ಕುಮಟಾ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬಗ್ಗೆ ಮಾತನಾಡುವ ದೇಶಪಾಂಡೆ ಅವರ ವಿರುದ್ಧ ಬಿಜೆಪಿ ನಾಯಕರು ಕೆಂಡಾ ಮಂಡಲರಾಗಿದ್ದಾರೆ.  ಬಿಜೆಪಿ ಕಚೇರಿಯಲ್ಲಿ  ಪತ್ರಿಕಾಗೋಷ್ಠಿ ನಡೆಸಿದ ಮಾತನಾಡಿದ ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ನಾಗರಾಜ ನಾಯಕ ಹೆಗಡೆಯವರು ಇಷ್ಟು ವರ್ಷ ಜಿಲ್ಲೆಯ ಸಂಸದರಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವ ದೇಶಪಾಂಡೆಯವರು ಇಷ್ಟು ವರ್ಷಗಳ ಕಾಲ ಸಚಿವರಾಗಿ ಈ ಜಿಲ್ಲೆಯ ಅಭಿವೃದ್ಧಿಗಾಗಿ ಏನು ಮಾಡಿದ್ದಾರೆ ಎಂಬುದನ್ನು ಜನರ ಮುಂದಿಡಲು ಶ್ವೇತಪತ್ರ ಹೊರಡಿಸಿಬೇಕು ಎಂದರು.

     ಅವರು, ಸಂಸದ ಮತ್ತು ಶಾಸಕರ ಕಾರ್ಯವ್ಯಾಪ್ತಿ ಬೇರೆ ಎಂಬುದನ್ನು ಅರಿಯದವರ ರೀತಿಯಲ್ಲಿ ದೇಶಪಾಂಡೆ ಮಾತನಾಡಿದ್ದನ್ನು ನೋಡಿದರೆ, ಸಂಸದರಾದವರು ಚರಂಡಿ ರಿಪೇರಿ ಮಾಡಿಸುವ ಕೆಲಸಕ್ಕೂ ಬರಬೇಕು ಎಂಬಂತಿದೆ ಎಂದು ವ್ಯಂಗ್ಯವಾಡಿದರು.

RELATED ARTICLES  ಹುತಾತ್ಮರಾದ ಭಾರತಾಂಬೆಯ ಮಕ್ಕಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣಾ ಸಭೆ

ಆರ್.ವಿ.ದೇಶಪಾಂಡೆ ಹಲವು ವರ್ಷಗಳ ಕಾಲ ಕೈಗಾರಿಕಾ ಸಚಿವರಾಗಿದ್ದರೂ ಜಿಲ್ಲೆಯ ಯುವಕರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸ್ವಲ್ಪವೂ ಪ್ರಯತ್ನಿಸಿಲ್ಲ ಎಂದ ಅವರು ಅನಂತಕುಮಾರ ಹೆಗಡೆ ಈ ಜಿಲ್ಲೆಯ ರೈತರಿಗಾಗಿ ಸಾವಯವ ಮಿಷನ್, ಸೀಬರ್ಡ್ ನಿರಾಶ್ರಿತರಿಗೆ ನ್ಯಾಯವಾಗಿ ಸಿಗಬೇಕಾದ ಪರಿಹಾರ ಕೊಡಿಸುವುದೂ ಸೇರಿದಂತೆ ಸಾಕಷ್ಟು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ ಎಂದರು.

    ಈ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಸಂಸದರಾಗಿ ಹೋದವರಿಗಿಂತ ಹೆಚ್ಚು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಅನಂತಕುಮಾರ ಹೆಗಡೆ ಸಂಸತ್ತಿನಲ್ಲಿ ಮಾತನಾಡಿದ್ದಾರೆ. ಇದೆಲ್ಲವೂ ಸಚಿವ ಅನಂತಮಾರ ಹೆಗಡೆ ಅವರ ವೆಬ್‍ಸೈಟ್ ಹಾಗೂ ಯುಟ್ಯೂಬ್‍ಗಳಲ್ಲಿ ಇರುವುದನ್ನು ದೇಶಪಾಂಡೆ ನೋಡಿ ತಿಳಿದುಕೊಂಡು ಮಾತನಾಡಬೇಕು ಎಂದರು.

RELATED ARTICLES  ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಕಲಾಕಾರ ರವೀಂದ್ರ ಹೆಗಡೆ

      ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಮತ್ತೆ ಸೋಲು ಕಾಣಲಿದೆ. ಆ ಭಯದಿಂದ ದೇಶಪಾಂಡೆ ಪೋಲಿಸರನ್ನು ಬಳಿಸಿಕೊಂಡು ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಚುನಾವಣೆಯ ಕೆಲಸ ಮಾಡುವುದನ್ನು ತಡೆಯುವುದಕ್ಕಾಗಿ ವಿನಾಕಾರಣವಾಗಿ 107ಕಲಮ್ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ವೆಂಕಟ್ರಮಣ ಹೆಗಡೆ, ಅಶೋಕ ಪ್ರಭು,ಹೇಮಂತ ಗಾವ್ಕರ್ ಹಾಗೂ ಇನ್ನಿತರರು ಇದ್ದರು.