ಕುಮಟಾ: ಡಾ.ಎ.ವಿ.ಬಾಳಿಗಾ ಇಂಗ್ಲೀಷ್ ಪ್ರಾಥಮಿಕ ಶಾಲೆಯ 2019-20 ನೇ ವರ್ಷದ ಪ್ರವೇಶ ಪ್ರಕ್ರಿಯೆಯು ಎ.1ರಿಂದ ಆರಂಭವಾಗುತ್ತದೆ ಎಂದು ಕಾರ್ಯದರ್ಶಿ ವಿನೋದ ಪ್ರಭು ತಿಳಿಸಿದರು.77 ವಿದ್ಯಾರ್ಥಿಗಳು ಹಾಗೂ 3 ಶಿಕ್ಷಕರಿಂದ ಪ್ರಾರಂಭಗೊಂಡ ಈ ಶಾಲೆಯು ಈಗ 13 ಶಿಕ್ಷಕರು 341 ವಿದ್ಯಾರ್ಥಿಗಳನ್ನೊಳಗೊಂಡಿದ್ದು ದಿನೇ ದಿನೇ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು
ಶಾಲಾ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ, 1, 2, 3 ನೇ ತರಗತಿಯವರೆಗೆ ಪಾಠ ಮಾಡುತ್ತಿದ್ದು, ಹೆಚ್ಚೆಚ್ಚು ಮಕ್ಕಳು ನಮ್ಮ ಶಾಲೆಯತ್ತ ಆಕರ್ಷಿಸುತ್ತಿದ್ದಾರೆ.
ಗುಣಮಟ್ಟದ ಹಾಗೂ ಸಂಸ್ಕಾರ ನೀಡುವ ಶಿಕ್ಷಣವೂ ನಮ್ಮಲ್ಲಿ ದೊರೆಯುತ್ತಿದೆ. ಶಿಕ್ಷಕರು ಕೇವಲ ಪಾಠವನ್ನು ಮಾಡದೇ, ಮಕ್ಕಳ ಜೊತೆ ಪ್ರೀತಿಯಿಂದ ವರ್ತಿಸುತ್ತಾರೆ. ವಿದ್ಯಾರ್ಥಿಗಳು ಶಿಕ್ಷಕರನ್ನು ಪ್ರೀತಿಸುವಂತಾದರೆ ಮಕ್ಕಳು ಬಹುಬೇಗನೇ ಶಿಕ್ಷಣವನ್ನು ಕಲಿಯಬಹುದು. ನಮ್ಮ ಸಂಸ್ಥೆಯ ತರಗತಿಯ ಪ್ರವೇಶ ಆರಂಭವಾಗಲಿದ್ದು, ಆಸಕ್ತರು ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಅನಂತ ಶಾನಭಾಗ, ಮುಖ್ಯಾಧ್ಯಾಪಕಿ ಪ್ರೀತಿ ನರೋನ್ಹಾ ಹಾಜರಿದ್ದರು.