ನಾಡಿನ ನಾಮಾಂಕಿತ ಪತ್ರಿಕೆಗಳಲ್ಲಿ ಲೇಖನ ಬರೆಯುವ ಮೂಲಕ ಹೆಸರುವಾಸಿಯಾಗಿರುವ ಶಿರಸಿ ತಾಲೂಕಿನ ಹೆಗಡೆಕಟ್ಟಾ ನಿವಾಸಿ ವಿನಾಯಕ ಹೆಗಡೆ ಇವರ ಚೊಚ್ಚಲ ಕೃತಿ “ಬಾಳ್ನೋಟ”ಕೃತಿಯ ಕುರಿತು ಮಾಹಿತಿಯನ್ನು ನೀಡಲಾಗಿದ್ದು ಅವರ ಪರಿಚಯದ ಜೊತೆಗೆ ಅವರ ಆಶಯವನ್ನೂ ಇಲ್ಲಿ ಬಿತ್ತರಿಸಿದೆ.

ಕೃತಿಯ ಕುರಿತು

ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಲೇಖನಗಳ ಸಂಕಲನ ಇದಾಗಿದ್ದು, 44 ಲೇಖನಗಳನ್ನೊಳಗೊಂಡಿದೆ.

ವಿನಾಯಕ ಹೆಗಡೆ ಅವರ ತಂದೆ ಯಡಳ್ಳಿಯ ವಿದ್ಯೋದಯ ಪ.ಪೂ. ಕಾಲೇಜಿನ ವಿಶ್ರಾಂತ ಕನ್ನಡ ಉಪನ್ಯಾಸಕರಾದ ಜಿ.ಎನ್.ಹೆಗಡೆ ಆಡಳ್ಳಿ ಆಶಯ ನುಡಿ ಬರೆದಿದ್ದು, ಹಿರಿಯ ವಿದ್ವಾಂಸ ಶ್ರೀ ಎಂ ವಿ ಶರ್ಮಾ ತದ್ದಲಸೆ ಬೆನ್ನುಡಿ ಬರೆದಿರುವ ಈ ಪುಸ್ತಕವನ್ನು ಬೆಂಗಳೂರಿನ ಅಕ್ಷಯ ಪ್ರಕಾಶನ ಪ್ರಕಾಶಿಸಿ ಪ್ರಕಟಿಸಿದೆ.

RELATED ARTICLES  ಶಿರಸಿಯಲ್ಲಿ ಬೆಂಕಿಗೆ ಬಲಿಯಾದ ಶಿಕ್ಷಕ: ನಡೆಯಿತು ಹೃದಯ ವಿದ್ರಾವಕ ಘಟನೆ.

ವಿನಾಯಕ ಹೆಗಡೆ ಇವರು ಇದೀಗ ಮತ್ತೊಂದು ಮಹಾತ್ವಾಕಾಂಕ್ಷೆ ಯೋಜನೆ ಕೈಗೊಂಡಿದ್ದು, ತಮಗೆ ಬಂದಿರುವ ಗೌರವ ಪ್ರತಿಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ದಿವ್ಯಾಂಗರಿಗೆ ನೀಡುವ ಗುರಿ ಹೊಂದಿದ್ದಾರೆ.

RELATED ARTICLES  ತಾಲೂಕ ಮಟ್ಟದ ವಾಲಿಬಾಲ್ ಪಂದ್ಯಾವಳಿ ಮತ್ತು ಸನ್ಮಾನ ಕಾರ್ಯಕ್ರಮ

ಪುಸ್ತಕದ ಬೆಲೆ ಕೇವಲ ₹80 ಆಗಿದ್ದು, ಇದೀಗ 11 ಪುಸ್ತಕ ಉಳಿದಿವೆ. ಆಸಕ್ತರು ಪುಸ್ತಕ ಕೊಂಡು, ಅವರ ಯೋಜನೆಯ ಪಾಲುದಾರರಾಗಲು ವಿನಂತಿ.

ಲೇಖಕ ವಿನಾಯಕ ಹೆಗಡೆ ಅವರ ಕುರಿತು…:

ಇವರು ಪ್ರವೃತ್ತಿಯಲ್ಲಿ ಹವ್ಯಾಸಿ ಬರಹಗಾರರಾಗಿದ್ದು, ಹೊನ್ನಾವರದಲ್ಲಿ ಪ್ರಕಟವಾಗುವ ಕೃಷ್ಣಮೂರ್ತಿ ಹೆಬ್ಬಾರ್ ಇವರ ಪ್ರಧಾನ ಸಂಪಾದಕತ್ವದ “ನಾಗರಿಕ” ವಾರಪತ್ರಿಕೆಯ ಶಿರಸಿ ತಾಲೂಕು ವರದಿಗಾರರಾಗಿದ್ದಾರೆ.

“ಬಾಳ್ನೋಟ” ಕೃತಿಗಾಗಿ ಸಂಪರ್ಕ ವಿಳಾಸ:
ವಿನಾಯಕ ಹೆಗಡೆ,
ಹೆಗಡೆಕಟ್ಟಾ,
Mob: 9972382333