ಶಿರಸಿ: ಕಣ್ಮರೆಯಾಗುತ್ತಿರುವ ಕಬ್ಬು ಬೆಳೆಗೆ ಪ್ರೋತ್ಸಾಹ ನೀಡುವ ಹಾಗೂ ಜನಸಾಮಾನ್ಯರಿಗೆ ಆಲೆಮನೆ ಬಗ್ಗೆ ಕಿರುಪರಿಚಯ ನೀಡುವ ಉದ್ದೇಶದಿಂದ ಟಿ.ಎಸ್.ಎಸ್. ಆವಾರದ ಅಡಿಕೆ ವ್ಯಾಪಾರಿ ಅಂಗಳದಲ್ಲಿ ದಿನಾಂಕ: 23.02.2019 ರ ಶನಿವಾರ ಮತ್ತು 24.02.2019ರ ಭಾನುವಾರ ದಂದು “ಕಬ್ಬಿನ ಹಬ್ಬ” ವೆಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಈ ಎರಡು ದಿನಗಳ ಕಾಲ ಸಂಜೆ 4.00 ಗಂಟೆಯಿಂದ 8.00ಯವರೆಗೆ ನಡೆಯುವ ಕಬ್ಬಿನ ಹಬ್ಬದಲ್ಲಿ ಕಬ್ಬಿನ ಹಾಲು ವಿವಿಧ ಸ್ವಾದಗಳಲ್ಲಿ ಅಂದರೆ ಆರೆಂಜ್, ಶುಂಠಿ, ಲಿಂಬು, ಹಾಗೂ ಖಾರದ ಕಬ್ಬಿನ ಹಾಲುಗಳು ಗ್ರಾಹಕರಿಗೆ ಸವಿಯಲು ದೊರೆಯುತ್ತದೆ.

RELATED ARTICLES  ಚಿಟ್ಟಾಣಿ ನುಡಿನಮನ ಕಾರ್ಯಕ್ರಮ

ಇದರ ಜೊತೆಗೆ ವೈವಿದ್ಯಮಯ ತಿನಿಸುಗಳಾದ ಮಿರ್ಚಿ, ಕಟ್ ಮಿರ್ಚಿ, ಕಂದಾ ಬಜೆ, ಚಟ್ಟಂಬಟೆ, ಗೋಬಿಬಜೆ, ಮಸಾಲಾ ಮಂಡಕ್ಕಿ, ಗಿರ್‍ಮಿಟ್, ಕರಿದ ಶೇಂಗಾ, ಖಾರಾ, ಒಗ್ಗರಣೆ ಮಂಡಕ್ಕಿ, ಚಿಪ್ಸ್ ಪಾಪಡ್ ಮಿರ್ಚಿ, ಇದರ ಜೊತೆಯಲ್ಲಿ ಕಬ್ಬಿನ ಹಾಲಿನಿಂದ ತಯಾರಿಸಲಾಗುವ ಕಬ್ಬಿನ ಹಾಲು ದೋಸೆ, ಕಬ್ಬಿನ ಹಾಲು ತೊಡದೇವು ಗ್ರಾಹಕರಿಗೆ ಲಭ್ಯವಿದ್ದು, ಕುಟುಂಬ ಸಮೇತರಾಗಿ ಬಂದು ಸವಿಯಲು ಆಕರ್ಷಕ ಪ್ಯಾಕೇಜ್ ವ್ಯವಸ್ಥೆ ಮತ್ತು ತಿಂಡಿ ತಿನಿಸುಗಳನ್ನು ಕೊಂಡೊಯ್ಯಲು ಸಹ ಅವಕಾಶ ಕಲ್ಪಿಸಲಾಗಿದೆ. ಈ ಕಬ್ಬಿನ ಹಬ್ಬದಲ್ಲಿ ಆಲೆಮನೆಯ ವಿಶೇಷತೆಗಳ ಕುರಿತಾಗಿ ಜನರಿಗೆ ಮಾಹಿತಿ ಹಾಗೂ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿರುವ ಕಬ್ಬು ಬೆಳೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಈ ಹಬ್ಬದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ಬೋಟ್ ಗೆ ಬೆಂಕಿ : ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ.