ಭಟ್ಕಳ: ಅಪರ್ಣಾ ನಾಗರಾಜ್ ಶೇಠ್ ಎಂಬ ಮಹಿಳೆ ಡೋಂಗರ್ ಪಳ್ಳಿಯ ಬಳಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಆಳಬಾವಿಯಲ್ಲಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು ಸ್ಥಳಿಯ ಮುಸ್ಲಿಮ್ ಯುವಕರು ತಮ್ಮ ಜೀವದ ಹಂಗು ತೊರೆದು ಬಾವಿಯಿಂದ ಜೀವಂತವಾಗಿ ಮಹಿಳೆಯನ್ನು ರಕ್ಷಿಸಿ ಘಟನೆ ವರದಿಯಾಗಿದೆ.

RELATED ARTICLES  ಗೋಕರ್ಣ ಗೌರವ" 383ನೇ ದಿನದ ಕಾರ್ಯಕ್ರಮದಲ್ಲಿ ಪ ಪೂ ಶ್ರೀ ಶ್ರೀ ಸಿದ್ಧಾರೂಢ ಸ್ವಾಮೀಜಿ

ಮಹಿಳೆ ಬಾವಿಯೊಂದರಲ್ಲಿ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಈ ಘಟನೆಯನ್ನು ಕಟ್ಟಡ ಕಾರ್ಮಿಕರು ಗಮನಿಸಿ ಅಕ್ಕಪಕ್ಕದಲ್ಲಿರುವ ಯುವಕರನ್ನು ಕೂಗಿ ಕರೆದಿದ್ದಾರೆ. ಕ್ಷಣಾರ್ಧದಲ್ಲೆ ಮಗ್ದೂಮ್ ಕಾಲೋನಿ, ಡೋಂಗರ್ ಪಳ್ಳಿ, ಸೋನಾರ್ ಕೇರಿ, ಆಸಾರಕೇರಿಯ ಯುವಕರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

ಆದರೆ ಆಳಬಾವಿಯಲ್ಲಿ ಇಳಿದು ಮಹಿಳೆಯನ್ನು ರಕ್ಷಿಸುವುದು ಅಸಾಧ್ಯವೆಂದನಿಸಿ ಬಹಳಷ್ಟು ಯುವಕರು ಹಿಂದೆ ಸರಿದರು. ಆದರೆ ಇಬ್ರಾಹಿಂ ಬಾವಲ ಎಂಬ ಯುವಕ ತಾನು ಮಹಿಳೆಯನ್ನು ರಕ್ಷಿಸುತ್ತೇನೆ ಎಂದು ಪೊಲೀಸರ ಅನುಮತಿಯೊಂದಿಗೆ ಆಳಬಾವಿಗೆ ಇಳಿದು ಮಹಿಳೆಯನ್ನು ಬದುಕಿಸುವಲ್ಲಿ ಯಶಸ್ವಿಯಾಗಿದ್ದಾನೆ. ನಂತರ ಮಹಿಳೆಯನ್ನು ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ.