ಕಾರವಾರ: ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ರಸ್ತೆ ಹಾಗೂ ಸೇತುವೆ ಅಭಿವೃದ್ದಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ಸತೀಶ್ ಸೈಲ್ ಹೇಳಿದರು.  ಮಂಗಳವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು,ಅಂಕೋಲಾ ತಾಲೂಕಿನ ಕೆಲ ಹಳ್ಳಿಗಳು ತಾಲೂಕು ಕೇಂದ್ರದಿಂದ 30-60 ಕಿ. ಮೀ. ದೂರದಲ್ಲಿದೆ. ಇಂತವರ ಅನುಕೂಲಕ್ಕಾಗಿ ಅಂಕೋಲಾದಲ್ಲಿ ಉಪ ನೋಂದಣಿ ಕಚೇರಿಯನ್ನು ಆರಂಭಿಸಲು ಅನುಮತಿ ದೊರೆತಿದೆ ಎಂದರು. ಅವರ್ಸಾದ ದಂಡೇಭಾಗ ರಸ್ತೆ ಸಂಪೂರ್ಣ ಹಾಳಾಗಿದ್ದು, ಇಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಮಾಡಬೇಕಿದೆ. ಈ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.ಕಾರವಾರದ ಉಳಗಾ-ಕೆರವಡಿ ಹಾಗೂ ಅಂಕೋಲಾ ತಾಲೂಕಿನಲ್ಲಿ ಮಂಜುಗುಣಿ ಸೇತುವೆ ನಿರ್ಮಾಣಕ್ಕೆ ಒಟ್ಟು  55 ಕೋಟಿ ರೂ ಮಂಜೂರಿಯಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು. ಉಳಗಾ-ಕೆರವಡಿ ಸೇತುವೆಗೆ 25 ಕೋಟಿ ಹಾಗೂ ಮಂಜಗುಣಿಯಲ್ಲಿ ಗಂಗಾವಳಿಗೆ ಸೇತುವೆಗೆ 30 ಕೋಟಿ ಮಂಜೂರಾಗಿದೆ ಎಂದರು. ಈ ಎರಡೂ ಸೇತುವೆಗೆ  ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.

RELATED ARTICLES  ಭಟ್ಕಳದಲ್ಲಿ ಅಕ್ರಮ ಚಟುವಟಿಕೆಗಳು ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ.