ಶಿರಸಿ:ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆಯಡಿ ತಿರಸ್ಕೃತವಾದ ಅರ್ಜಿದಾರರ ಅತಿಕ್ರಮಣವನ್ನು ಜುಲೈ 24ರೊಳಗೆ ತೆರವು ಮಾಡಿ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ ಇದು ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಯ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ಜಿಲ್ಲೆಯ 65 ಸಾವಿರ ಜನರಲ್ಲೀಗ ತೆರವಿನ ಭೀತಿ ಪ್ರಾರಂಭವಾಗಿದೆ.

ಅತಿಕ್ರಮಣ ತೆರವಾಗಿರುವ ಬಗೆಗೆ ಸೆಟಲೈಟ್ ನಕಾಶೆಯನ್ನು ತೆಗೆದು ಸಲ್ಲಿಸುವಂತೆ ಸರ್ವೆ ಆಫ್ ಇಂಡಿಯಾಗೆ ಸುಪ್ರೀಂ ಆದೇಶಿಸಿದೆ.

RELATED ARTICLES  ಚಿಟ್ಟಾಣಿ ನುಡಿನಮನ ಕಾರ್ಯಕ್ರಮ

ಜಿಲ್ಲೆಯಲ್ಲಿ ಒಟ್ಟು 87,640 ಅರ್ಜಿಗಳು ಸಲ್ಲಿಕೆಯಾಗಿದ್ದವು.

ಅದರಲ್ಲಿ ಪರಿಶಿಷ್ಟ ಪಂಗಡ- 3,569 ಅರ್ಜಿಗಳಿದ್ದವು , ಅದರಂತೆ ಸೂಕ್ತ ದಾಖಲೆಗಳಿಲ್ಲದ 2238 ಪರಿಶಿಷ್ಟ ಪಂಗಡದ ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ. ಸಲ್ಲಿಕೆಯಾಗಿದ್ದ ಇತರ ಪಾರಂಪರಿಕ ಅರಣ್ಯವಾಸಿಗಳ 80,683 ಅರ್ಜಿಗಳಲ್ಲಿ ಕೇವಲ 394 ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದೆ. 62,189 ಅರ್ಜಿಗಳನ್ನು ವಿವಿಧ ಹಂತಗಳಲ್ಲಿ ತಿರಸ್ಕರಿಸಲಾಗಿದೆ. 18100 ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. ಪರಿಶಿಷ್ಟರೂ ಸೇರಿ ಜಿಲ್ಲೆಯ ಒಟ್ಟಾರೆ 64,427 ಅರ್ಜಿದಾರರಿಗೆ ತೆರವಿನ ಆತಂಕ ಕಾಡಿದೆ.

RELATED ARTICLES  ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ತಡೆದ ಜನರು.

ಸಮುದಾಯ ಹಕ್ಕಿನಡಿ ಸಲ್ಲಿಕೆಯಾಗಿದ್ದ 3,388 ಅರ್ಜಿಗಳ ಪೈಕಿ 1,127 ಅರ್ಜಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಸಮರ್ಪಕ ದಾಖಲೆ ಇಲ್ಲದ 2,261 ಅರ್ಜಿಗಳು ತಿರಸ್ಕೃತವಾಗಿದ್ದು, ಶಾಲೆ, ಅಂಗನವಾಡಿಗಳಂತಹ ಕಟ್ಟಡಗಳನ್ನೂ ತೆರವು ಮಾಡಲಾಗುತ್ತದೆಯೇ ಎಂಬುದನ್ನು ಕಾದು ನೋಡ ಬೇಕಿದೆ.