ಅಂಕೋಲಾ: ಸಂಘಟನೆ ಹಾಗೂ ಯುವಕ ಸಂಘ ಇರೋದು ಕಾರ್ಯಕ್ರಮ ‌ಸಂಘಟಿಸೋಕೆ ಎಂದುಕೊಂಡವರಿಗಿಂತ ಸ್ವಲ್ಪ ವಿಭಿನ್ನವಾಗಿ ತಾಲೂಕಿನ ಲಕ್ಷ್ಮೇಶ್ವರದ ಚಿನ್ನದಗಿರಿ ಯುವಕ ಸಂಘ ಈ ಒಂದು ಮಹತ್ ಕಾರ್ಯ ನಡೆಸಿ ಇದೀಗ ಎಲ್ಲರ ಗಮನ ಸೆಳೆದಿದೆ.

ಈ ಸಂಘ ರಕ್ತದಾನ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರಿಗೆ ಗೌರವ ಸೂಚಿಸಿ ಸ್ವಯಂಪ್ರೇರಿತರಾಗಿ ಮುಂದೆ ಬಂದ ೫೦ ಜನರಿಂದ ರಕ್ತ ಸಂಗ್ರಹಿಸಿ ಶ್ರದ್ಧಾಂಜಲಿ ಸಲ್ಲಿಸಿದೆ.

RELATED ARTICLES  ಶಾಸಕ ಶಿವರಾಮ ಹೆಬ್ಬಾರ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ!

ಅಂಕೋಲಾ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ಇಂದು ಆಯೋಜಿಸಿದ್ದ ರಕ್ತದಾನ ಮತ್ತು ಜಾಗೃತಿ ಶಿಬಿರದಲ್ಲಿ ಸಾವಿರಾರು ಜನರಿಗೆ ರಕ್ತದಾನ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿತ್ತು. ಅಲ್ಲದೆ ಈ ಮೂಲಕ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

 ಅಂಕೋಲಾ ಪಿಎಸ್ ಐ ಎಸ್ ಶ್ರೀಧರ ಹಾಗೂ ಪೊಲೀಸ್ ಸಿಬ್ಬಂದಿ ಕೂಡ ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಿ ಮಾದರಿಯಾದರು. ಇದೇ ಸಂದರ್ಭದಲ್ಲಿ ಅಂಕೋಲಾದ ತಾಲ್ಲೂಕಾ ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಬ್ಲಡ್ ಬ್ಯಾಂಕ್ ಆರಂಭಕ್ಕೆ ಆಗ್ರಹಿಸಿ ಜನರಿಂದ ಸಹಿ ಸಂಗ್ರಹಿಸಲಾಯಿತು.