ಶಿರಸಿ: ಉತ್ತರ ಕನ್ನಡ ಶಾಂತಿ ಪ್ರಿಯರ ನೆಲೆ ಎಂಬೆಲ್ಲ ಬಣ್ಣನೆ ಇದೀಗ ಸುಳ್ಳಾಗಿದೆಯೇನೋ ಎಂಬಂತೆ ಭಾಸ ವಾಗುತ್ತಿದೆ. ಕೊಲೆ ಸುಲಿಗೆ ಹಾಗೂ ಇನ್ನಿತರ ಘಟನೆಗಳು ಉತ್ತರ ಕನ್ನಡದಲ್ಲಿ ಕಡಿಮೆ ಎನ್ನಲಾಗುತ್ತಿತ್ತು. ಆದರೆ ಈ ಘಟನೆ ಅದಕ್ಕೆ ವಿರುದ್ಧವಾಗಿದೆ. ಶಿರಸಿಯ ಬದನಗೋಡದಲ್ಲಿ ಮೊಮ್ಮಗನು ನಿಧಿ ಆಸೆಗೆ ಅಜ್ಜಿಯನ್ನು ಕೊಲೆ ಮಾಡಿದ ಘಟನೆ ವರದಿಯಾಗಿದ್ದು ಈ ಘಟನೆ ಉತ್ತರ ಕನ್ನಡದವರನ್ನು ಬೆಚ್ಚಿ ಬೀಳಿಸಿದೆ ಎನ್ನಲಾಗಿದೆ.

RELATED ARTICLES  ಅಘನಾಶಿನಿ ಜೀವದೊಡಲ ನೈಜ ಸತ್ಯಕ್ಕೆ ಸಾಕ್ಷಿಯಾಯ್ತು ಕುಮಟಾದಲ್ಲಿ ಪ್ರದರ್ಶನ ಕಂಡ ಅಘನಾಶಿನಿ ಸಾಕ್ಷ್ಯಚಿತ್ರ!

ಆರೋಪಿ ರಮೇಶ ಗೊಲ್ಲರ್ ಮೊಮ್ಮಗನಾಗಿದ್ದು ನಿಧಿ ಆಸೆಗಾಗಿ ಈತ ತನ್ನ ಅಜ್ಜಿ ಬದನಗೋಡದ ಯಲ್ಲವ್ವ ಗೊಲ್ಲರ್ ಅನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಇದೀಗಿನ ವರದಿ ಪ್ರಕಾರ ಆರೋಪಿ ರಮೇಶ ಗೊಲ್ಲರ್ ತಲೆಮರೆಸಿಕೊಂಡಿದ್ದಾನೆ.  ಬನವಾಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದ್ದು, ಪೊಲೀಸರು ಈತನಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಮೊದಲು ಈತ ಸನಿಹದ ಮಳಗಿ ಡ್ಯಾಮ್ ಬಳಿ ನಿಧಿಗಾಗಿ ಇದೇ ರೀತಿ ಒಂದು ಕೊಲೆ ಮಾಡಿದ್ದ ಎಂಬ ಮಾತುಗಳೂ ಕೇಳಿಬಂದಿವೆ. ತನಿಖೆಯ ನಂತರ ಪೂರ್ಣ ಸತ್ಯಾಂಶ ಹೊರ ಬರಬೇಕಾಗಿದೆ.

RELATED ARTICLES  ಆತ್ಮಹತ್ಯೆಗೆ ಯತ್ನಿಸಿದ ಯುವಕ