಂತಹ ಪ್ರಯತ್ನಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.
ರಸ್ತೆ ಅಗಲೀಕರಣ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರನ್ನು ಪಂಚಾಯತ್ ನಿಂದ ಸಂಪರ್ಕ ಮಾಡಿದಾಗ ಯಾವುದೇ ಕಾರಣ ಕ್ಕೂ 30ಮೀ ರಸ್ತೆ ಅಂತಿಮ ಗೊಳಿಸಿರುತ್ತೇನೆ. ಈ ವಿಷಯದಲ್ಲಿ ಯಾರು ಮೂಗು ತೂರಿಸಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದು ನೀವು ಯಾಕೆ ಮರೆ ಮಾಚುತ್ತೀರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳೆ???
ಶಿರಾಲಿ ಕರ್ಕಿ ಹಳದಿಪುರ ಮತ್ತು ಆವರ್ಸಾ ಮುಂತಾದ ಕಡೆಗಳಲ್ಲಿ 30ಮೀ ರಸ್ತೆ ಬೇಕೆಂದು ಹೇಳಿದ್ದು ಜನಪರ ಕಾಳಜಿ ಉಳ್ಳ ನೀವು ನಿಮ್ಮ ಅವಧಿಯಲ್ಲಿ ಜಾರಿಗೆ ಬಂದ ಈ ರಸ್ತೆಯನ್ನು ಯಾಕೆ ವಿರೋಧಿಸಲಿಲ್ಲಾ???
ಹೀಗಿರುವಾಗ ತಾಕತ್ತಿದ್ದರೆ ಮಂಕಾಳ ವೈದ್ಯರು ಧರಣಿ ನಿರತ ಜಾಗಕ್ಕೆ ಎಲ್ಲಾ ಉಸ್ತುವಾರಿ ಸಚಿವರನ್ನು ಕರೆಸಿ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಿ ಮೊದಲು ಈ ಕೆಲಸ ಮಾಡಿ ಇಲ್ಲವೇ ರಾಜಕೀಯ ಕೀಳುಮಟ್ಟದ ಬೊಗಳೆ ಬಿಡುವುದು ನಿಲ್ಲಿಸಿ.
24 ಗಂಟೆಯೊಳಗೆ ನಾನು ರಸ್ತೆ ಮಾಡಿ ತೋರಿಸುತ್ತೇನೆ ಎಂಬುದು ಬರೀ ಸುಳ್ಳು ಮಾತು ಈ ಹಿಂದೆ ಕೂಡ ಕೇಂದ್ರ ಸಚಿವರಿಗೆ “100 ಅನಂತ್ ಕುಮಾರ್ ಬಂದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ” ಎಂದು ಸವಾಲು ಹಾಕಿದ್ದೀರಿ ಅದೇ ಸೋಲಿನ ಹತಾಶೆ ಯಲ್ಲಿ ಶಿರಾಲಿಯಲ್ಲಿ ನಡೆಯುತ್ತಿರುವ ಪಕ್ಷಾತೀತ ಧರಣಿಯ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದೀರಿ.
ಅಲ್ಲದೆ ಅದೇ ವೇದಿಕೆಯಲ್ಲಿ ನಾನು ತಂದ ಕಾಮಗಾರಿಗಳಿಗೆ ಹಾಲಿ ಶಾಸಕರು ಗುದ್ದಲಿ ಪೂಜೆ ಮಾಡುತ್ತಿದ್ದಾರೆ ಎಂದು ಹೇಳಿದ್ದೀರಿ ನಿಮಗೇನಾದರೂ ಸಮಯ ಪ್ರಜ್ಞೆ ಇದೆಯಾ?
ವೇದಿಕೆಯಲ್ಲಿ ಯಾವ ಮಾತುಗಳನ್ನು ಆಡಬೇಕೆಂಬ ಕಿಂಚಿತ್ತು ಜ್ಞಾನವಾದರೂ ನಿಮಗಿದೆಯೇ ???
ನೀವು ಕೂಡ ಮಾಜಿ ಶಾಸಕ ಜೆಡಿ ನಾಯ್ಕ ನ ಕಾಲಾವಧಿಯಲ್ಲಿ ತಂದಿದ್ದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದ್ದು ಮರೆತಿರಾ?
ಅಭಿವೃದ್ಧಿ ನಿರಂತರವಾದದ್ದು. ಅದು ನಿಮ್ಮ ವೈಯಕ್ತಿಕ ಹಣವಾಗಿರದೆ ಸರ್ಕಾರದ ಹಣ ಎನ್ನುವ ಸಾಮಾನ್ಯ ಜ್ಞಾನ ನಿಮಗೆ ಇಲ್ಲದೆ ಹೊಯಿತಲ್ಲಾ ಮಾಜಿ ಶಾಸಕರೇ?
ಸಂಸದರನ್ನು ಅವಾಚ್ಯ ಶಬ್ದಗಳಿಂದ ನೀವು ನಿಂದಿಸಿದ್ದು. ಬೇಷರತ್ತಾಗಿ ಕ್ಷಮೆ ಕೇಳಬೇಕು. ಒಂದು ಅವಧಿಗೆ ಶಾಸಕರಾಗಿದ್ದ ನೀವು ಆಸ್ಥಾನದ ಗೌರವವನ್ನು ಕಾಪಾಡಿಕೊಳ್ಳಬೇಕು ಅದರ ಹೊರತಾಗಿ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿರುವುದು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿರಾಲಿಯಲ್ಲಿ ನಡೆಯುತ್ತಿರುವ ಪಕ್ಷಾತೀತ ಹೋರಾಟಕ್ಕೆ ಬಿಜೆಪಿಯ ಬೆಂಬಲವಿದೆ. ಮಾನ್ಯ ಸಂಸದರ ಮೂಲಕ ನಾವು ರಸ್ತೆ ಅಗಲೀಕರಣದ ಹೋರಾಟ ನಡೆಸಿ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಭಟ್ಕಳ ಬಿಜೆಪಿ ಮಂಡಲ ಪ್ರಕಟಣೆಯಲ್ಲಿ ತಿಳಿಸಿದೆ.